30,000 ಕೊಟ್ಟರೆ ಎಲೆಕ್ಟ್ರಿಕ್‌ ಆಗುತ್ತೆ ಪೆಟ್ರೋಲ್‌ ಸ್ಕೂಟರ್..!

ಪೆಟ್ರೋಲ್‌ ಬೈಕುಗಳಿಗೂ ವಿದ್ಯುತ್‌ ಬ್ಯಾಟರಿ ಅಳವಡಿಕೆ, ಮೆಲ್ದಾತ್‌ ಆಡೋ ಕಾಂಪೋನೆಂಟ್‌ ಸಂಸ್ಥೆಯಿಂದ 30 ಸಾವಿರ ರು.ಗಳಿಗೆ ಹೈಬ್ರಿಡ್‌ ಬೈಕ್‌ ಸಿದ್ಧ

Pay 30000 the Petrol Scooter will become Electric grg

ಬೆಂಗಳೂರು(ನ.04): ಮುಂದಿನ ಜಮಾನ ಎಲೆಕ್ಟ್ರಿಕ್‌ ವಾಹನಗಳದ್ದು ಎಂಬುದು ಈಗಾಗಲೇ ಸಾಬೀತಾಗಿದೆ. ಆದರೆ, ಎಲೆಕ್ಟ್ರಿಕ್‌ ವಾಹನಗಳನ್ನು ಕೊಳ್ಳುವುದು ಕೊಂಚ ದುಬಾರಿ. ಹಾಗಾಗಿ ಹೊಸ ವಾಹನ ಕೊಳ್ಳುವ ಬದಲು ಮನೆಯಲ್ಲೇ ಇರುವ ದ್ವಿಚಕ್ರ ವಾಹನಕ್ಕೆ ಬ್ಯಾಟರಿ ಅಳವಡಿಸಿ ಹೈಬ್ರೀಡ್‌ ಬೈಕ್‌ ಆಗಿ ಪರಿವರ್ತಿಸಿದರೆ ಹೇಗೆ?

ಹೌದು, ನಗರದ ಮಾಗಡಿ ರಸ್ತೆಯ ಸೀಗೆಹಳ್ಳಿ ಬಳಿ ಇರುವ ‘ಮೆಲ್ದಾತ್‌ ಆಡೋ ಕಾಂಪೋನೆಂಟ್‌’ ಅಥವಾ ‘ಈಜಿ ಹೈಬ್ರಿಡ್‌’ ಎಂಬ ಕಂಪನಿಯು ಪ್ರಸ್ತುತ ಪೆಟ್ರೋಲ್‌ ಚಾಲಿತ ಬೈಕುಗಳಿಗೆ ವಿದ್ಯುತ್‌ ಬ್ಯಾಟರಿ ಅಳವಡಿಸಿ ಹೈಬ್ರಿಡ್‌ ಬೈಕ್‌ ಆಗಿ ಪರಿವರ್ತಿಸಿ ಕೊಡುತ್ತಿದೆ. ಇದರಿಂದ ಆ ಬೈಕ್‌ ಅನ್ನು ಒಂದು ಬಟನ್‌ ಮೂಲಕ ಬ್ಯಾಟರಿ ಮೂಲಕವಾದರೂ ಚಾಲಿಸಬಹುದು ಅಥವಾ ಪೆಟ್ರೋಲ್‌ ಮೂಲಕವಾದರೂ ಚಲಾಯಿಸಬಹುದು. ಈ ಸಂಸ್ಥೆಯು ಪ್ರಸ್ತುತ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಜಾಗತಿಕ ಬಂಡವಾಳ ಹುಡಿಕೆದಾರರ ಸಮಾವೇಶದಲ್ಲಿ ಮಳಿಗೆ ತೆರೆದಿದ್ದು ಗ್ರಾಹಕರ ಗಮನ ಸೆಳೆಯುತ್ತಿದೆ.

ಬೌನ್ಸ್ ಇನ್ಫಿನಿಟಿ ಈಗ ಫ್ಲಿಪ್ಕಾರ್ಟ್ನಲ್ಲಿ ಲಭ್ಯ: ಖರೀದಿ ಹೇಗೆ

ಈ ಸಂಸ್ಥೆಯ 30 ಸಾವಿರ ರು.ಗಳಿಗೆ ಸುಲಭವಾಗಿ ಬ್ಯಾಟರಿ ಅಳವಡಿಸಿಕೊಡಲಿದೆ. ಪ್ರಸ್ತುತ ಆಕ್ವಿವ್‌ ಹೋಂಡಾ, ಸ್ಕೂಟಿ ಸೇರಿದಂತೆ ಮೊಪೆಡ್‌ ಮಾದರಿ ಸ್ಕೂಟರ್‌ಗಳಿಗೆ ಬ್ಯಾಟರಿ ಅಳವಡಿಸುತ್ತಿದ್ದೇವೆ. ಇತರೆ ಬೈಕುಗಳಿಗೂ ಬ್ಯಾಟರಿ ಅಳವಡಿಸುವ ಯೋಜನೆ ಸಿದ್ಧಪಡಿಸಲಾಗುತ್ತಿದೆ ಎನ್ನುತ್ತಾರೆ ಸಂಸ್ಥೆಯ ಸಿಬ್ಬಂದಿ.

ತ್ಯಾಜ್ಯದಿಂದ ಗ್ಯಾಸ್‌:

ಮನೆ ಮತ್ತು ಅಪಾರ್ಟ್‌ಮೆಂಟ್‌ಗಳು ಸೇರಿದಂತೆ ಹಲವು ಕಡೆ ಉತ್ಪಾದನೆಯಾಗುವ ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವುದರ ಜತೆಗೆ ‘ಅಡುಗೆ ಅನಿಲ’ ಉತ್ಪಾದಿಸುವ ಮಷಿನ್‌ಗಳನ್ನು ‘ಗ್ರೀನ್‌ ಏರಾ‘ ಎಂಬ ಕಂಪನಿ ಪರಿಚಯಿಸಿದೆ. ಈ ಯಂತ್ರೋಪಕರಣಗಳನ್ನು ಅಳವಡಿಸಿಕೊಳ್ಳುವುದರಿಂದ ಸುಲಭವಾಗಿ ತ್ಯಾಜ್ಯಗಳನ್ನು ವಿಲೇವಾರಿ ಮಾಡಬಹುದು. ಜತೆಗೆ ಅಡುಗೆ ಅನಿಲವನ್ನು ಉತ್ಪಾದಿಸಿಕೊಳ್ಳಬಹುದು ಎನ್ನುತ್ತಾರೆ ಗ್ರೀನ್‌ ಏರಾ ಕಂಪನಿಯ ಸಂಸ್ಥಾಪಕ ಎಂ.ಎಸ್‌.ಆರ್‌. ಕುಮಾರ್‌.
 

Latest Videos
Follow Us:
Download App:
  • android
  • ios