* ಕೋವಿಡ್‌-19ನಲ್ಲೂ ಭಾರತದ ಮಾರುಕಟ್ಟೆಯಲ್ಲಿ ಎಸ್‌ಯುವಿಗಳ ಅಬ್ಬರ* ಹೆಚ್ಚು ಶೋಧಿಸಲ್ಪಟ್ಟ ಎಸ್‌ಯುವಿಗಳಲ್ಲಿ ಕಿಯಾ ಸೆಲ್ಟೋಸ್ ಪ್ರಮುಖ* ಮಹೀಂದ್ರಾ ಥಾರ್‌, ಟಾಟಾ ನೆಕ್ಸಾನ್‌ಗೂ ಭಾರಿ ಬೇಡಿಕೆ

ದೇಶಾದ್ಯಂತ ಮಾತ್ರವಲ್ಲ ಜಗತ್ತಿನಾದ್ಯಂತ ಕೂಡ 2021ನೇ ವರ್ಷ ದುರದೃಷ್ಟಕರವಾಗಿತ್ತು. ಎಲ್ಲಾ ದೇಶಗಳು ಕೋವಿಡ್‌-19 ಸಾಂಕ್ರಾಮಿಕದಿಂದ ಸಂಕಷ್ಟಕ್ಕೆ ಸಿಲುಕಿದ್ದವು. ಆದರೂ, 2021ನೇ ವರ್ಷ ಭಾರತೀಯ ಆಟೊಮೊಬೈಲ್‌ ವಲಯ ಮಾತ್ರ ಸಕ್ರಿಯವಾಗಿಯೇ ಇತ್ತು. ಇದೊಂದು ವರ್ಷದಲ್ಲಿ ಆಟೊಮೊಬೈಲ್‌ ಕ್ಷೇತ್ರದ ಹಲವು ವಲಯದಲ್ಲಿ ಹೊಸ ವಾಹನಗಳು ಬಿಡುಗಡೆಯಾಗಿವೆ.

ಸದ್ಯ ಎಸ್‌ಯುವಿಗಳತ್ತ ಗ್ರಾಹಕರು ಹೆಚ್ಚಿನ ಆಸಕ್ತಿ ತೋರುತ್ತಿರುವ ಹಿನ್ನೆಲೆಯಲ್ಲಿ, ಆಟೊಮೊಬೈಲ್‌ ವಲಯದಲ್ಲಿ ಚಿಪ್‌ ಕೊರತೆ ಮತ್ತು ಕೋವಿಡ್‌-19 ಎರಡನೇ ಅಲೆಯ ನಡುವೆ ಅನೇಕ ಕಾರು ತಯಾರಕ ಕಂಪನಿಗಳು ಭಾರತೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಎಸ್‌ಯುವಿಗಳನ್ನು ಬಿಡುಗಡೆಗೊಳಿಸಿದೆ. ಕಳೆದೊಂದು ಸಾಲಿನಲ್ಲಿ ಗೂಗಲ್‌ನಲ್ಲಿ ಜನರು ಶೋಧಿಸಿದ ಟಾಪ್‌ ಐದು ಎಸ್‌ಯುವಿಗಳ ವಿವರ ಇಲ್ಲಿದೆ.

Yezdi Roadking return ಬೈಕ್ ಪ್ರಿಯರ ಹೊಸ ವರ್ಷದ ಸಂಭ್ರಮ ಡಬಲ್, ಜ.13ಕ್ಕೆ ಐತಿಹಾಸಿಕ ಯೆಜ್ಡಿ ರೋಡ್‌ಕಿಂಗ್ ಅನಾವರಣ!

  1. ಕಿಯಾ ಸೆಲ್ಟೋಸ್‌:ಕಿಯಾ ಸೆಲ್ಟೋಸ್‌ (Kia Seltos) ಎಸ್‌ಯುವಿಯನ್ನು ಜನರು 2021 ರಲ್ಲಿ ಗೂಗಲ್‌ (Google)ನಲ್ಲಿ ಸರಾಸರಿ 8.2 ಲಕ್ಷ ಬಾರಿ ಶೋಧಿಸಿದ್ದಾರೆ. ಇದರಿಂದ ಇದು ಒಟ್ಟು ಶೋಧದ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇದು 2019 ರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಮೊದಲ ಬ್ರ್ಯಾಂಡ್‌ ಆಗಿದೆ. ಇದು ಪ್ರಸ್ತುತ ಭಾರತದಲ್ಲಿ ಹೆಚ್ಚು ಮಾರಾಟವಾಗುವ ಕಾಂಪ್ಯಾಕ್ಟ್ SUV ಗಳಲ್ಲಿ ಒಂದಾಗಿದೆ. ದಕ್ಷಿಣ ಕೊರಿಯಾ ಮೂಲದ ಕಿಯಾ ಮೋಟಾರ್ಸ್‌ ಈ ವರ್ಷದ ಆರಂಭದಲ್ಲಿ ಹೊಸ ಲೋಗೋವನ್ನು ಒಳಗೊಂಡಿರುವ ಸೆಲ್ಟೋಸ್‌ನ ರಿಫ್ರೆಶ್ ಮಾಡೆಲ್ ಅನ್ನು ಭಾರತೀಯ ಕಾರು ಮಾರುಕಟ್ಟೆಯಲ್ಲಿ ಪರಿಚಯಿಸಿದರು. SUV ಮೂರು ಎಂಜಿನ್‌ಗಳ ಆಯ್ಕೆಯೊಂದಿಗೆ ಬರುತ್ತದೆ. ಅವುಗಳೆಂದರೆ, 1.5-ಲೀಟರ್ ಸ್ಮಾರ್ಟ್‌ಸ್ಟ್ರೀಮ್ ಪೆಟ್ರೋಲ್, 1.4-ಲೀಟರ್ ಟಿ-ಜಿಡಿಐ (T-GDI) ಟರ್ಬೋಚಾರ್ಜ್ಡ್ ಪೆಟ್ರೋಲ್ ಮತ್ತು 1.5-ಲೀಟರ್ ಸಿಆರ್‌ಡಿಐ ವಿಜಿಟಿ (CRDi VGT) ಡೀಸೆಲ್ ಎಂಜಿನ್ ಮಾದರಿಗಳಾಗಿವೆ.
  1. ಮಹೀಂದ್ರ ಥಾರ್‌:ಹೊಸ ತಲೆಮಾರಿನ ಮಹೀಂದ್ರ ಥಾರ್ ಈ ವರ್ಷ ಗೂಗಲ್‌ನಲ್ಲಿ ಸರಾಸರಿ ಮಾಸಿಕ 6.7 ಲಕ್ಷ ಹುಡುಕಾಟ ಪಡೆದುಕೊಂಡಿದ್ದು, ಎರಡನೇ ಅತಿ ಹೆಚ್ಚು ಶೋಧಿಸಲ್ಪಟ್ಟ SUV ಆಗಿದೆ. ಮಹೀಂದ್ರ ಥಾರ್‌ ಆಫ್ ರೋಡರ್‌ ಮಾರುಕಟ್ಟೆಗೆ ಬಂದು ಒಂದು ವರ್ಷ ಕಳೆದಿದೆ. ಸೆಮಿಕಂಡಕ್ಟರ್ ಕೊರತೆ ಮತ್ತು ದೀರ್ಘ ವೇಯ್ಟಿಂಗ್‌ ಸಮಯದ ಹೊರತಾಗಿಯೂ, ಥಾರ್‌ನ ಜನಪ್ರಿಯತೆಯು ಬೆಳೆಯುತ್ತಲೇ ಇದೆ. ಮಹೀಂದ್ರಾ ಥಾರ್ ಎರಡು ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ. ಅವುಗಳೆಂದರೆ, 2.0-ಲೀಟರ್ ಎಂಸ್ಟಾಲಿನ್ 150 ಟಿಜಿಡಿಐ (TGDI) ಪೆಟ್ರೋಲ್ ಮತ್ತು 2.2-ಲೀಟರ್ ಎಂಹಾಕ್‌(mHawk) 130 ಡೀಸೆಲ್ ಮಾದರಿಗಳಾಗಿವೆ.

3.ಟಾಟಾ ನೆಕ್ಸಾನ್ : ದೇಶೀಯ ಕಾರು ಟಾಟಾ ನೆಕ್ಸಾನ್ ಅತಿ ಹೆಚ್ಚು ಗ್ರಾಹಕರ ಮೆಚ್ಚುಗೆ ಗಳಿಸಿದ ವಾಹನವಾಗಿದೆ. ಇದು ಸಬ್‌ಕಾಂಪ್ಯಾಕ್ಟ್ ಎಸ್‌ಯುವಿ (SUV) ವಲಯದಲ್ಲಿ ಸಾಕಷ್ಟು ಹೆಸರು ಮಾಡಿದೆ. ಈ ವರ್ಷ ಭಾರತದಲ್ಲಿ ಗೂಗಲ್‌ನಲ್ಲಿ ಅತಿ ಹೆಚ್ಚು ಹುಡುಕಿದ ಮೂರನೇ ಎಸ್‌ಯುವಿ ಇದಾಗಿದೆ. SUV ಗ್ಲೋಬಲ್ ಎನ್‌ಕ್ಯಾಫ್‌ (NCAP) ನಿಂದ 5-ಸ್ಟಾರ್ ಸುರಕ್ಷತಾ ರೇಟಿಂಗ್‌ ಪಡೆದುಕೊಂಡಿದೆ. ಸಬ್‌ಕಾಂಪ್ಯಾಕ್ಟ್ SUV ಪೆಟ್ರೋಲ್ ಮತ್ತು ಡೀಸೆಲ್ ಆಯ್ಕೆಗಳಲ್ಲಿ ಲಭ್ಯವಿದೆ - 1.2-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್.

4. ಕಿಯಾ ಸೋನೆಟ್‌ : 2021 ರಲ್ಲಿ 6.7 ಲಕ್ಷಕ್ಕೂ ಹೆಚ್ಚು ಸರಾಸರಿ ಮಾಸಿಕ ಶೋಧನೆಯೊಂದಿಗೆ ಕಿಯಾ ಸೋನೆಟ್‌ ನಾಲ್ಕನೇ ಸ್ಥಾನದಲ್ಲಿದೆ. ಇದರ ಪರಿಷ್ಕೃತ ಮಾದರಿ ಎಸ್‌ಯುವಿ ವಲಯದಲ್ಲಿ ಭಾರಿ ಬೇಡಿಕೆ ಪಡೆದುಕೊಂಡಿದೆ. ಕಂಪನಿಯು ಸಬ್‌ಕಾಂಪ್ಯಾಕ್ಟ್ SUV ಅನ್ನು ಮೂರು ಪವರ್‌ಟ್ರೇನ್ ಆಯ್ಕೆಗಳಲ್ಲಿ ಲಭ್ಯವಿವೆ - 1.2 ಸ್ಮಾರ್ಟ್‌ಸ್ಟ್ರೀಮ್, 1.0-ಲೀಟರ್ ಟರ್ಬೋಚಾರ್ಜ್ಡ್ ಟಿ-ಜಿಡಿಐ(T-GDI) ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್.

5. ಟಾಟಾ ಪಂಚ್‌ : ಟಾಟಾ ಮೋಟಾರ್ಸ್‌ನ ಮಹತ್ವಾಕಾಂಕ್ಷೆಯ ಟಾಟಾ ಪಮಚ್‌, ಮೈಕ್ರೋ ಎಸ್‌ಯುವಿ 2021 ರಲ್ಲಿ ಗೂಗಲ್‌ನಲ್ಲಿ ಐದನೇ ಹೆಚ್ಚು-ಶೋಧಿಸಲ್ಪಟ್ಟ ಎಸ್‌ಯುವಿಯಾಗಿದೆ. ಟಾಟಾ ಪಂಚ್ ಇತರ ಟಾಟಾ ಕಾರ್‌ಗಳಿಗಿಂತ ಹೆಚ್ಚಿನ ಬುಕಿಂಗ್‌ಗಳನ್ನು ಗಳಿಸಿದೆ. ಪವರ್ 1.2-ಲೀಟರ್ ರೆವೊಟ್ರಾನ್ ಪೆಟ್ರೋಲ್ ಎಂಜಿನ್‌ನಿಂದ ಬರುತ್ತದೆ, ಅದು 5-ಸ್ಪೀಡ್ ಮ್ಯಾನುವಲ್ ಮತ್ತು ಐಚ್ಛಿಕ ಎಎಂಟಿ(AMT) ಯುನಿಟ್‌ ಒಳಗೊಂಡಿದೆ.