ಕೆಲಸ ನೀಡುವ ಕಂಪನಿಗಳು ಉದ್ಯೋಗಿಗಳಿಗೆ ಷರತ್ತು ಹಾಕ್ತೇವೆ. ಆದ್ರೆ ಕೆಲ ಉದ್ಯೋಗಿಗಳು ಕಂಪನಿಗೇ ಷರತ್ತು ಹಾಕ್ತಾರೆ. ಅದ್ರಲ್ಲಿ ಈತ ಕೂಡ ಸೇರಿದ್ದಾನೆ. ಈತನ ವಿಚಿತ್ರ ಷರತ್ತು ಕೇಳಿದ್ರೆ ನೀವು ಕಂಗಾಲಾಗ್ತೀರಾ.
ದೊಡ್ಡ ಪ್ಯಾಕೇಜ್ ನೌಕರಿ ಸಿಗ್ತಿದೆ ಎಂದ ತಕ್ಷಣ ಅದಕ್ಕೆ ಓಕೆ ಎನ್ನುವ ಜಾಯಮಾನ ಈಗಿನ ಯುವಕರಿಗಿಲ್ಲ. ಹಿಂದೆ ಲಕ್ಷಾಂತ ರೂಪಾಯಿ ಸಂಬಳ ಎಂದ ತಕ್ಷಣ ಜನರು ಹಿಂದೆ ಮುಂದೆ ಆಲೋಚನೆ ಮಾಡದೆ ಒಪ್ಪಿಕೊಳ್ತಿದ್ದರು. ಇದ್ರಿಂದ ಆರ್ಥಿಕ ಸಮಸ್ಯೆ ಕಡಿಮೆಯಾಗುತ್ತೆ, ಒಂದ್ಕಡೆ ಸೆಟಲ್ ಆಗಬಹುದು ಎಂಬ ಆಲೋಚನೆ ಅವರದ್ದಾಗಿತ್ತು. ಆದ್ರೀಗ ಕಾಲ ಬದಲಾಗಿದೆ. ಆರಂಭದಲ್ಲಿಯೇ ಒಳ್ಳೆ ಪ್ಯಾಕೇಜ್ ನೌಕರಿ ಹುಡುಕುವ ಯುವಕರು, ಮತ್ತೊಂದು ಉದ್ಯೋಗ ಹುಡುಕುವ ಸಂದರ್ಭದಲ್ಲಿ ಮತ್ತಷ್ಟು ಅಲರ್ಟ್ ಆಗಿರ್ತಾರೆ. ಈ ಕೆಲಸದಲ್ಲಿ ಅಥವಾ ಕಂಪನಿಯಲ್ಲಿ ಏನೇನು ಸೌಲಭ್ಯ ಸಿಗ್ತಿಲ್ಲ ಎಂಬುದನ್ನು ಪಟ್ಟಿ ಮಾಡಿ, ಮುಂದಿನ ಕೆಲಸದ ವೇಳೆ ಒಳ್ಳೆ ಸಂಬಳದ ಜೊತೆ ಮತ್ತೇನು ಸೌಲಭ್ಯ ಪಡೆಯಬೇಕು ಎನ್ನುವ ಪಟ್ಟಿ ಮಾಡ್ತಾರೆ. ಈಗ ಅಂಥಹದ್ದೇ ವ್ಯಕ್ತಿಯೊಬ್ಬ ಸುದ್ದಿಗೆ ಬಂದಿದ್ದಾನೆ. 43.5 ಲಕ್ಷ ರೂಪಾಯಿ ವಾರ್ಷಿಕ ಪ್ಯಾಕೇಜ್ ಪಡೆಯುತ್ತಿದ್ದರೂ ಆತನಿಗೆ ಊಟದ ಚಿಂತೆಯಾಗಿದೆ. ಯಾವ ಕಂಪನಿ ಉಚಿತವಾಗಿ ಊಟ ನೀಡುತ್ತೆ ಎನ್ನುವ ಹುಡುಕಾಟದಲ್ಲಿ ಆ ವ್ಯಕ್ತಿ ಇದ್ದಾನೆ. ಮುಂದಿನ ಕೆಲಸದಲ್ಲಿ ಸಂಬಳದ ಜೊತೆ ಉಚಿತ ಊಟ ನೀಡುವ ಕಂಪನಿ ಹುಡುಕೋದು ಈತನ ಗುರಿಯಾಗಿದೆ.
ಕಮ್ಯೂನಿಕೇಷನ್ (Communication) ಕಂಪನಿ ಗ್ರೇಪ್‌ವೈನ್‌ನ ಸಂಸ್ಥಾಪಕ ಸೌಮಿಲ್ ತ್ರಿಪಾಠಿ (Soumil Tripathi), ಒಂದು ಪೋಸ್ಟನ್ನು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ. ಇದ್ರಲ್ಲಿ ಅವರು ಸ್ಕ್ರೀನ್ ಶಾಟ್ (Screen Shot) ಕಳುಹಿಸಿದ್ದಾರೆ. ತಮ್ಮ ಆದ್ಯತೆಗಳು ಮತ್ತು ಭವಿಷ್ಯದ ಆಯ್ಕೆಗಳ ಬಗ್ಗೆ ಹೆಚ್ಚು ಸ್ಪಷ್ಟತೆ ಹೊಂದಿರುವ ಜನರನ್ನು ನಾನು ಅಪರೂಪವಾಗಿ ನೋಡುತ್ತೇನೆ. ಇವರು ಹೊಸ ಕೆಲಸದ ಹುಡುಕಾಟದಲ್ಲಿರಲು ಕಾರಣ ಉತ್ತಮ ಆಹಾರ ಎಂದು ಶೀರ್ಷಿಕೆ ಹಾಕಿ, ಸ್ಕ್ರೀನ್ ಶಾಟ್ ಪೋಸ್ಟ್ ಮಾಡಿದ್ದಾರೆ.
GOOD HABITS : ದಿನದ ಆರಂಭವನ್ನು ಹೀಗೆ ಶುರು ಮಾಡ್ತಾರೆ ಗೂಗಲ್ ಸಿಇಒ!
ಸೌಮಿಲ್ ತ್ರಿಪಾಠಿ ಜೊತೆ ಸಂವಹನ ನಡೆಸಿದ ವ್ಯಕ್ತಿ ತನ್ನ ಮುಂದಿನ ಜಾಬ್ ಹೇಗಿರಬೇಕು ಎನ್ನುವ ಬಗ್ಗೆ ಸ್ಪಷ್ಟತೆ ಹೊಂದಿದ್ದಾನೆ. ಆತನಿಗೆ 43.5 ಲಕ್ಷ ರೂಪಾಯಿ ವಾರ್ಷಿಕ ಪ್ಯಾಕೇಜ್ ಕೆಲಸ ಇದೆ. 4.5 ವರ್ಷಗಳ ಅನುಭವವೂ ಇದೆ. ಅನೇಕ ಕಂಪನಿಗಳು ಆತನಿಗೆ ಕೆಲಸ ನೀಡಲು ಸಿದ್ಧವಾಗಿವೆ. ಆದ್ರೆ ಆ ವ್ಯಕ್ತಿಗೆ ಬರೀ ಕೆಲಸ ಮುಖ್ಯವಲ್ಲ. ಉಚಿತ ಆಹಾರ ಮುಖ್ಯವಾಗಿದೆ. ಸೌಮಿಲ್ ತ್ರಿಪಾಠಿ ಜೊತೆ ಚಾಟ್ ಮಾಡಿದ ವ್ಯಕ್ತಿ ಜಿಮ್ ಗೆ ಹೋಗ್ತಾನೆ. ಹಾಗಾಗಿ ದಿನದಲ್ಲಿ ನಾಲ್ಕು ಬಾರಿ ಆಹಾರ ಸೇವನೆ ಮಾಡಬೇಕಾಗುತ್ತದೆ. ಪ್ರೋಟೀನ್ ಭರಿತ ಆಹಾರ ಆತನಿಗೆ ಅಗತ್ಯವಿದೆ. ಇದೇ ಕಾರಣಕ್ಕೆ ಕೆಲ ಹುಡುಕುವ ಮುನ್ನ ಆತ ಷರತ್ತು ಹಾಕಿದ್ದಾನೆ. ಯಾವ ಕಂಪನಿ ಉಚಿತ ಆಹಾರ ನೀಡುತ್ತದೆಯೋ ಆ ಕಂಪನಿಗೆ ಈತ ಅರ್ಜಿ ಸಲ್ಲಿಸುವವನಿದ್ದಾನೆ.
ಪ್ರಿಯತಮೆ ಕೊಲೆಗೈದು, ತಾನು ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದರೂ ಬದುಕುಳಿದ ಯುವಕ
ಚಾಟ್ ನಲ್ಲಿ ಈ ವಿಷ್ಯವನ್ನೂ ಆತ ಸ್ಪಷ್ಟಪಡಿಸಿದ್ದಾನೆ. ಗೂಗಲ್ ನಲ್ಲಿ ಕೆಲಸ ಪಡೆಯಲು ನಾನು ತಯಾರಿ ನಡೆಸುತ್ತಿದ್ದೇನೆ. ನನ್ನ ಅವಶ್ಯಕತೆಗೆ ಅನುಗುಣವಾಗಿ ಉದ್ಯೋಗವನ್ನು ಒದಗಿಸುವ ಬೇರೆ ಯಾವುದಾದರೂ ಕಂಪನಿ ಇದೆಯೇ ಎಂದು ಆತ ಪ್ರಶ್ನೆ ಮಾಡಿದ್ದಾನೆ. ಆತನ ಪ್ರಶ್ನೆ ಸೌಮಿಲ್ ತ್ರಿಪಾಠಿಗೆ ಇಷ್ಟವಾಗಿದೆ. ಜನರು ಇಷ್ಟೊಂದು ಸ್ಪಷ್ಟತೆ ಹೊಂದಿರೋದನ್ನು ನಾನು ಅಪರೂಪವಾಗಿ ನೋಡ್ತೇನೆ ಎಂದು ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ.
ಸೌಮಿಲ್ ತ್ರಿಪಾಠಿ ಪೋಸ್ಟ್ ಗೆ ಸಾಕಷ್ಟು ಕಮೆಂಟ್ ಬಂದಿದೆ. 43 ಲಕ್ಷ ಸಂಬಳ ಪಡೆಯುತ್ತಿದ್ದರೂ ಆಹಾರಕ್ಕೆ ಹಣ ಹೊಂದಿಸಲು ಆಗ್ತಿಲ್ಲ ಅಂದ್ರೆ ಈತ ವಿಚಿತ್ರ ವ್ಯಕಿಯೇ ಇರಬೇಕು ಎಂದು ಒಬ್ಬರು ಬರೆದಿದ್ದಾರೆ. ಆತನ ಪ್ಯಾಕೇಜ್ ಹಾಗೂ ಕಾಳಜಿ ನನ್ನನ್ನು ಆಲೋಚನೆಗೆ ತಳ್ಳಿದೆ ಎಂದು ಇನ್ನೊಬ್ಬರು ಬರೆದಿದ್ದಾರೆ.
