ರಾಯಲ್ ಎನ್‌ಫೀಲ್ಡ್ ಬೈಕ್ ಸ್ಫೋಟಗೊಂಡು ಹಲವರಿಗೆ ಗಂಭೀರ ಗಾಯ, ಭಯಾನಕ ವಿಡಿಯೋ!
ರಾಯಲ್ ಎನ್‌ಫೀಲ್ಡ್ ಬೈಕ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಇದ್ದಕ್ಕಿದ್ದಂತೆ ಸ್ಫೋಟಗೊಂಡ ಘಟನೆ ನಡೆದಿದೆ. ಬೆಂಕಿ ನಂದಿಸಲು ಪ್ರಯತ್ನಿಸುತ್ತಿ ಮಾಲೀಕ ಸೇರಿದಂತೆ ಸ್ಥಳೀಯರು ಈ ಸ್ಫೋಟದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಭಯಾನಕ ವಿಡಿಯೋ ವೈರಲ್ ಆಗಿದೆ.
ಹೈದರಾಬಾದ್(ಮೇ.13) ಎಲೆಕ್ಟ್ರಿಕ್ ಸ್ಕೂಟರ್ ಸ್ಫೋಟಗೊಳ್ಳುತ್ತಿರುವ ಪ್ರಕರಣ ಇತ್ತೀಚೆಗೆ ವರದಿಯಾಗಿದೆ. ಇಂಧನ ದ್ವಿಚಕ್ರ ವಾಹನಗಳೂ ಸ್ಫೋಟಗೊಂಡ ಉದಾಹರಣೆಗಳಿವೆ. ಇದೀಗ ರಾಯಲ್ ಎನ್‌ಫೀಲ್ಡ್ ಬೈಕ್‌ನಲ್ಲಿ ಬೆಂಕಿ ಕಾಣಿಸಿಕೊಂಡು ದಿಢೀರ್ ಸ್ಫೋಟಕಗೊಂಡ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಬೈಕ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಕೆಲವೇ ಕ್ಷಣಗಳಲ್ಲಿ ಸ್ಫೋಟಗೊಂಡಿದೆ. ಪರಿಣಾಮ ಹಲವು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೊಘಲಪುರದ ಬೀಬಿ ಬಜಾರ್‌ನಲ್ಲಿ ಈ ಘಟನೆ ನಡೆದಿದೆ. ಸವಾರ ತನ್ನ ರಾಯಲ್ ಎನ್‌ಫೀಲ್ಡ್ 350 ಕ್ಲಾಸಿಕ್ ಬೈಕ್ ಮೂಲಕ ಆಗಮಿಸಿದ್ದಾನೆ. ಬೈಕ್ ಪಾರ್ಕಿಂಗ್ ಮಾಡುತ್ತಿದ್ದಂತೆ ಬೈಕ್‌ನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿದೆ. ಪಾರ್ಕಿಂಗ್ ಮಾಡುವ ಮೊದಲೇ ಬೆಂಕಿ ಕಾಣಿಸಿಕೊಂಡ ಕಾರಣ ಜೀವ ಉಳಿಸಿಕೊಳ್ಳಲು ತಕ್ಷಣ ಬೈಕ್ ಬಿಟ್ಟು ಹಾರಿದ್ದಾನೆ. ಇತ್ತ ಬೈಕ್ ನೆಲಕ್ಕೆ ಬಿದ್ದಿದೆ.
ಹೊಚ್ಚ ಹೊಸ ರಾಯಲ್ ಎನ್‌ಫೀಲ್ಡ್ ಬೈಕ್ ಕಿ ಹಸ್ತಾಂತರಿಸಿದ ಬೆನ್ನಲ್ಲೇ ಹೊತ್ತಿಕೊಂಡ ಬೆಂಕಿ!
ಬೆಂಕಿ ಕೆನ್ನಾಲಗೆ ಜೋರಾಗಿದೆ. ತಕ್ಷಣವೇ ಸ್ಥಳೀಯರು ಗೋಣಿ ಚೀಲ ನೀರಿನಲ್ಲಿ ಮುಳುಗಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ಪೈಪ್ ಮೂಲಕ ನೀರು ಹರಿಸುವ ಪ್ರಯತ್ನ ಮಾಡಿದ್ದಾರೆ. ನಿರಂತರ ಪ್ರಯತ್ನದ ಮೂಲಕ ಬೆಂಕಿ ನಂದಿಸಲು ಕಸರತ್ತು ಮಾಡಿದ್ದಾರೆ. ಆದರೆ ಬೆಂಕಿ ಹೆಚ್ಚಾಗುತ್ತಲೇ ಹೋಗಿದೆ. ಪ್ರಯತ್ನ ಮಾತ್ರ ಬಿಡಲಿಲ್ಲ. ಬೆಂಕಿ ಬೈಕ್ ಪೆಟ್ರೋಲ್ ಟ್ಯಾಂಕ್‌ಗೆ ಹೊತ್ತಿಕೊಂಡಿದೆ. ಇದರ ಪರಿಣಾಮ ಬೈಕ್ ಏಕಾಏಕಿ ಸ್ಫೋಟಗೊಂಡಿದೆ.
ಸ್ಫೋಟದದಿಂದ ಬೆಂಕಿ ನಂದಿಸುತ್ತಿದ್ದ ಹಲವರಿಗೆ ಗಾಯವಾಗಿದೆ. ಹಲವರ ದೇಹಕ್ಕೆ ಬೆಂಕಿ ಹತ್ತಿಕೊಂಡಿದೆ. ಸುಮಾರು 10 ಮಂದಿ ಈ ಸ್ಫೋಟದಿಂದ ಗಾಯಗೊಂಡಿದ್ದರೆ.ತಕ್ಷಣೇ ಸ್ಥಳೀಯರು ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಇತ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇಷ್ಟೇ ಅಲ್ಲ ರಾಯಲ್ ಎನ್‌ಫೀಲ್ಡ್ ಬೈಕ್ ಸ್ಫೋಟಕ್ಕೆ ಕಾರಣವೇನು ಅನ್ನೋದು ತನಿಖೆಗೆ ಮುಂದಾಗಿದೆ.
ನೋಡನೋಡುತ್ತಿದ್ದಂತೆ ಸುಟ್ಟು ಕರಕಲಾಯ್ತು ಬೈಕ್ : ಪಾರಾದ ಸವಾರ
ವಾಹನಗಳಿಗೆ ಬೆಂಕಿ ಹೊತ್ತಿಕೊಂಡ ತಕ್ಷಣ ನಂದಿಸಲು ಪ್ರಯತ್ನಿಸುವುದು ಸಹಜ. ಆದರೆ ಸೂಕ್ತ ಪರಿಕರಗಳಿಲ್ಲದೆ ಬೆಂಕಿ ಆರಿಸುವುದು ಸುಲಭದ ಮಾತಲ್ಲ. ಇಷ್ಟೇ ಅಲ್ಲ ಅದು ಮತ್ತಷ್ಟು ಅಪಾಯ ತರುವ ಸಾಧ್ಯತೆ ಇದೆ. ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ನೆರವು ಪಡೆಯುವುದು ಸೂಕ್ತ. ಇಥವಾ ಫೈರ್ ಎಸ್ಟಿಂಗ್ವಿಶರ್ ಮೂಲಕ ಬೆಂಕಿ ಆರಿಸುವ ಪ್ರಯತ್ನ ಮಾಡುವುದು ಸೂಕ್ತ.