ಕಚೇರಿಯಲ್ಲೇ ಕೆಲಸದ ನಡುವೆ ಅಲ್ಪಾವಧಿಯ ಯೋಗ ಮಾಡಿ: ಸಿಬ್ಬಂದಿಗೆ ಕೇಂದ್ರ ಸರ್ಕಾರ ಸಲಹೆ
ಬಿಡುವಿಲ್ಲದ ಕೆಲಸದ ಮಧ್ಯೆ ಕಚೇರಿಯಿಂದ ಹೊರಹೋಗಿ ಯೋಗ ಮಾಡಲು ಸಾಧ್ಯವಾಗದ ಉದ್ಯೋಗಿಗಳಿಗೆ ತಾವಿದ್ದಲ್ಲಿಯೇ ಯೋಗ ಮಾಡುವ ಅವಕಾಶ ನೀಡುವ ಸಲುವಾಗಿ ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆ ಮತ್ತು ಆಯುಷ್ ಇಲಾಖೆಯು ತಜ್ಞರ ಅಭಿಪ್ರಾಯದ ಮೇರೆಗೆ ನೂತನ ಪರಿಕಲ್ಪನೆಯನ್ನು ಜಾರಿಗೆ ತಂದಿವೆ ಎಂದು ತಿಳಿಸಿದೆ.
ನವದೆಹಲಿ (ಜೂನ್ 14, 2023): ಕೇಂದ್ರ ಸರ್ಕಾರದ ಎಲ್ಲ ಇಲಾಖೆಗಳು ಮತ್ತು ಸಚಿವಾಲಯಗಳ ನೌಕರರು ಕೆಲಸದ ನಡುವೆ ಕಚೇರಿಯಲ್ಲೇ ಅಲ್ಪಾವಧಿಯ ಯೋಗ ಮಾಡಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ. ಒತ್ತಡ ನಿವಾರಣೆಗಾಗಿ ಹಾಗೂ ಉತ್ಸಾಹ ಭರಿತರಾಗಿರಲು ಆಫೀಸ್‌ನಲ್ಲೇ ಯೋಗ ಮಾಡಲು ‘ವೈ- ಬ್ರೇಕ್- ಆಫೀಸ್ ಚೇರ್‌ನಲ್ಲಿ ಯೋಗ’ ಎಂಬ ಹೊಸ ಪರಿಕಲ್ಪನೆ ಜಾರಿ ಮಾಡಲಾಗಿದ್ದು ಕಚೇರಿಯಲ್ಲೇ ‘ಪ್ರಾಣಾಯಾಮ, ಧ್ಯಾನ, ವಿವಿಧ ಆಸನ ಭಂಗಿಗಳನ್ನು ಮಾಡಿ’ ಎಂದು ತನ್ನ ಅಧೀನ ಸಂಸ್ಥೆಗಳಿಗೆ ಸರ್ಕಾರ ಆದೇಶಿಸಿದೆ.
ಈ ಪರಿಕಲ್ಪನೆಯನ್ನು ಪರಿಚಯಿಸಿರುವ ಆಯುಷ್ ಇಲಾಖೆಯು ‘ಕೆಲಸದ ನಡುವೆ ಒತ್ತಡವನ್ನು ಕಡಿಮೆ ಮಾಡಿ ಚೈತನ್ಯರಾಗಿರಲು ಯೋಗ ಉತ್ತೇಜನ ನೀಡುತ್ತದೆ. ಬಿಡುವಿಲ್ಲದ ಕೆಲಸದ ಮಧ್ಯೆ ಕಚೇರಿಯಿಂದ ಹೊರಹೋಗಿ ಯೋಗ ಮಾಡಲು ಸಾಧ್ಯವಾಗದ ಉದ್ಯೋಗಿಗಳಿಗೆ ತಾವಿದ್ದಲ್ಲಿಯೇ ಯೋಗ ಮಾಡುವ ಅವಕಾಶ ನೀಡುವ ಸಲುವಾಗಿ ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆ ಮತ್ತು ಆಯುಷ್ ಇಲಾಖೆಯು ತಜ್ಞರ ಅಭಿಪ್ರಾಯದ ಮೇರೆಗೆ ನೂತನ ಪರಿಕಲ್ಪನೆಯನ್ನು ಜಾರಿಗೆ ತಂದಿವೆ’ ಎಂದು ತಿಳಿಸಿದೆ.
ಇದನ್ನು ಓದಿ: ಹಿಂದೆ ನೇಮಕಾತಿಗೆ ಒಂದೂವರೆ ವರ್ಷ, ಈಗ ಕೆಲವೇ ತಿಂಗಳು: 70000 ಜನರಿಗೆ ಉದ್ಯೋಗ ಪತ್ರ ವಿತರಣೆ ವೇಳೆ ‘ಕೈ’ ವಿರುದ್ಧ ಮೋದಿ ಚಾಟಿ
ಜೂನ್ 21 ರಂದು ಅಂತಾರಾಷ್ಟ್ರೀಯ ಯೋಗ ದಿನ ಹತ್ತಿರವಾಗುತ್ತಿರುವ ನಡುವೆಯೇ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ ಸಚಿವಾಲಯವು ಎಲ್ಲಾ ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳಿಗೆ ಕರ್ತವ್ಯದ ಸಮಯದಲ್ಲಿ ತಮ್ಮನ್ನು ತಾವು ಸಡಿಲಗೊಳಿಸಬೇಕಾದ ಅಗತ್ಯವನ್ನು ಅನುಭವಿಸಿದಾಗ 'ವೈ-ಬ್ರೇಕ್' ತೆಗೆದುಕೊಳ್ಳುವಂತೆ ಆದೇಶವನ್ನು ರವಾನಿಸಿದೆ.
ಜೂನ್ 12 ರ ದಿನಾಂಕದ ತನ್ನ ಆದೇಶದಲ್ಲಿ, ಕೆಲಸದ ಸ್ಥಳಗಳಲ್ಲಿ ಮೊದಲ-ರೀತಿಯ 'ವೈ-ಬ್ರೇಕ್ ಅಟ್ ಆಫೀಸ್ ಚೇರ್ಸ್' ಪ್ರೋಟೋಕಾಲ್‌ನ ಸರಿಯಾದ ಅನುಷ್ಠಾನ ಮತ್ತು ಪ್ರಚಾರವನ್ನು ಖಚಿತಪಡಿಸಿಕೊಳ್ಳಲು ಸಚಿವಾಲಯವು ನಿರ್ದೇಶಿಸಿದೆ. ಕೆಲಸದ ಸ್ಥಳಗಳಲ್ಲಿ ವೈ-ಬ್ರೇಕ್ ಅನ್ನು ಆಯುಷ್ ಸಚಿವಾಲಯವು ಪರಿಚಯಿಸಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: IAS ಅಧಿಕಾರಿಯಾದ ರಿಕ್ಷಾ ಎಳೆಯುವವರ ಮಗ ಗೋವಿಂದ್ ಜೈಸ್ವಾಲ್: ಹೋರಾಟದ ಹಾದಿ ಹೀಗಿದೆ..
ಇನ್ನು, ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಜಾರಿಗೆ ತಂದ ಕೀರ್ತಿ ಪ್ರಧಾನಿ ಮೋದಿ ಅವರದ್ದು. ಈ ಬಾರಿ ಜೂನ್ 21 ರಿಂದ ಅಮೆರಿಕ ಪ್ರವಾಸದಲ್ಲಿರಲಿರೋ ಮೋದಿ ಅವರು ವಿಶ್ವಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಇದನ್ನೂ ಓದಿ: ಕೆಲಸದ ಒತ್ತಡವನ್ನು ಚಿಟಿಕೆಯಲ್ಲಿ ದೂರ ಮಾಡುತ್ತೆ Y – ಬ್ರೇಕ್