Asianet Suvarna News Asianet Suvarna News

ಕರ್ನಾಟಕ ಕೊರೊನಾ ಹೋರಾಟಕ್ಕೆ TVS ಮೋಟಾರ್ 4 ಕೋಟಿ ನೆರವು

  • ಕೊರೋನಾ ವಿರುದ್ಧದ ಹೋರಾಟಕ್ಕೆ ಟಿವಿಎಸ್ ಮೋಟಾರ್ ನೆರವು
  • ಹೆಚ್ಚುವರಿಯಾಗಿ 300 ಆಕ್ಸಿಜನ್ ಕಾನ್ಸಂಟ್ರೇಟರ್ಸ್ ಸೇರಿದಂತೆ ವೈದ್ಯಕೀಯ ಸಲಕರಣೆ ನೆರವು
CM BS Yediyurappa received cheque essential medical supplies from TVS Motor Company ckm
Author
Bengaluru, First Published May 21, 2021, 7:19 PM IST

ಬೆಂಗಳೂರು(ಮೇ.21):  ಕರ್ನಾಟಕದ ಸರ್ಕಾರದ ಕೊರೋನಾ ವಿರುದ್ಧದ ಹೋರಾಟಕ್ಕೆ ಹಲವು ಕಂಪನಿಗಳು, ಸಂಘ ಸಂಸ್ಥೆಗಳು ನೆರವು ನೀಡುತ್ತಿದೆ. ಈ ಮೂಲಕ ಕರ್ನಾಟಕವನ್ನು ಕೋವಿಡ್‌ನಿಂದ ಮುಕ್ತ ಮಾಡುಲು ಒಗ್ಗಟ್ಟಾಗಿ ಹೋರಾಟ ನಡೆಯುತ್ತಿದೆ. ಇದೀಗ ಟಿವಿಎಸ್ ಮೋಟಾರ್ಸ್ 1 ಕೋಟಿ ರೂಪಾಯಿ ನಗದು ಹಾಗೂ ಇತರ 3 ಕೋಟಿ ರೂಪಾಯಿ ವೈದ್ಯಕೀಯ ಸಲಕರಣೆ  ನೆರವು ನೀಡಿದೆ.

ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ TVS ಆಟೋ ಸವಾರಿ ಅಭಿಯಾನ; ಬೆಂಗಳೂರಲ್ಲಿ ಚಾಲನೆ!

ಟಿವಿಎಸ್ ಮೋಟಾರ್ ಕಂಪನಿಯು ಸುಂದರಂ ಕ್ಲೇಟನ್ ಲಿಮಿಟೆಡ್  ಹಾಗೂ ತನ್ನ ಸಾಮಾಜಿಕ ಸೇವಾ ಸಂಸ್ಥೆಯಾದ ಶ್ರೀನಿವಾಸನ್ ಸರ್ವೀಸಸ್ ಟ್ರಸ್ಟ್ ಮೂಲಕ ಕೋವಿಡ್ ಪರಿಹಾರ ಕಾರ್ಯಗಳಿಗಾಗಿ  1 ಕೋಟಿ ರೂಪಾಯಿ ನೆರವು ನೀಡಿದೆ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿಯಾಗಿ 1 ಕೋಟಿ ರೂಪಾಯಿ ಚೆಕ್ ನೀಡಿತು.

ಮಹಿಳಾ ಸಬಲೀಕರಣಕ್ಕೆ TVS ಮೋಟಾರ್ ಒನ್ ಡ್ರೀಮ್ ಒನ್ ರೈಡ್‌ಗೆ ಭಾರಿ ಬೆಂಬಲ!

ಹೆಚ್ಚುವರಿಯಾಗಿ 300 ಆಕ್ಸಿಜನ್ ಕಾನ್ಸನ್‍ಟ್ರೇಟರ್ಸ್, ಅಗತ್ಯ ವೈದ್ಯಕೀಯ ಪರಿಕರಗಳು ಸೇರಿದಂತೆ ರೂ. 3 ಕೋಟಿ ಮೌಲ್ಯದ ಪರಿಕರಗಳನ್ನು ಕೊಡುಗೆ ನೀಡಿದೆ.  ಟಿವಿಎಸ್ ಮೋಟಾರ್ ಕಂಪನಿಯ ಉಪಾಧ್ಯಕ್ಷ ವಿ.ಆರ್.ಕರುಣಾಕರ ರೆಡ್ಡಿ ಮತ್ತು ಟಿವಿಎಸ್ ಮೋಟಾರ್ ಕಂಪನಿಯ ಸಹ ಉಪಾಧ್ಯಕ್ಷರಾದ ಸೇತುರಾಮನ್ ಅವರಿಂದ ಬಿಎಸ್‌ವೈ ಚೆಕ್ ಹಾಗೂ ಇತರ ವೈದ್ಯಕೀಯ ನೆರವು ಸ್ವೀಕರಿಸಿದರು.

Follow Us:
Download App:
  • android
  • ios