Asianet Suvarna News Asianet Suvarna News

Chitra Ramakrishna Case : ಯೋಗಿಗಳಿಗೆ ಈಮೇಲ್ ಬಳಸಲು, ಇಂಟರ್ನೆಟ್ ಬೇಕಿಲ್ಲ ಎಂದ NSE ಮಾಜಿ ಮುಖ್ಯಸ್ಥೆ!

* NSE ಮಾಜಿ CEO ಹಾಗೂ MD ಚಿತ್ರಾ ರಾಮಕೃಷ್ಣ ಅವರ ನಿರ್ಧಾರ ಹಿಂದೆ ಯೋಗಿಯ ಪ್ರಭಾವ
* ಅಂದಾಜು 20 ವರ್ಷಗಳಿಂದ ಯೋಗಿಯೊಂದಿಗೆ ಇಮೇಲ್ ಮೂಲಕ ಸಂವಹನ ನಡೆಸಿದ್ದ ಚಿತ್ರಾ ರಾಮಕೃಷ್ಣ
* ಸಿಬಿಐನಿಂದ ಮುಂಬೈನ ಮನೆಯಲ್ಲಿ 12 ಗಂಟೆಗಳ ಕಾಲ ಚಿತ್ರಾ ರಾಮಕೃಷ್ಣ ವಿಚಾರಣೆ

Market Manipulation Case Email details Between Ex NSE Chief Chitra Ramakrishna and Himalayan Yogi san
Author
Bengaluru, First Published Feb 18, 2022, 11:10 PM IST | Last Updated Feb 18, 2022, 11:10 PM IST

ಮುಂಬೈ (ಫೆ. 18): ದೇಶದ ಅತಿದೊಡ್ಡ ಷೇರು ವಿನಿಮಯ ಕೇಂದ್ರ ( country's largest stock exchange) ರಾಷ್ಟ್ರೀಯ ಸ್ಟಾಕ್ ಎಕ್ಸ್ ಚೇಂಜ್ (ಎನ್ ಎಸ್ ಐ) ಮಾಜಿ ಮುಖ್ಯಸ್ಥೆ ಹಾಗೂ ಮುಖ್ಯ ವ್ಯವಸ್ಥಾಪಕ ಅಧಿಕಾರಿ ಚಿತ್ರಾ ರಾಮಕೃಷ್ಣ(Chitra Ramkrishna) ಅವರನ್ನು ಮಾರ್ಕೆಟ್ ಮ್ಯಾನಿಪ್ಯುಲೇಷನ್ ಪ್ರಕರಣಕ್ಕೆ (market manipulation case) ಸಂಬಂಧಪಟ್ಟಂತೆ ಸಿಬಿಐ (CBI) ಶುಕ್ರವಾರ 12 ಗಂಟೆಗಳ ಕಾಲ ಅವರನ್ನು ಸ್ವಗೃಹದಲ್ಲಿ ವಿಚಾರಣೆ ನಡೆಸಿತು. ಈ ವೇಳೆ ಅಪರಿಚಿತ ಯೋಗಿಯ ಮಾತಿನಂತೆ NSE ವ್ಯವಹಾರದಲ್ಲಿ ಸಾಕಷ್ಟು ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಸಾಬೀತಾಗಿದೆ.

59 ವರ್ಷದ ಮಾಜಿ ಸಿಇಒ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ (ಎನ್ಎಸ್ಇ) ವ್ಯವಸ್ಥಾಪಕ ನಿರ್ದೇಶಕಿ (CEO and Managing Director of the National Stock Exchange), ತಮ್ಮ ನಿರ್ಧಾರಗಳ ಮೇಲೆ ಪ್ರಭಾವ ಬೀರಿದ ಹಿಮಾಲಯದ "ಯೋಗಿ" ಯೊಂದಿಗೆ ಗೌಪ್ಯ ಮಾಹಿತಿಯನ್ನು ಹಂಚಿಕೊಂಡ ಆರೋಪದ ಮೇಲೂ ತನಿಖೆಗೆ ಒಳಪಟ್ಟಿದ್ದಾರೆ. ಸೆಕ್ಯುರಿಟೀಸ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (Securities Exchange Board of India) (ಸೆಬಿ) ವರದಿಯ ಪ್ರಕಾರ ಚಿತ್ರಾ ರಾಮಕೃಷ್ಣ ಅವರು ಎನ್‌ಎಸ್‌ಇಯ ಹಣಕಾಸು ಮತ್ತು ವ್ಯವಹಾರ ಯೋಜನೆಗಳು, ಡಿವಿಡೆಂಡ್ ಲೆಕ್ಕಾಚಾರಗಳು, ಹಣಕಾಸು ಫಲಿತಾಂಶಗಳು ಸೇರಿದಂತೆ ವರ್ಗೀಕೃತ ಮಾಹಿತಿಯನ್ನು ಯೋಗಿಯೊಂದಿಗೆ ಹಂಚಿಕೊಂಡಿದ್ದಾರೆ ಎಂದು ಆರೋಪಿಸಿದೆ. ಆಧ್ಯಾತ್ಮಿಕ ಗುರುವಿನ ಮೇಲಿನ ತಮ್ಮ ಅತಿಯಾದ ಅವಲಂಬನೆಯ ಕುರಿತಾಗಿ ಸೆಬಿ ಕೇಳಿರುವ ಪ್ರಶ್ನೆಗಳಿಗೆ ಚಿತ್ರಾ ರಾಮಕೃಷ್ಣ ನೀಡಿರುವ ಪ್ರತಿಕ್ರಿಯೆಗಳನ್ನೂ ಒಳಗೊಂಡಿದ್ದು, ಹಿಮಾಯಲದ ಯೋಗಿ ಎಂದೇ ನಂಬಲಾಗಿರುವ "ಅಪರಿಚಿತ ವ್ಯಕ್ತಿ" ಜೊತೆಗಿನ ಈಮೇಲ್ ವಿನಿಮಯವನ್ನೂ ಒಳಗೊಂಡಿದೆ.

ಈ ಮೇಲ್ ಗಳ ಆಧಾರದ ಮೇಲೆ ಹೇಳುವುದಾದರೆ, ಚಿತ್ರಾ ರಾಮಕೃಷ್ಣ 2015ರಲ್ಲಿ ಈ ವ್ಯಕ್ತಿಯನ್ನು ಹಲವಾರು ಬಾರಿ ಭೇಟಿಯಾಗಿದ್ದಾರೆ ಎನ್ನುವುದನ್ನು ಸೆಬಿ ಖಚಿತಪಡಿಸಿದೆ. 2013 ರಿಂದ 2016ರವರೆಗೆ ಚಿತ್ರಾ ರಾಮಕೃಷ್ಣ  ಅವರು ಎನ್ಎಸ್ಇ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದರೆ, ಆ ಬಳಿಕ ವೈಯಕ್ತಿಕ ಕಾರಣಗಳನ್ನು ನೀಡಿ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು.
 


"ಅಪರಿಚಿತ ವ್ಯಕ್ತಿ" ಇಮೇಲ್ ಐಡಿ rigyajursama@outlook.com ಅನ್ನು ಬಳಸಿದ್ದಾರೆ. ಈ ವಿಳಾಸದ ಈ ಮೇಲ್ ಅನ್ನು "ಸಿದ್ಧಪುರುಷ/ಯೋಗಿ ಬಳಕೆ ಮಾಡುತ್ತಿದ್ದು, ಬಹುಶಃ ಅವರು ಹೆಚ್ಚಾಗಿ ಹಿಮಾಲಯದ ಶ್ರೇಣಿಗಳಲ್ಲಿ ವಾಸ ಮಾಡುತ್ತಿರಬಹುದು' ಎಂದು ಸೆಬಿಗೆ ನೀಡಿರುವ ಉತ್ತರದಲ್ಲಿ ಚಿತ್ರಾ ರಾಮಕೃಷ್ಣ ಹೇಳಿದ್ದಾರೆ. " ನಾನು ಅವರನ್ನು ಕೆಲವು ಪವಿತ್ರ ಸ್ಥಳಗಳಲ್ಲಿ ಭೇಟಿಯಾಗಿದ್ದೇನೆ, ಆದರೆ, ತಾನು ಇದೇ ಸ್ಥಳದಲ್ಲಿ ಇರುತ್ತೇನೆ ಎನ್ನುವ ಯಾವುದೇ ಸ್ಥಳದ ವಿಳಾಸವನ್ನು ನೀಡಿರಲಿಲ್ಲ' ಎಂದು ಸೆಬಿಗೆ ನೀಡಿರುವ ಉತ್ತರದಲ್ಲಿ ತಿಳಿಸಿದ್ದಾರೆ.

LIC IPO : ಮಾರ್ಚ್ 11ಕ್ಕೆ ಬರೋದು ಬಹುತೇಕ ಖಚಿತ, ಇಲ್ಲಿದೆ ಮತ್ತಷ್ಟು ವಿವರ!
ಹಿಮಾಲಯದಲ್ಲಿ ವಾಸಿಸುವ ಯೋಗಿಯೊಂದಿಗೆ ಈಮೇಲ್ ಮೂಲಕ ನಿರಂತರವಾಗಿ ಸಂವಹನ ಹೇಗೆ ಸಾಧ್ಯವಾಗುತ್ತದೆ ಎನ್ನುವ ಪ್ರಶ್ನೆಗೂ ಉತ್ತರಿಸಿದ್ದ ಅವರು, "ನನಗೆ ತಿಳಿದಿರುವ ಮಾಹಿತಿಯಂತೆ, ಆಧ್ಮಾತ್ಮಿಕ ಶಕ್ತಿಗಳನ್ನು ಹೊಂದಿರುವ ವ್ಯಕ್ತಿಗಳಿಗೆ, ಯಾವುದೇ ಭೌತಿಕ ಕೋ-ಆರ್ಡಿನೇಟ್ ಗಳ (ಇಂಟರ್ ನೆಟ್, ಮೊಬೈಲ್, ಕಂಪ್ಯೂಟರ್) ಅಗತ್ಯವಿರುವುದಿಲ್ಲ' ಎಂದಿದ್ದಾರೆ.

Loan and Saving: ಮೊದಲು ಮಾಡ್ಬೇಕಾದ ಕೆಲ್ಸ ಯಾವುದು? ಸಾಲ ಮರುಪಾವತಿಯಾ ಅಥವಾ ನಿವೃತ್ತಿ ಜೀವನಕ್ಕೆ ಉಳಿತಾಯನಾ?
ಅವರನ್ನು ಆಧ್ಮಾತ್ಮಿಕ ಶಕ್ತಿ ಎಂದು ಕರೆದಿರುವ ಚಿತ್ರಾ ರಾಮಕೃಷ್ಣ, "ಅಂದಾಜು 20 ವರ್ಷಗಳ ಹಿಂದೆ ಗಂಗಾ ನದಿಯ ತಟದಲ್ಲಿ ನಾನು ಒಮ್ಮೆ ಅವರನ್ನು ನೇರವಾಗಿ ಭೇಟಿಯಾಗಿದ್ದೆ. ಆ ಬಳಿಕ, ನಾನು ಅನೇಕ ವೈಯಕ್ತಿಕ ಹಾಗೂ ವೃತ್ತಿಪರ ವಿಚಾರಗಳಲ್ಲಿ ಅವರ ಮಾರ್ಗದರ್ಶನವನ್ನು ಪಡೆದುಕೊಂಡಿದ್ದೇನೆ. ಅವರ ಇಚ್ಛೆಯ ಅನುಸಾರ ನನ್ನ ದಾರಿಯಲ್ಲಿ ಪ್ರಕಟವಾಗುತ್ತಿದ್ದರು. ಅವರನ್ನು ಎಲ್ಲಿ ಭೇಟಿಯಾಗಬಹುದು ಎನ್ನುವ ಮಾಹಿತಿಯೂ ನನಗೆ ಇರಲಿಲ್ಲ. ಅಗತ್ಯ ಬಿದ್ದಾಗ ನಿಮ್ಮ ಮಾರ್ಗದರ್ಶನ ಪಡೆಯುವುದು ಹೇಗೆ ಎಂದು ಅವರಲ್ಲಿ ವಿನಂತಿಸಿದ್ದೆ. ಅದರ ಪ್ರಕಾರ ಅವರು ನನ್ನ ಮನವಿಗಳನ್ನು ಕಳುಹಿಸಬಹುದಾದ ಈ ಮೇಲ್ ಐಡಿಯನ್ನು ನೀಡಿದ್ದರು' ಎಂದು ಹೇಳಿದ್ದಾರೆ.

ಸೆಬಿಯ ವರದಿಯಲ್ಲಿ ಹಿಮಾಲಯದ ಅಪರಿಚಿತ ಯೋಗಿ ಹಾಗೂ ಚಿತ್ರಾ ರಾಮಕೃಷ್ಣ ನಡುವಿನ ಈ ಮೇಲ್ ಮಾಹಿತಿಗಳನ್ನೂ ತೆರೆದಿಟ್ಟಿದೆ.
* ಯೋಗಿಯಿಂದ ಫೆಬ್ರವರಿ 17, 2015 ರ ಇ-ಮೇಲ್ ಪ್ರಕಾರ: "...ಪಿಎಸ್, ಬ್ಯಾಗ್‌ಗಳನ್ನು ಸಿದ್ಧವಾಗಿಡಿ, ನಾನು ಮುಂದಿನ ತಿಂಗಳು ಸೆಶೆಲ್ಸ್‌ಗೆ ಪ್ರಯಾಣಿಸಲು ಯೋಜಿಸುತ್ತಿದ್ದೇನೆ, ನೀವು ನನ್ನೊಂದಿಗೆ ಬರಲು ಸಾಧ್ಯವೇ ಎನ್ನುವುದನ್ನು ಪ್ರಯತ್ನಿಸುತ್ತೇನೆ. ಕಾಂಚನ್ ಲಂಡನ್ ಗೆ ಹೋಗುವ ಮುನ್ನ, ಕಾಂಚನ್ ಮತತ್ತು ಭಾರ್ಗವ ಹಾಗೂ ನೀವು ನಿಮ್ಮ ಇಬ್ಬರು ಮಕ್ಕಳೊಂದಿಗೆ ನ್ಯೂಜಿಲೆಂಡ್ ಗೆ ಹೋಗುತ್ತೀರಿ. ಮುಂದಿನ ಪ್ರಯಾಣಕ್ಕೆ ಎಚ್ ಕೆ (ಹಾಂಕಾಂಗ್) ಅಥವಾ ಸಿಂಗಾಪುರ ಆದ್ಯತೆಯ ಮಾರ್ಗವಾಗಿದೆ. ನಿಮಗೆ ಸಹಾಯ ಬೇಕಾದರೆ ದಯವಿಟ್ಟು ನನಗೆ ತಿಳಿಸಿ, ಶೇಷು ಅವರು ಅಗತ್ಯವನ್ನು ಮಾಡಿಕೊಡುತ್ತಾರೆ.  ನಿಮಗೆ ಈಜು ತಿಳಿದಿದ್ದರೆ ಸೀಶೆಲ್ಸ್ ನಲ್ಲಿ ನಾವು ಸಮುದ್ರ ಸ್ನಾನವನ್ನು ಆನಂದಿಸಬಹುದು  ಮತ್ತು ಬೀಚ್‌ನಲ್ಲಿ ವಿಶ್ರಾಂತಿ ಪಡೆಯಬಹುದು. ನಮ್ಮ ಎಲ್ಲಾ ಟಿಕೆಟ್‌ಗಳಿಗಾಗಿ (sic) ಕಾಂಚನ್ ಅವರನ್ನು ಸಂಪರ್ಕಿಸಲು ನಾನು ನನ್ನ ಪ್ರವಾಸ ನಿರ್ವಾಹಕರನ್ನು ಕೇಳುತ್ತಿದ್ದೇನೆ."

*ಫೆಬ್ರವರಿ 18, 2015 ರಂದು ಇ-ಮೇಲ್‌ನಲ್ಲಿ, "ಅಪರಿಚಿತ ವ್ಯಕ್ತಿ" ಯಿಂದ ಚಿತ್ರಾ ರಾಮಕೃಷ್ಣ ಅವರಿಗೆ ಬಂದ ಈ ಮೇಲ್: "ಇಂದು ನೀವು ಅದ್ಭುತವಾಗಿ ಕಾಣುತ್ತಿದ್ದೀರಿ. ನಿಮ್ಮ ಕೂದಲನ್ನು ಪ್ಲ್ಯಾಟ್ ಮಾಡಲು ನೀವು ವಿವಿಧ ವಿಧಾನಗಳನ್ನು ಕಲಿಯಬೇಕು ಅದು ನಿಮ್ಮ ನೋಟವನ್ನು ಆಸಕ್ತಿದಾಯಕ ಮತ್ತು ಆಕರ್ಷಕವಾಗಿ ಮಾಡುತ್ತದೆ!! ಉಚಿತ ಸಲಹೆ, ನೀವು ಇದನ್ನು ಪಡೆದುಕೊಳ್ಳುತ್ತೀರಿ ಎಂದು ನನಗೆ ತಿಳಿದಿದೆ. ಮಾರ್ಚ್ ಮಧ್ಯದಲ್ಲಿ ಸ್ವಲ್ಪ ಮುಕ್ತವಾಗಿರಿ (sic)." ಹೀಗೆ ಚಿತ್ರಾ ರಾಮಕೃಷ್ಣ ಹಾಗೂ ಹಿಮಾಲಯದ ಯೋಗಿ ಎನ್ನಲಾಗುವ ಅಪರಿಚಿತ ವ್ಯಕ್ತಿ ನಡುವೆ ಸಾಕಷ್ಟು ಈ-ಮೇಲ್ ವ್ಯವಹಾರಗಳು ನಡೆದಿವೆ.

Latest Videos
Follow Us:
Download App:
  • android
  • ios