ಭಾರತೀಯ ಮಾರುಕಟ್ಟೆಗೆ HOP Leo, HOP Lyf ಸ್ಕೂಟರ್‌ಗಳು ಬಿಡುಗಡೆ

ಎಚ್ಒಪಿ ಎಲೆಕ್ಟ್ರಿಕ್ ಮೊಬಿಲಿಟಿ ಲಿಯೋ ಮತ್ತು ಲೈಫ್ ಎಂಬೆರಡು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಲಾಂಚ್ ಮಾಡಿದೆ. ಪ್ರಸಕ್ತ ಹಣಕಾಸು ವರ್ಷಾಂತ್ಯಕ್ಕೆ ಒಟ್ಟು 5 ಎಲೆಕ್ಟ್ರಿಕ್ ವಾಹನಗಳನ್ನು ಲಾಂಚ್ ಮಾಡುವ ಯೋಜನೆಯನ್ನು ಕಂಪನಿ ಹಾಕಿಗೊಂಡಿದ್ದು, ಈ ಪೈಕಿ ಒಂದು ಎಲೆಕ್ಟ್ರಿಕ್ ಮೋಟರ್‌ಸೈಕಲ್ ಕೂ ಇರಲಿದೆ.  

HOP Le0 and HOP Lyf electric scooter launched to Indian market

ಭಾರತದಲ್ಲಿ ಈಗ ಎಲೆಕ್ಟ್ರಿಕ್ ವಾಹನಗಳ ಭರಾಟೆ ಜೋರಾಗುತ್ತಿದೆ. ವಿಶೇಷವಾಗಿ ಬ್ಯಾಟರಿ ಚಾಲಿತ ದ್ವಿಚಕ್ರವಾಹನಗಳಿಗೆ ಬೇಡಿಕೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಹಲವು ಕಂಪನಿಗಳು ಬ್ಯಾಟರಿ ಚಾಲಿತ ದ್ವಿಚಕ್ರವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿವೆ. ಈ ಸಾಲಿಗೆ ಎಚ್‌ಒಪಿ ಎಲೆಕ್ಟ್ರಿಕ್ ಮೊಬಿಲಿಟಿ ಕೂಡ ಸೇರುತ್ತಿದೆ. 

ಹೌದು ಎಚ್‌ಒಪಿ ಎಲೆಕ್ಟ್ರಿಕ್ ಮೊಬಿಲಿಟಿ ಕಂಪನಿಯು ಈ ಹಣಕಾಸು ವರ್ಷಾಂತ್ಯಕ್ಕೆ ಐದು ಎಲೆಕ್ಟ್ರಿಕ್ ದ್ವಿಚಕ್ರವಾಹನಗಳನ್ನು ಬಿಡುಗಡೆ ಮಾಡಲಿದೆ. ಐದು ಸ್ಕೂಟರ್‌ಗಳ ಪೈಕಿ ಮೊದಲಿಗೆ 65,000 ರೂಪಾಯಿ ಬೆಲೆಯ ಎಚ್‌ಒಪಿ ಲೈಫ್ ಎಲೆಕ್ಟ್ರಿಕ್ ಸ್ಕೂಟರ್ ಮತ್ತು 72,500 ರೂಪಾಯಿ ಬೆಲೆಯ ಎಚ್ಒಪಿ ಲಿಯೋ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಕಂಪನಿಯು ಹೇಳಿಕೊಂಡಿರುವ ಪ್ರಕಾರ ಎಚ್ಒಪಿ ಒಎಕ್ಸ್ಒ 100 ಮೋಟಾರ್ ಸೈಕಲ್ ಕೂಡ ಶೀಘ್ರವೇ ಬಿಡುಗಡೆ ಮಾಡಲಿದೆ.

ಎಲೆಕ್ಟ್ರಿಕ್ ಕಾರ್ ಖರೀದಿಗೆ 1.50 ಲಕ್ಷ ರೂ.ವರೆಗೆ ಸಬ್ಸಿಡಿ, ನೋಂದಣಿ ಫ್ರೀ!

ಎಚ್ಒಪಿ ಬಿಡುಗಡೆ ಮಾಡಲಿರುವ ಬ್ಯಾಟರಿ ಚಾಲಿತ ದ್ವಿಚಕ್ರವಾಹನಗಳು ವಿಭಾಗದಲ್ಲಿ ಮೊದಲ ಬಾರಿಗೆ 180 ಕೆಜಿ ತೂಕ ಹೊರುವ ಮತ್ತು 125 ಕಿ.ಮೀ. ವ್ಯಾಪ್ತಿಯ ಸ್ಕೂಟರ್ ಅನ್ನು ಪರಿಚಯಿಸಲಿದೆ. ಇದರಲ್ಲಿ 19.5 ಲೀಟರ್ ಬೂಟ್ ಸ್ಪೇಸ್ ಮತ್ತು ಇಂಟರ್ನೆಟ್, ಜಿಪಿಎಸ್, ಸ್ಮಾರ್ಟ್‌ಫೋನ್ ಆಪ್ ಸೇರಿದಂತೆ ಅನೇಕ ಅತ್ಯಾಧುನಿಕ ಫೀಚರ್‌ಗಳು ಕೂಡ ಇರಲಿವೆ. 

ಎಚ್ಒಪಿ ಲಿಯೋ ಬ್ಯಾಟರಿ ಚಾಲಿತ ಸ್ಕೂಟರ್ ಮೂರು ವೆರಿಯೆಂಟ್‌ಗಳಲ್ಲಿ ಸಿಗಲಿದೆ. ಲಿಯೋ ಬೇಸಿಕ್, ಲಿಯೋ ಮತ್ತು ಲಿಯೋ ಎಕ್ಸ್‌ಟೆಂಡೆಡ್. ಒಮ್ಮೆ ಚಾರ್ಜ್ ಮಾಡಿದರೆ ಈ ಸ್ಕೂಟರ್ 125 ಕಿ.ಮೀ.ವರೆಗೂ ಓಡುತ್ತದೆ ಮತ್ತು ಗರಿಷ್ಠ ವೇಗ ಗಂಟೆಗೆ 60 ಕಿ.ಮೀ. ಇರಲಿದೆ. ಇದರಲ್ಲಿ ಲಿ ಐಯಾನ್ ಬ್ಯಾಟರಿ ಇರಲಿದೆ. ಲಿಯೋ ಎಕ್ಸ್‌ಟೆಂಡೆಡ್ ಸ್ಕೂಟರ್‌ನಲ್ಲಿ ಅಳವಡಿಸಲಾಗಿರುವ ಮೋಟಾರ್ 2700 ವ್ಯಾಟ್ ಮೆಕಾನಿಕಲ್ ಪವರ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. 

ಗ್ರಾಹಕರಿಗೆ ಕೈಗೆಟಕುವ ಬೆಲೆಯನ್ನು ಹೊಂದಿರುವ ಎಚ್ಒಪಿ ಲೈಫ್ ಕೂಡ ಮೂರು ಮಾದರಿಗಳಲ್ಲಿ ಮಾರಾಟಕ್ಕೆ ಸಿಗಲಿದೆ- ಲೈಫ್ ಬೇಸಿಕ್, ಲೈಫ್ ಮತ್ತು ಲೈಫ್ ಎಕ್ಸ್‌ಟೆಂಡೆಡ್ ವೆರಿಯೆಂಟ್‌ಗಳಿವೆ. ಎಚ್ಒಪಿ ಲಿಯೋ ರೀತಿಯಲ್ಲಿ ಲೈಫ್ ಮಾಡೆಲ್‌ ಕೂಡ ಗಂಟೆಗೆ ಗರಿಷ್ಠ 50 ಕಿಲೋ ಮೀಟರ್ ವೇಗವನ್ನು ಹೊಂದಿದೆ. ಈ ಸ್ಕೂಟರ್‌ನಲ್ಲಿ ಕೂಡ ಡುಯೆಲ್ ಲಿ ಐಯಾನ್ ಬ್ಯಾಟರಿ ಅಳವಡಿಸಲಾಗಿದೆ. 2000 ವ್ಯಾಟ್ ಪವರ್ ಉತ್ಪಾದಿಸುವ ಮೋಟಾರ್ ಇದರಲ್ಲಿದೆ. 

ಯಮಹಾದಿಂದ ಹೊಸ ಫ್ಯಾಸಿನೋ 125 ಫೈ ಹೈಬ್ರಿಡ್ ಸ್ಕೂಟರ್

ಮುಂಬರಲಿರುವ ಎಚ್ಒಪಿ ಒಎಕ್ಸ್ಒ 100 ಮೋಟಾರ್ ಸೈಕಲ್ ಅನ್ನು ನೀವು ಒಮ್ಮೆ ಚಾರ್ಜ್ ಮಾಡಿದರೆ 100 ಕಿಲೋ ಮೀಟರ್‌ವರೆಗೂ ಓಡಲಿದೆ. ಇದರಲ್ಲಿ ಅಳವಡಿಸಲಾಗಿರುವ ಮೋಟಾರ್‌ನಿಂದ ಗರಿಷ್ಠ 7200 ವ್ಯಾಟ್ ಮೆಕಾನಿಕಲ್ ಪವರ್ ಉತ್ಪಾದನೆಯಾಗಲಿದ್ದು, ಪ್ರತಿ ಗಂಟೆಗೆ 100 ಕಿ.ಮೀ ವೇಗದಲ್ಲಿ ಇದು ಓಡಲಿದೆ.

ಹಾಪ್ ಎನರ್ಜಿ ನೆಟ್ವರ್ಕ್ ಮೊದಲ ಎಲೆಕ್ಟ್ರಿಕ್ ವಾಹನ ವಿಭಾಗವನ್ನುಕಂಪನಿಯು ಆರಂಭಿಸಲು ಯೋಜಿಸುತ್ತಿದೆ. ಇದು ಅಂತರ್ನಿರ್ಮಿತ ಬ್ಯಾಟರಿ-ಸ್ವಾಪ್ ತಂತ್ರಜ್ಞಾನವನ್ನು ಹೊಂದಿರುತ್ತದೆ. ಜನವರಿ 2021ರಲ್ಲಿ ಐದು ವಿನಿಮಯ ಕೇಂದ್ರಗಳು ಮತ್ತು 50 ಬ್ಯಾಟರಿಗಳನ್ನು ಹೊಂದಿರುವ ಹಾಪ್‌ನ ಪೈಲಟ್ ನೆಟ್‌ವರ್ಕ್ ಜೈಪುರದಲ್ಲಿ ಕಾರ್ಯಾಚರಣೆಯನ್ನುಆರಂಭಿಸಿದೆ. ಮುಂದಿನ ಮೂರು ವರ್ಷಗಳಲ್ಲಿ ಕನಿಷ್ಠ 10 ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಲು ಬ್ರಾಂಡ್ ಯೋಜಿಸಿದೆ.

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಜನಪ್ರಿಯಗೊಳಿಸುವ ಸಂಬಂಧ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಅನೇಕ ಉತ್ತೇಜನಕಾರಿ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಿವೆ. ಹಲವು ರಾಜ್ಯಗಳ ಎಲೆಕ್ಟ್ರಿಕ್ ವಾಹನ ನೀತಿಯನ್ನು ಘೋಷಣೆ ಮಾಡಿದ್ದು, ಎಲೆಕ್ಟ್ರಿಕ್ ದ್ವಿಚಕ್ರವಾಹನಗಳು, ಕಾರ್‌ಗಳ ಖರೀದಿಗೆ ಗರಿಷ್ಠ ಸಬ್ಸಿಡಿಯನ್ನು ನೀಡುತ್ತಿವೆ. 

ನಿತ್ಯ 49 ರೂ. ವೆಚ್ಚದಲ್ಲಿ ಟಿವಿಎಸ್ ಎಕ್ಸ್ಎಲ್ 100 ದ್ವಿಚಕ್ರವಾಹನ!

ಕಳೆದ ವಾರವಷ್ಟೇ ಗುಜರಾತ್ ಸರ್ಕಾರವು ಹೊಸ ಎಲೆಕ್ಟ್ರಿಕ್ ವಾಹನ ನೀತಿಯನ್ನು ಪ್ರಕಟಿಸಿದೆ. ಗುಜರಾತ್‌ನಲ್ಲಿ ಎಲೆಕ್ಟ್ರಿಕ್ ಕಾರ್ ಖರೀದಿಗೆ 1.5 ಲಕ್ಷ ರೂಪಾಯಿವರೆಗೂ ಮತ್ತು ದ್ವಿಚಕ್ರವಾಹನ ಖರೀದಿಗೆ 20 ಸಾವಿರ ರೂಪಾಯಿವರೆಗೂ ಸಬ್ಸಿಡಿಯನ್ನು ಪ್ರಕಟಿಸಿದೆ.

Latest Videos
Follow Us:
Download App:
  • android
  • ios