Asianet Suvarna News Asianet Suvarna News

ಭಾರತೀಯ ವಾಯುಪಡೆಯಲ್ಲಿ ಅಗ್ನಿವೀರ ಹುದ್ದೆಗೆ ನೇಮಕಾತಿ, ಸೇನೆ ಸೇರ ಬಯಸುವವರು ಇಂದೇ ಅರ್ಜಿ ಸಲ್ಲಿಸಿ

''ಅಗ್ನಿಪತ್‌ ಯೋಜನೆ'' ಅಡಿಯಲ್ಲಿ ನಾಲ್ಕು ವರ್ಷಗಳ ಅವಧಿಗೆ ಭಾರತೀಯ ವಾಯುಪಡೆಯು ಅವಿವಾಹಿತ ಭಾರತೀಯ ಪುರುಷ ಮತ್ತು ಮಹಿಳೆಯರಿಗೆ ಅಗ್ನಿವೀರ ವಾಯುಪಡೆ ಸೇರ್ಪಡೆಗಾಗಿ ಅರ್ಜಿ ಆಹ್ವಾನಿಸಿದ್ದು, ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಫೆಬ್ರುವರಿ 6 ಕೊನೆಯ ದಿನ.

Agneepath Recruitment in Indian Air Force for Firefighters Posts gow
Author
First Published Jan 31, 2024, 3:30 PM IST

''ಅಗ್ನಿಪತ್‌ ಯೋಜನೆ'' ಅಡಿಯಲ್ಲಿ ನಾಲ್ಕು ವರ್ಷಗಳ ಅವಧಿಗೆ ಭಾರತೀಯ ವಾಯುಪಡೆಯು ಅವಿವಾಹಿತ ಭಾರತೀಯ ಪುರುಷ ಮತ್ತು ಮಹಿಳೆಯರಿಗೆ ಅಗ್ನಿವೀರ ವಾಯುಪಡೆ ಸೇರ್ಪಡೆಗಾಗಿ ಅರ್ಜಿಯನ್ನು ಆಹ್ವಾನಿಸಿದ್ದು, ಅರ್ಹ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು. ಆನ್‌ಲೈನ್‌ ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಫೆಬ್ರವರಿ 6, 2024

ಹಂತ - 1 ರ ಆನ್‌ಲೈನ್‌ ಪರೀಕ್ಷೆಯ ದಿನಾಂಕ: 17-03-2024

ಪರೀಕ್ಷಾಶುಲ್ಕ 550 ರು.

ವಯಸ್ಸಿನ ಮಿತಿ: ಅಭ್ಯರ್ಥಿಗಳು 02 ಜನವರಿ 2004 ರಿಂದ 02 ಜುಲೈ 2007 ರ ದಿನಾಂಕದ ಒಳಗೆ ಜನಿಸಿರಬೇಕು

ಶೈಕ್ಷಣಿಕ ಅರ್ಹತೆ: ಅ. ವಿಜ್ಞಾನ ವಿಷಯದ ಅಭ್ಯರ್ಥಿಗಳಿಗೆ: ಅಭ್ಯರ್ಥಿಗಳು ಮಾನ್ಯತೆ ಪಡೆದ ಶಿಕ್ಷಣ ಮಂಡಳಿಯಿಂದ ಗಣಿತ, ಭೌತಶಾಸ್ತ್ರ ಮತ್ತು ಇಂಗ್ಲಿಷ್‌ ವಿಷಯದಲ್ಲಿ ದ್ವೀತಿಯ ಪಿಯುಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಒಟ್ಟಾರೆಯಾಗಿ ಕನಿಷ್ಠ ಶೇಕಡಾ 50 ಅಂಕಗಳೊಂದಿಗೆ ಮತ್ತು ಇಂಗ್ಲಿಷ್ ನಲ್ಲಿ ಶೇಕಡಾ 50 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು ಅಥವಾ ಅಭ್ಯರ್ಥಿಗಳು ಮೆಕ್ಯಾನಿಕಲ್ / ಎಲೆಕ್ಟ್ರಿಕಲ್ / ಎಲೆಕ್ಟ್ರಾನಿಕ್ಸ್ / ಆಟೋಮೊಬೈಲ್ / ಕಂಪ್ಯೂಟರ್‌ ಸೈನ್ಸ್‌ /ಇನ್ಸ್ಟ್ರಮೆಂಟೇಶನ್‌ ಟೆಕ್ನಾಲಜಿ / ಮಾಹಿತಿ ತಂತ್ರಜ್ಞಾನ ಎಂಜಿನಿಯರಿಂಗ್‌ ನಲ್ಲಿ ಮೂರು ವರ್ಷಗಳ ಡಿಪ್ಲೊಮಾ ಕೋರ್ಸ್‌ ಕನಿಷ್ಠ ಶೇಕಡಾ 50 ಅಂಕಗಳೊಂದಿಗೆ ಮತ್ತು ಇಂಗ್ಲಿಷ್‌ ನಲ್ಲಿ ಶೇಕಡಾ 50 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು ಅಥವಾ ಅಭ್ಯರ್ಥಿಗಳು ವೊಕೇಶನಲ್‌ ಕೋರ್ಸ್‌ನಲ್ಲಿ ವೃತ್ತಿಪರವಲ್ಲದ ವಿಷಯಗಳಾದ ಭೌತಶಾಸ್ತ್ರ ಮತ್ತು ಗಣಿತದಲ್ಲಿ ಕನಿಷ್ಠ ಶೇಕಡಾ 50 ಅಂಕಗಳೊಂದಿಗೆ ಮತ್ತು ಇಂಗ್ಲಿಷ್‌ ನಲ್ಲಿ ಶೇಕಡಾ 50 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.

ಬಿ. ವಿಜ್ಞಾನ ವಿಷಯಗಳ ಹೊರತಾದ ಅಭ್ಯರ್ಥಿಗಳಿಗೆ: ಅಭ್ಯರ್ಥಿಗಳು ಕೇಂದ್ರ, ರಾಜ್ಯ ಮತ್ತು ಕೇಂದ್ರಾಡಳಿತ ಸಂಸ್ಥೆಗಳಿಂದ ಗುರುತಿಸಲ್ಪಟ್ಟ ಶಿಕ್ಷಣ ಮಂಡಳಿಗಳಿಂದ ಯಾವುದೇ ಸ್ಟ್ರೀಮ್ / ವಿಷಯಗಳಲ್ಲಿ ದ್ವೀತಿಯ ಪಿಯುಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಕನಿಷ್ಠ ಶೇಕಡಾ 50 ಅಂಕಗಳೊಂದಿಗೆ ಮತ್ತು ಇಂಗ್ಲಿಷ್‌ ನಲ್ಲಿ ಶೇಕಡಾ 50 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು ಅಥವಾ ಅಭ್ಯರ್ಥಿಗಳು ಎರಡು ವರ್ಷಗಳ ವೊಕೇಶನಲ್‌ ಕೋರ್ಸ್‌ ನಲ್ಲಿ ಕನಿಷ್ಠ ಶೇಕಡಾ 50 ಅಂಕಗಳೊಂದಿಗೆ ಮತ್ತು ಇಂಗ್ಲಿಷ್‌ ನಲ್ಲಿ ಶೇಕಡಾ 50 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.

ಕಡ್ಡಾಯ ವೈದ್ಯಕೀಯ ಮಾನದಂಡಗಳು

ಅಗ್ನಿವೀರ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಸಾಮಾನ್ಯ ವೈದ್ಯಕೀಯ ಮಾನದಂಡಗಳು ಕೆಳ ಕಂಡಂತಿವೆ.

ಎ. ಎತ್ತರ:

1. ಪುರುಷ ಅಭ್ಯರ್ಥಿಗಳಿಗೆ : ಕನಿಷ್ಠ 152.5 ಸೆಂ ಎತ್ತರ ಇರಬೇಕು.

2. ಮಹಿಳಾ ಅಭ್ಯರ್ಥಿಗಳಿಗೆ : ಕನಿಷ್ಠ 152 ಸೆಂ. ಎತ್ತರ ಇರಬೇಕು.

ಬಿ. ಎದೆಯ ಸುತ್ತಳತೆ:

1. ಪುರುಷ ಅಭ್ಯರ್ಥಿಗಳು ಕನಿಷ್ಠ 77 ಸೆಂ ಎದೆಯ ಸುತ್ತಳತೆ ಮತ್ತು ಎದೆಯ ವಿಸ್ತರಣೆಯು ಕನಿಷ್ಠ 05 ಸೆಂ. ಮೀ ಆಗಿರಬೇಕು.

2. ಮಹಿಳಾ ಅಭ್ಯರ್ಥಿಗಳು ಎದೆಯ ಸುತ್ತಳತೆಯ ಆಧಾರದಕ್ಕೆಅನುಗುಣವಾಗಿ ಎದೆಯ ವಿಸ್ತರಣೆಯು ಕನಿಷ್ಠ 05 ಸೆಂ.ಮೀ ಆಗಿರಬೇಕು.

ಸೇವಾ ನಿಧಿ ಪ್ಯಾಕೇಜ್

''ಅಗ್ನಿಪತ್‌ ಯೋಜನೆ'' ಅಡಿಯಲ್ಲಿ ಆಯ್ಕೆಯಾದ ಅಗ್ನಿವೀರ ಅಭ್ಯರ್ಥಿಗಳಿಗೆ ೪ ವರ್ಷದ ಅವಧಿಗೆ ಸೇವಾ ನಿಧಿ ಪ್ಯಾಕೇಜ್‌ ನೀಡಲಾಗುತ್ತಿದ್ದು, ಮಾಸಿಕ ವೇತನದ ವಿವರ ಹೀಗಿದೆ:

* ಮೊದಲ ವರ್ಷ - 30,000

* ಎರಡನೇಯ ವರ್ಷ - 33,000

* ಮೂರನೇಯ ವರ್ಷ - 36,500

* ನಾಲ್ಕನೇಯ ವರ್ಷ - 40,000

ಪರೀಕ್ಷಾ ವಿಧಾನ

ಅ. ವಿಜ್ಞಾನ ವಿಷಯದ ಅಭ್ಯರ್ಥಿಗಳಿಗೆ : ಆನ್‌ಲೈನ್‌ ಪರೀಕ್ಷೆಯು ಭೌತಶಾಸ್ತ್ರ, ಗಣಿತ ಮತ್ತು ಸಿಬಿಎಸ್ಇ ಪಠ್ಯಕ್ರಮದ ಪ್ರಕಾರ ಇಂಗ್ಲಿಷ್‌ ವಿಷಯದ ಮೇಲೆ 60 ನಿಮಿಷಗಳ ಅವಧಿಗೆ ಪರೀಕ್ಷೆ ನಡೆಸಲಾಗುತ್ತದೆ.

ಬಿ. ವಿಜ್ಞಾನ ವಿಷಯಗಳ ಹೊರತಾದ ಅಭ್ಯರ್ಥಿಗಳಿಗೆ : ಆನ್‌ಲೈನ್‌ ಪರೀಕ್ಷೆಯು ಸಿಬಿಎಸ್ಇ ಪಠ್ಯಕ್ರಮದ ಪ್ರಕಾರ ಇಂಗ್ಲಿಷ್‌, ಮತ್ತು ರೀಸನಿಂಗ್ ಮತ್ತು ಜನರಲ್‌ ಅವೇರ್‌ನೆಸ್‌ ವಿಷಯದ ಕುರಿತಂತೆ 45 ನಿಮಿಷಗಳ ಅವಧಿಗೆ ಪರೀಕ್ಷೆ ನಡೆಸಲಾಗುತ್ತದೆ.

ಸೂಚನೆ: ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕಗಳನ್ನು ಕಡಿತಗೊಳಿಸಲಾಗುತ್ತದೆ.

ದೈಹಿಕ ಸಾಮರ್ಥ್ಯ ಪರೀಕ್ಷೆ

1. ಪುರುಷ ಅಭ್ಯರ್ಥಿಗಳು 07 ನಿಮಿಷಗಳಲ್ಲಿ 1.6 ಕಿಮೀ ಓಟವನ್ನು ಪೂರ್ಣಗೊಳಿಸಬೇಕು.

2. ಮಹಿಳಾ ಅಭ್ಯರ್ಥಿಗಳು 08 ನಿಮಿಷಗಳಲ್ಲಿ 1.6 ಕಿ.ಮೀ ಓಟವನ್ನು ಪೂರ್ಣಗೊಳಿಸಬೇಕು.

ಆಯ್ಕೆ ವಿಧಾನ

ಅಭ್ಯರ್ಥಿಗಳ ಆನ್ ಲೈನ್‌ ಪರೀಕ್ಷೆ ಹಾಗೂ ದೈಹಿಕ ಸಾಮರ್ಥ್ಯ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಸಿದ್ಧಪಡಿಸಿ 11 ನವೆಂಬರ್ 2024 ರಂದು ವೆಬ್‌ ಪೋರ್ಟ್‌ಲ್‌ ನಲ್ಲಿ ಪ್ರಕಟಿಸಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ: https://agnipathvayu.cdac.in

Follow Us:
Download App:
  • android
  • ios