ಹೊಸ ಹೋಂಡಾ SP125 ಬೈಕ್ ಎಂಟ್ರಿ, ಕೈಗೆಟುಕುವ ದರದಲ್ಲಿ ಸಿಗಲಿದೆ ದ್ವಿಚಕ್ರ ವಾಹನ!
ಹೊಚ್ಚ ಹೊಸ ಹೋಂಡಾ SP125 ಬೈಕ್ ಬಿಡುಗಡೆಯಾಗಿದೆ. ಈ ಬೈಕ್‌ನಲ್ಲಿ ಕೆಲ ವಿಶೇಷತಗಳಿವೆ. ಪ್ರಮುಖವಾಗಿ ಕೈಗೆಟುಕುವ ದರದಲ್ಲಿ ಈ ಬೈಕ್ ಬಿಡುಗಡೆಯಾಗಿದೆ. ಬೈಕ್ ಎಂಜಿನ್, ಬೆಲೆ, ಎಷ್ಟು ಬಣ್ಣಗಳಲ್ಲಿ ಲಭ್ಯ?
ನವದೆಹಲಿ(ಡಿ.25) ಹೋಂಡಾ ಮೋಟಾರ್‌ಸೈಕಲ್ ಸ್ಕೂಟರ್ ಇಂಡಿಯಾ ಇದೀಗ ಹೊಸ ಬೈಕ್ ಬಿಡುಗಡೆ ಮಾಡಿದೆ. 125ಸಿಸಿ ಎಂಜಿನ್ ಹೊಂದಿರುವ ಹೋಂಡಾ SP125 ಬೈಕ್ ಭಾರತದ ಮಾರುಕಟ್ಟೆ ಪ್ರವೇಶಿಸಿದೆ. ಹೊಸ ವಿನ್ಯಾಸ, ಕಟ್ಟಿಂಗ್ ಎಡ್ಜ್ ಟೆಕ್ನಾಲಜಿ, OBD2B ಸೇರಿದಂತೆ ಹಲವು ತಂತ್ರಜ್ಞಾನ ವಿಶೇಷತೆಗಳು ಇದರಲ್ಲಿದೆ. ನೂತನ ಬೈಕ್ ಬೆಲೆ 91,771 ರೂಪಾಯಿಯಿಂ(ಎಕ್ಸ್ ಶೋ ರೂಂ) ಆರಂಭಗೊಳ್ಳುತ್ತದೆ. 2 ವೇರಿಯೆಂಟ್‌ಗಳಲ್ಲಿ ಹೊಸ ಬೈಕ್ ಲಭ್ಯವಿದೆ.
ಹೋಂಡಾ SP125 ಬೈಕ್ ವೇರಿಯೆಂಟ್ ಹಾಗೂ ಬೆಲೆ
ಹೋಂಡಾ SP125 ಬೈಕ್ ಡ್ರಮ್ ವೇರಿಯೆಂಟ್:91,771 ರೂಪಾಯಿ(ಎಕ್ಸ್ ಶೋ ರೂಂ)
ಹೋಂಡಾ SP125 ಬೈಕ್ ಡಿಸ್ಕ್ ವೇರಿಯೆಂಟ್: 1,00,284 ರೂಪಾಯಿ(ಎಕ್ಸ್ ಶೋ ರೂಂ)
60+ ಕಿ.ಮೀ ಮೈಲೇಜ್ ನೀಡುವ ಬಜೆಟ್ ಫ್ರೆಂಡ್ಲಿ ಜೊತೆಗೆ ಸ್ಟೈಲೀಶ್ ಬೈಕ್!
ಹೋಂಡಾ SP125 ಬೈಕ್ ಫೀಚರ್ಸ್
ಹೆಡ್‌ಲೈಟ್, ಟೈಲ್ ಲೈಟ್ ಸೇರಿದಂತೆ ಎಲ್ಲಾ ಕಡೆ LED ಲೈಟ್ಸ್ ಬಳಸಲಾಗಿದೆ. ಅಗ್ರೆಸ್ಸೀವ್ ಲುಕ್, ಟ್ಯಾಂಕ್, ಕ್ರೋಮ್ ಮಫ್ಲರ್ ಕವರ್ ಜೊತೆಗೆ ಅತ್ಯುತ್ತಮ ಗ್ರಾಫಿಕ್ಸ್ ಬೈಕ್ ಅಂದ ಹೆಚ್ಚಿಸಿದೆ. ಮೊದಲ ನೋಟದಲ್ಲೇ ಸ್ಪೋರ್ಟೀವ್ ಲುಕ್ ಎದ್ದುಕಾಣಲಿದೆ. 5 ಬಣ್ಣಗಳಲ್ಲಿ ಹೊಸ ಬೈಕ್ ಲಭ್ಯವಿದೆ. 5.2 ಇಂಟಿನ TFT ಡಿಸ್‌ಪ್ಲೇ, ಬ್ಲೂಟೂತ್ ಕನೆಕ್ಟಿವಿಟಿ, ಹೋಂಡಾ ರೋಡ್ ಸಿಂಕ್ ಆ್ಯಪ್ ಫೀಚರ್ಸ್ ಲಭ್ಯವಿದೆ. ರೋಡ್ ಸಿಂಕ್ ಆ್ಯಪ್ ಮೂಲಕ ನ್ಯಾವಿಗೇಶನ್, ವಾಯ್ಸ್ ಆಸಿಸ್ಟ್ ಸೇರಿದಂತೆ ಹಲವು ಸೌಲಭ್ಯ ಬಳಸಿಕೊಳ್ಳಬಹುದು. ಯುಎಸ್‌ಬಿ ಟೈಪ್ ಸಿ ಚಾರ್ಜಿಂಗ್ ಪೋರ್ಟ್ ಸೇರಿದಂತೆ ಇತರ ಕೆಲ ಫೀಚರ್ಸ್ ಕೂಡ ಲಭ್ಯವಿದೆ.
ಹೋಂಡಾ SP125 ಬೈಕ್ ಎಂಜಿನ್
ಹೋಂಡಾ SP125 ಬೈಕ್ 124 ಸಿಸಿ ಎಂಜಿನ್ ಹೊಂದಿದೆ, ಸಿಂಗಲ್ ಸಿಲಿಂಡರ್, ಫ್ಯುಲೆಟ್ ಇಂಜೆಕ್ಟೆಡ್ ಎಂಜಿನ್ ಇದಾಗಿದೆ. ಸರ್ಕಾರದ ನೀತಿಗೆ ಅನುಗುಣವಾಗಿ ಹೋಂಡಾ OBD2B ಎಂಜಿನ್ ಅಭಿವೃದ್ಧಿಪಡಿಸಿ ಈ ಬೈಕ್‌ನಲ್ಲಿ ನೀಡಲಾಗಿದೆ. 8 kW ಪವರ್ ಹಾಗೂ 10.9 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 5 ಸ್ಪೀಡ್ ಗೇರ್ ಬಾಕ್ಸ್ ಹೊಂದಿದೆ. ಮತ್ತೊಂದು ವಿಶೇಷ ಅಂದರೆ ಟ್ರಾಫಿಕ್‌ನಲ್ಲಿ ವಾಹನ ನಿಲ್ಲಿಸಿದಾಗ ಐಡ್ಲಿಂಗ್ ಆಟೋಮ್ಯಾಟಿಕ್ ಆಗಿ ನಿಲ್ಲಲಿದ. ಈ ಮೂಲಕ ಟ್ರಾಫಿಕ್‌ನಲ್ಲಿ ಇಂಧನ ಉಳಿತಾಯ ಮಾಡಲಿದೆ. ಇದರಿಂದ ನಗರದಲ್ಲಿ ಬೈಕ್ ರೈಡ್ ಮಾಡುತ್ತಿದ್ದರೂ ಉತ್ತಮ ಮೈಲೇಜ್ ನೀಡಲಿದೆ.
ಭಾರತದಲ್ಲಿ ಹೋಂಡಾ SP125 ಬೈಕ್ ಲಾಂಚ್ ಮಾಡಲು ನಾವು ಉತ್ಸುಕರಾಗಿದ್ದೇವೆ ಎಂದು ಹೋಂಡಾ ಮೋಟಾರ್‌ಸೈಕಲ್ ಸ್ಕೂಟರ್ ನಿರ್ದೇಶಕ ತ್ಸುಮು ಒಟಾನಿ ಹೇಳಿದ್ದಾರೆ. ಇದು OBD2B ತಂತ್ರಜ್ಞಾನದ ಬೈಕ್. ಜೊತಗೆ ಹೆಚ್ಚುವರಿ ಫೀಚರ್ಸ್, ಡಿಸೈನ್, ಬೆಲೆ, ಬಣ್ಣ, ಲಭ್ಯತೆ ಸೇರಿದಂತೆ ಎಲ್ಲಾ ರೀತಿಯಿಂದಲೂ ಬೈಕ್ ಉತ್ತಮವಾಗಿದೆ. ಪ್ರತಿ ದಿನ ಬೈಕ್ ಬಳಸುವವರಿಗೆ, ನಗರ ಅಥವಾ ಗ್ರಾಮೀಣ ಭಾಗದಲ್ಲಿ ಬೈಕ್ ಬಳಸುವವರಿಗೆ ಇದು ಉತ್ತಮ ಆಯ್ಕೆಯಾಗಿದೆ ಎಂದಿದ್ದಾರೆ.
ಕರ್ನಾಟಕದಲ್ಲಿ ತಯಾರಾದ ಹೋಂಡಾ ಆ್ಯಕ್ಟೀವಾ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ!