ಹೊಚ್ಚ ಹೊಸ ಹೀರೋ ಎಡ್ಡಿ ಎಲೆಕ್ಟ್ರಿಕ್ ಸ್ಕೂಟರ್ ನಗರ, ಹಾಗೂ ಗ್ರಾಮೀಣ ಭಾಗಗಳಲ್ಲಿ ಬಳಕೆಗೆ ಸೂಕ್ತ ನೂತನ ಸ್ಕೂಟರ್ ಬೆಲೆ 72,000 ರೂಪಾಯಿ(ಎಕ್ಸ್ ಶೋ ರೂಂ)  

ನವದೆಹಲಿ(ಮಾ.01): ಹೀರೋ ಎಲೆಕ್ಟ್ರಿಕ್(Hero Electric) ಹೊಸ ಮಾದರಿಯ ಇವಿ ಬಿಡುಡೆ ಮಾಡಿದೆ. ಹತ್ತಿರದ ಸ್ಥಳಗಳಿಗೆ ಪ್ರಯಾಣ, ಡೆಲಿವರಿ, ಗಾಲ್ಫ್ ಕೋರ್ಟ್‌ನಲ್ಲಿ ಸೇರಿದಂತೆ ದಿನ ನಿತ್ಯದ ಬಳಕೆಗೆ ಉಪಯುಕ್ತವಾಗುವ ಹೀರೋ ಎಡ್ಡಿ(Hero Eddy) ಎಲೆಕ್ಟ್ರಿಕ್ ಸ್ಕೂಟರ್ ಅನಾವರಣಗೊಂಡಿದೆ. ಸದ್ಯ ನೀಲಿ ಹಾಗೂ ಹಳದಿ ಬಣ್ಣಗಳಲ್ಲಿ ಸ್ಕೂಟರ್ ಲಭ್ಯವಿದೆ.

ಹೀರೋ ಎಡ್ಡಿ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ 72,000 ರೂಪಾಯಿ(ಎಕ್ಸ್ ಶೋ ರೂಂ). ಸದ್ಯ ಸ್ಕೂಟರ್ ಅನಾವರಣಗೊಂಡಿದೆ. ಆದರೆ ಸ್ಕೂಟರ್ ಮೈಲೇಜ್ ರೇಂಜ್, ಚಾರ್ಜಿಂಗ್ ಸಮಯ ಸೇರಿದಂತೆ ಇತರ ಮಾಹಿತಿಗಳು ಬಹಿರಂಗವಾಗಿಲ್ಲ. ಆದರೆ ಅತ್ಯುತ್ತಮ ಬೂಟ್ ಸ್ಪೇಸ್ ಹೊಂದಿದ್ದು, ಲಗೇಜ್ ಹೊತ್ತೊಯ್ಯಲು ಸುಲಭವಾಗಲಿದೆ.

ಹೀರೋ ಮೋಟಾರ್ಸ್, ಮಹೀಂದ್ರಾ ಪಾಲುದಾರಿಕೆಯಲ್ಲಿ ಮೊದಲ ಎಲೆಕ್ಟ್ರಿಕ್ ವಾಹನ ಬಿಡುಗಡೆ

ಹೀರೋ ಎಡ್ಡಿ ಸ್ಕೂಟರ್ ಖರೀದಿಸುವ ಗ್ರಾಹಕರು ರಿಜಿಸ್ಟ್ರೇಶನ್ ಮಾಡಬೇಕಿಲ್ಲ. ಇನ್ನು ಸ್ಕೂಟರ್ ರೈಡ್ ಮಾಡಲು ಲೈಸೆನ್ಸ್ ಬೇಕಿಲ್ಲ. ಕಾರಣ ಇದರ ಗರಿಷ್ಠ ವೇಗ ಕಡಿಮೆ. ಹೀಗಾಗಿ ಲೈಸೆನ್ಸ್ ಇಲ್ಲದೆ ರೈಡ್ ಮಾಡಬಹುದು. ನೂತನ ಸ್ಕೂಟರ್ ರಿವರ್ಸ್ ಮೂಡ್, ಸ್ಟೈಲೀಶ್ ಹೆಡ್‌ಲ್ಯಾಂಪ್ಸ್ ಸೇರಿದಂತೆ ಹಲವು ಫೀಚರ್ಸ್ ಹೊಂದಿದೆ.

ದೇಶದಲ್ಲಿ ಹೀರೋ ಎಲೆಕ್ಟ್ರಿಕ್ ಹಾಗೂ ಹೀರೋ ಮೋಟಾರ್‌ಕಾರ್ಪ್ ದ್ವಿಚಕ್ರ ವಾಹನ ಮಾರುಕಟ್ಟೆ ಆಕ್ರಮಿಸಿಕೊಳ್ಳುತ್ತಿದೆ. ಈಗಾಗೇ ಭಾರತದಲ್ಲಿ ಮಾರುಕಟ್ಟೆಯಲ್ಲಿ ಬಹುಪಾಲ ಹೊಂದಿರುವ ಹೀರೋ ಇದೀಗ ಎಲೆಕ್ಟ್ರಿಕ್ ಸ್ಕೂಟರ್ ಮೂಲಕ ಸಂಚಲನ ಮೂಡಿಸುತ್ತಿದೆ

Electric Scooter ಏಥರ್ ಎನರ್ಜಿಯಲ್ಲಿ ಹೀರೋ ಮೋಟೋಕಾರ್ಪ್ ಹೂಡಿಕೆ, ಷೇರು ಬೆಲೆ ಶೇ.5ರಷ್ಟು ಏರಿಕೆ!

ಇವಿ ಚಾರ್ಜಿಂಗ್‌ಗೆ ಹೀರೋ ಮತ್ತು ಭಾರತ್‌ ಪೆಟ್ರೋಲಿಯಂ ಸಹಯೋಗ
ಇಲೆಕ್ಟ್ರಿಕ್‌ ವಾಹನಗಳಿಗೆ ಚಾರ್ಜಿಂಗ್‌ ಪಾಯಿಂಟ್‌ ನಿರ್ಮಿಸುವ ಸಲುವಾಗಿ ಹೀರೋ ಮೋಟೋಕಾಪ್‌ರ್‍ ಜೊತೆಗೆ ಭಾರತ್‌ ಪೆಟ್ರೋಲಿಯಂ ತನ್ನ ಸಹಭಾಗಿತ್ವ ಘೋಷಿಸಿದೆ. ಈ ಸಹಯೋಗದಲ್ಲಿ ದೇಶಾದ್ಯಂತ 7000 ಎನರ್ಜಿ ಸ್ಟೇಶನ್‌ ನೆಟ್‌ವರ್ಕ್ ಸೃಷ್ಟಿಯಾಗಲಿದೆ. ಅಲ್ಲೆಲ್ಲಾ ಎಲೆಕ್ಟ್ರಿಕ್‌ ವಾಹನ್‌ ಚಾಜ್‌ರ್‍ ಮಾಡಬಹುದಾಗಿದೆ. ಮೊದಲ ಹಂತದಲ್ಲಿ ದೆಹಲಿ, ಬೆಂಗಳೂರು ಸೇರಿ 9 ನಗರಗಳಲ್ಲಿ ಚಾರ್ಜಿಂಗ್‌ ಸ್ಟೇಶನ್‌ ಸ್ಥಾಪಿಸುವ ಗುರಿ ಹೊಂದಿದ್ದೇವೆ ಎಂದು ಕಂಪನಿ ಹೇಳಿದೆ.

ಹೀರೋ ಎಕ್ಸ್‌ಪಲ್ಸ್‌ 200 ಬೈಕ್‌ ಬುಕಿಂಗ್‌ ಆರಂಭ
ಹೀರೋ ಮೋಟೋಕಾಪ್‌ರ್‍ ತನ್ನ ಎಕ್ಸ್‌ಪಲ್ಸ್‌ 200 4 ವಾಲ್‌್ವ ಬೈಕ್‌ನ ಎರಡನೇ ಬ್ಯಾಚ್‌ ಮಾರಾಟ ಆರಂಭಿಸುತ್ತಿದ್ದು, ಬುಕಿಂಗ್‌ ಆರಂಭಿಸಿದೆ. ಕಂಪನಿ ವೆಬ್‌ಸೈಟ್‌ ಮೂಲಕ ಆನ್‌ಲೈನ್‌ ಬುಕ್ಕಿಂಗ್‌ ಮಾಡಬಹುದು. 10,000 ರು. ಮುಂಗಡ ಪಾವತಿ ಮಾಡಿದರೆ ಶೀಘ್ರ ಬೈಕ್‌ ನಿಮ್ಮ ಮನೆ ಬಾಗಿಲಿಗೆ ತಲುಪಿಸುವುದಾಗಿ ಕಂಪನಿ ತಿಳಿಸಿದೆ. 200 ಸಿಸಿ ಸಾಮರ್ಥ್ಯದ ಈ ಬೈಕ್‌ ಬಿಎಸ್‌ 6, ಆಯಿಲ್‌ ಕೂಲ್ಡ್‌ ಎಂಜಿನ್‌ ಹೊಂದಿದೆ. 8500 ಆರ್‌ಪಿಎಂ ಇದ್ದು, 19.1 ಪಿಎಸ್‌ ಪವರ್‌ ಉತ್ಪಾದಿಸುತ್ತದೆ. ಟ್ರಯಲ್‌ ಬ್ಲೂ, ಬ್ಲಿಟ್‌್ಜ ಬ್ಲೂ ಮತ್ತು ರೆಡ್‌ ರೈಡ್‌ ಬಣ್ಣಗಳಲ್ಲ ಲಭ್ಯ.

ಹೀರೋ ಡೆಸ್ಟಿನಿ ಬಂತು
‘ಡೆಸ್ಟಿನಿ 125 ಪ್ಲಾಟಿನಂ’ ಸ್ಕೂಟರ್‌ ಹೀರೋ ಮೋಟೋಕಾಪ್‌ರ್‍ನಿಂದ ಬಿಡುಗಡೆಯಾಗಿದೆ. ಮ್ಯಾಸ್ಟೊ್ರೕ ಎಡ್ಜ್‌ 125ಯನ್ನು ಸ್ವಲ್ಪಮಟ್ಟಿಗೆ ಹೋಲುವ ಸ್ಕೂಟರ್‌ ಇದು. 125 ಸಿಸಿ ಬಿಎಸ್‌ 6 ಎಂಜಿನ್‌ ಜೊತೆಗೆ ಎಕ್ಸ್‌ ಸೆನ್ಸ್‌ ಟೆಕ್ನಾಲಜಿ ಅಳವಡಿಸಲಾಗಿದೆ. ಇದರಿಂದ ಸ್ಕೂಟರ್‌ನ ಸಾಮರ್ಥ್ಯ ಹೆಚ್ಚಲಿದೆ ಎಂದು ಕಂಪೆನಿ ಹೇಳಿದೆ. 7000 ಆರ್‌ಪಿಎಂ, 9 ಬಿಎಚ್‌ಪಿ ಹೊಂದಿದೆ. ಟಾರ್ಕ್ 10.4 ಎನ್‌ಎಂ, 5500 ಆರ್‌ಪಿಎಂ ಇದೆ. ಸ್ಮಾರ್ಟ್‌ ಟೆಕ್ನಾಲಜಿ ಅಳವಡಿಸಿರುವ ಕಾರಣ ಐಡ್ಲ್‌, ಸ್ಟಾರ್ಟ್‌, ಸ್ಟಾಪ್‌ ಇನ್ನಷ್ಟುಸರಳವಾಗಿದೆ ಎಂದು ಕಂಪೆನಿ ತಿಳಿಸಿದೆ.
ಎಕ್ಸ್‌ಶೋರೂಮ್‌ ದರ: 72,050 ರು