Boom Corbett eBike 36 ಸಾವಿರ ಬುಕಿಂಗ್; ಜನವರಿಯಿಂದ ವಿತರಣೆ ಆರಂಭ!

  • ಕೊಯಂಬತೂರ್‌ ಮೂಲದ ಕಂಪನಿಯ ಹೈಟೆಕ್‌ ಇವಿ ಬ್ರ್ಯಾಂಡ್‌
  • 36 ಸಾವಿರ ಬುಕಿಂಗ್‌ ಪಡೆದ ಸ್ಕೂಟರ್
  • 2022ರ ಜನವರಿಯಿಂದ ಡೀಲರ್‌ ತಲುಪಲಿರುವ ಸ್ಕೂಟರ್
Boom Corbett EV crosses 36000 bookings Launch In January 2022

Auto Desk: ಕೊಯಂಬತ್ತೂರು ಮೂಲದ ಹೈಟೆಕ್ ಇವಿ ಬ್ರ್ಯಾಂಡ್ ಬೂಮ್ ಮೋಟಾರ್ಸ್ (Boom Motors), ಇತ್ತೀಚೆಗಷ್ಟೇ 36 ಸಾವಿರ ಬುಕಿಂಗ್ ಪಡೆದುಕೊಂಡಿರುವುದಾಗಿ ಘೋಷಿಸಿದೆ. ಈ ಬೈಕುಗಳು 2022ರ ಜನವರಿ ವೇಳೆಗೆ ಡೀಲರ್ ಬಳಿ ತಲುಪಲಿದೆ ಎಂದು ಕಂಪನಿ ಮಾಹಿತಿ ನೀಡಿದೆ. ಬದಲಿಸಬಹದಾದ ಬ್ಯಾಟರಿ ಪ್ಯಾಕ್ (Battery pack), ಕಾರ್ಬೆಟ್ (Corbett) ದೇಶಾದ್ಯಂತದ ಇವಿ ಆಸಕ್ತ ಜನರಿಂದ ಭಾರಿ ಪ್ರಮಾಣದ ಮೆಚ್ಚುಗೆ ವ್ಯಕ್ತವಾಗಿದೆ. ಜೊತೆಗೆ, ಬೂಮ್ ಮೋಟಾರ್ಸ್ ದೇಶಾದ್ಯಂತ 60ಕ್ಕೂ ಹೆಚ್ಚು ಡೀಲರ್ಗಳ ಮೂಲಕ ತಮ್ಮ ವಾಹನಗಳ ಮಾರಾಟಕ್ಕೆ ಮುಂದಾಗಿದೆ. 2022ರ ಅಂತ್ಯದ ವೇಳೆ ಇದಕ್ಕೆ 250 ಡೀಲರ್ಗಳಿಗೆ ಹೆಚ್ಚಿಸಲು ಯೋಜನೆ ರೂಪಿಸಿದೆ.

ಕೊಯಂಬತ್ತೂರಿನಲ್ಲಿ ತನ್ನ ಉತ್ಪಾದನಾ ಘಟಕವನ್ನು ವಿಸ್ತರಿಸುವ ಮೂಲಕ ಮುಂದಿನ ಒಂದು ವರ್ಷದಲ್ಲಿ ಕಂಪನಿಯು ಒಂದು ಲಕ್ಷ ವಾಹನಗಳ ಮಾರಾಟವನ್ನು ಮೀರುವ ಗುರಿ ಹೊಂದಿದೆ ಎಂದು ಬೂಮ್ ಮೋಟಾರ್ಸ್ನ ಪ್ರತಿನಿಧಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಪ್ರಸ್ತುತ, ಇದು ವರ್ಷಕ್ಕೆ 1 ಲಕ್ಷ ಬೈಕ್ಗಳನ್ನು ತಯಾರಿಸುವ ಸಾಮರ್ಥ್ಯ ಹೊಂದಿದೆ.

400 ಕೋಟಿ ರೂ.ಗಳಿಗೂ ಮೀರಿದ ವಹಿವಾಟು

ಕಾರ್ಬೆಟ್ ಯಶಸ್ಸಿನೊಂದಿಗೆ ಕಂಪನಿಯು 400 ಕೋಟಿ ರೂ.ಗಳಿಗೂ ಮೀರಿದ ವಹಿವಾಟು ನಡೆಸಿದೆ. ಇವಿ ಸ್ಟಾರ್ಟಪ್ (EV Startup) ಕಂಪನಿಗೆ ಇದು ಬಹುದೊಡ್ಡ ಮೈಲಿಗಲ್ಲಾಗಿದೆ. ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ಸಂತಸ ವ್ಯಕ್ತಪಡಿಸಿರುವ ಕಂಪನಿಯ ಸಿಇಒ ಮತ್ತು ಸಹ-ಸಂಸ್ಥಾಪಕ ಅನಿರುತ್ ರವಿ ನಾರಾಯಣನ್,  “ಬೂಮ್ ಕಾರ್ಬೆಟ್ಗೆ ಬಂದ ಪ್ರತಿಕ್ರಿಯೆಯಿಂದ ನಾವು ಅತ್ಯಂತ ಸಂತಸಗೊಂಡಿದ್ದೇವೆ. ಇದು ಗ್ರಾಹಕರ ಆದ್ಯತೆಯು ಎಲೆಕ್ಟ್ರಿಕ್ ವಾಹನಗಳಿಗೆ ಬದಲಾಗುತ್ತಿರುವ ಸ್ಪಷ್ಟ ಸೂಚನೆಯಾಗಿದೆ” ಎಂದಿದ್ದಾರೆ.

“ಕಂಪನಿ  ಸುಸ್ಥಿರ ಚಲನಶೀಲತೆಯನ್ನು ಒದಗಿಸುವ ಗುರಿ ಹೊಂದಿದೆ. ಜನರು ನಮ್ಮ ಉತ್ಪನ್ನದಲ್ಲಿ ಮತ್ತು ಕಂಪನಿಯ ದೃಷ್ಟಿಯಲ್ಲಿ ಅಪಾರ ನಂಬಿಕೆ ತೋರಿಸಿದ್ದಾರೆ. ಈಗ ಗ್ರಾಹಕರಿಗೆ ಸಾಧ್ಯವಾದಷ್ಟು ಬೇಗ ಈ ವಾಹನಗಳನ್ನು ತಲುಪಿಸಲು ದುಪ್ಪಟ್ಟು ಶ್ರಮಿಸಲು ನಾವು ಬದ್ಧರಾಗಿದ್ದೇವೆ” ಎಂದರು.

ಎರಡು ವೇರಿಯಂಟ್ಗಳಲ್ಲಿ ಕಾರ್ಬೆಟ್!

ಕಾರ್ಬೆಟ್ ಒಂದು ದೀರ್ಘಕಾಲ ಬಾಳಿಕೆ ಬರುವ ಬೈಕ್ ಆಗಿದ್ದು, ಕಾರ್ಬೆಟ್ 14 ಮತ್ತು 14- ಎಕ್ಸ್ (EX)  ಎಂಬ ಎರಡು ವೇರಿಯಂಟ್ಗಳಲ್ಲಿ ದೊರೆಯಲಿದೆ. ಈ ಬೈಕ್ 2.3 ಕೆಡಬ್ಲ್ಯುಎಚ್ (kWh) ಬ್ಯಾಟರಿ ಒಳಗೊಂಡಿರುತ್ತದೆ, ಇದನ್ನು ಬಯಸಿದಲ್ಲಿ 4.6 ಕೆಡಬ್ಲ್ಯುಎಚ್ಗೆ ಹೆಚ್ಚಿಸಬಹುದು. ಇದು ಒಂದು ಬಾರಿ ಚಾರ್ಜ್ ಮಾಡಿದರೆ 200 ಕಿಲೋಮೀಟರ್ಗಳವರೆಗೆ ಚಲಿಸಬಲ್ಲದು.

ಇದು ಬದಲಿಸಬಲ್ಲ ಬ್ಯಾಟರಿ ಮತ್ತು ಪೋರ್ಟಬಲ್ ಚಾರ್ಜರ್ನೊಂದಿಗೆ ಬರುತ್ತವೆ, ಅದು ಯಾವುದೇ ಮನೆಯ ಸಾಕೆಟ್ಗೆ ಪ್ಲಗ್ ಮಾಡಬಹುದಾಗಿದ್ದು, ಸುಮಾರು 2.5 ರಿಂದ 4 ಗಂಟೆಗಳಲ್ಲಿ ಸಂಪೂರ್ಣ ಚಾರ್ಜ್ ಆಗುತ್ತದೆ.ಕಾರ್ಬೆಟ್ 14 ಗಂಟೆಗೆ 65 ಕಿಮೀ ವೇಗದ ನೀಡುತ್ತದೆ. ಆದರೆ 14-ಇಎಕ್ಸ್ ಗಂಟೆಗೆ 75 ಕಿಮೀ ತಲುಪಬಲ್ಲದು. ಬೈಕ್ ಗರಿಷ್ಠ 200 ಕೆಜಿ ಭಾರವನ್ನು ನಿಭಾಯಿಸಬಲ್ಲದು ಮತ್ತು ಕಡಿದಾದ ಇಳಿಜಾರು ರಸ್ತೆಗಳಲ್ಲಿ ಕೂಡ ಆರಾಮಾಗಿ ಚಲಿಸಬಲ್ಲದು.. ಹೈ-ಟೆನ್ಸೈಲ್ ಸ್ಟೀಲ್ನಿಂದ ಮಾಡಿದ ಎಕ್ಸೋ-ಸ್ಕೆಲಿಟಲ್ ಡಬಲ್-ಕ್ರೇಡಲ್ ಚಾಸಿಸ್ನೊಂದಿಗೆ ಬೈಕ್ ಅನ್ನು ಬಾಳಿಕೆ ಬರುವಂತೆ ನಿರ್ಮಿಸಲಾಗಿದೆ.

ಪೇರೆಂಟ್ ಮೋಡ್‌ ಜತೆಗೆ ಹಲವು ವೈಶಿಷ್ಟ್ಯಗಳು!

ಜೊತೆಗೆ, ಈ ಬೈಕ್ ಯಾವುದೇ ಅಪಘಾತ, ಕಳ್ಳತನದ ಅಲರ್ಟ್ ನೀಡಬಲ್ಲದು ಜೊತೆಗೆ, ಪೇರೆಂಟ್ ಮೋಡ್ನಂತಹ (Parent mode) ಕೆಲವು ಬುದ್ಧಿವಂತ ವೈಶಿಷ್ಟ್ಯಗಳೊಂದಿಗೆ ಕೂಡಿದೆ. ಕಾರ್ಬೆಟ್ 14ರ ಬೆಲೆ 86,999 ರೂ.ಗಳಿಂದ ಮತ್ತು 14-ಎಕ್ಸ್ನ ಬೆಲೆ 1,19,999 ರೂ.ಗಳಿಂದ ಆರಂಭವಾಗಲಿದೆ. ಬೂಮ್ ಮೋಟಾರ್ಸ್ ತನ್ನ ವಾಹನಗಳ ಖರೀದಿಗೆ 5 ವರ್ಷಗಳ ಇಎಂಐ (EMI) ನೀಡುತ್ತಿರುವ ಮೊದಲ ಇವಿ ಕಂಪನಿಯಾಗಿದೆ. ಜನರು ತಿಂಗಳಿಗೆ 1,699 ರೂ. ಇಎಂಐ ಆಧಾರದ ಮೇಲೆ ಈ ಬೈಕ್ ಖರೀದಿಸಬಹುದು. ಇದು ಜನರು ಪೆಟ್ರೋಲ್ಗೆ ವೆಚ್ಚ ಮಾಡುವುದಕ್ಕಿಂತ ಕಡಿಮೆಯಾಗಿದೆ.

ಇದನ್ನೂ ಓದಿ:

1) Narendra Modi New Car: ಮರ್ಸಿಡೀಸ್ ಮೇಬ್ಯಾಕ್ ಎಸ್ 650ಗೆ 12 ಕೋಟಿ ಅಲ್ಲ, ಕೇವಲ 3 ಕೋಟಿ!

2) Upcoming Cars 2022 ದುಬಾರಿ ಇಂಧನಕ್ಕೆ ಪರ್ಯಾಯವಾಗಿ ಶೀಘ್ರದಲ್ಲೇ ಟಾಟಾ ಟಿಗೋರ್, ಟಿಯಾಗೋ CNG ಕಾರು ಬಿಡುಗಡೆ!

3) Ola Hypercharger ಚಾರ್ಜಿಂಗ್ ಚಿಂತೆ ಬಿಡಿ, ಇ-ಸ್ಕೂಟರ್ಗಳಿಗೆ ಹೈಪರ್ ಚಾರ್ಜರ್ ಅಳವಡಿಕೆ ಆರಂಭಿಸಿದ ಓಲಾ!

Latest Videos
Follow Us:
Download App:
  • android
  • ios