6ನೇ ತರಗತಿ ಡ್ರೌಪ್ ಔಟ್, ಎಲೆಕ್ಟ್ರಿಕ್ ಸ್ಕೂಟರ್ ಕಂಪನಿ ಆರಂಭಿಸಿ 1 ವರ್ಷದಲ್ಲಿ 6 ಕೋಟಿ ಆದಾಯ!
ಸಾಧಿಸುವ ಛಲ ಇರಬೇಕು, ಗುರಿ ಸ್ಪಷ್ಟವಾಗಿದ್ದರೆ ಅಡೆತಡೆಗಳು ಸಾಧನೆಗೆ ಅಡ್ಡಿಯಾಗಲ್ಲ ಅನ್ನೋ ಮಾತಿದೆ. ಇದಕ್ಕೆ ಮತ್ತೊಂದು ಉದಾಹರಣೆ ದೇವಿರೆಡ್ಡಿ ವೇಣುಗೋಪಾಲ್. 6ನೇ ತರಗತಿ ಬಳಿಕ ಶಾಲೆ ಅರ್ಧಕ್ಕೆ ಬಿಟ್ಟ ವೇಣುಗೋಪಾಲ್, ಒಂದರೆಡು ಕಂಪನಿಗಳಲ್ಲಿ ಕೆಲಸವೂ ಮಾಡಿದ್ದ. ಯಾವೂದೂ ಕೈಗೂಡಲಿಲ್ಲ. ಆದರೆ 2021ರಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಕಂಪನಿ ಆರಂಬಿಸಿ ಇದೀಗ ಒಂದೇ ವರ್ಷದಲ್ಲಿ 6 ಕೋಟಿ ಆದಾಯ ಗಳಿಸಿದ್ದಾರೆ.
ಸತ್ಯಸಾಯಿ(ನ.25): ಭಾರತದಲ್ಲಿ ಹಲವು ಸಾಧಕರು, ಉದ್ಯಮಿಗಳು ಶೂನ್ಯದಿಂದ ಆರಂಭಿಸಿ ಅತ್ಯುನ್ನತ ಮಟ್ಟಕ್ಕೆ ಏರಿದ್ದಾರೆ. ಇದಕ್ಕೆ ಸಾಕಷ್ಟು ಉದಾಹರಣೆಗಳು ನಮ್ಮ ಕಣ್ಣ ಮುಂದಿದೆ. ಇದೀಗ ಈ ಸಾಲಿಗೆ ದೇವಿರೆಡ್ಡಿ ವೇಣುಗೋಪಾಲ್ ಸೇರಿಕೊಂಡಿದ್ದಾರೆ. ದೇವಿ ರೆಡ್ಡಿ ವೇಣುಗೋಪಾಲ್ 6ನೇ ತರಗತಿ ಬಳಿಕ ಶಾಲೆಗೆ ಹೋಗಿಲ್ಲ. ಇದೀಗ ಸ್ವಂತ ಕಂಪನಿ ಹೊಂದಿದ್ದಾರೆ. ಇಷ್ಟೇ ಅಲ್ಲ ಒಂದೇ ವರ್ಷದಲ್ಲಿ 6 ಕೋಟಿ ರೂಪಾಯಿ ಆದಾಯ ಗಳಿಸುವ ಮೂಲಕ ಭಾರತದಲ್ಲೇ ಸಂಚಲನ ಸೃಷ್ಟಿಸಿದ್ದಾರೆ. 2021ರಲ್ಲಿ ದೇವಿರೆಡ್ಡಿ ವೇಣುಗೋಪಾಲ್ ಎಲೆಕ್ಟ್ರಿಕ್ ಸ್ಕೂಟರ್ ಕಂಪನಿ ಆರಂಭಿಸಿ ಯಶಸ್ವಿಯಾಗಿದ್ದಾರೆ. ವೇಣುಗೋಪಾಲ್ ಮೋಟಾರ್ಸ್ ಅನ್ನೋ ಎಲೆಕ್ಟ್ರಿಕ್ ಕಂಪನಿ ಒಂದೇ ವರ್ಷದಲ್ಲಿ 6 ಕೋಟಿ ರೂಪಾಯಿ ಆದಾಯ ಗಳಿಸುವ ಮೂಲಕ ಯಶಸ್ವಿ ಉದ್ಯಮಿಯಾಗಿ ಬೆಳೆದು ನಿಂತಿದ್ದಾರೆ.
ದೇವಿರೆಡ್ಡಿ ವೇಣುಗೋಪಾಲ್ ಆಂಧ್ರ ಪ್ರದೇಶದ ಸತ್ಯಸಾಯಿ ಜಿಲ್ಲೆಯ ಧರ್ಮಾವರಂನಲ್ಲಿ ವೇಣುಗೋಪಾಲ್ ಮೋಟಾರ್ಸ್ ಕಂಪನಿ ಆರಂಭಿಸಿದ್ದಾರೆ. ಎರಡು ಮಾಡೆಲ್ ಥಂಡರ್ ಹಾಗೂ ವೇಣು ಅನ್ನೋ ಸ್ಕೂಟರ್ ಬಿಡುಗಡೆ ಮಾಡಿ ಹೊಸ ಸಂಚಲನ ಸೃಷ್ಟಿಸಿದ್ದಾರೆ. ಆಗಸ್ಟ್ 2021ರಲ್ಲಿ ಮೊದಲ ಎಲೆಕ್ಟ್ರಿಕ್ ಸ್ಕೂಟರ್‌ನ್ನು ತಿರುಪತಿ ತಿರುಮಲ ದೇವಸ್ಥಾನಂ ಟ್ರಸ್ಟ್‌ಗೆ ನೀಡಲಾಯಿತು. 2021ರ ಆಗಸ್ಟ್‌ನಿಂದ ಶುರುವಾದ ಎಲೆಕ್ಟ್ರಿಕ್ ಸ್ಕೂಟರ್ ಜರ್ನಿ ಇದೀ ಒಂದೇ ವರ್ಷದಲ್ಲಿ 6 ಕೋಟಿ ರೂಪಾಯಿ ಆದಾಯ ಗಳಿಸಿದೆ.
47 ಸಾವಿರ ರೂಗೆ GT ಫೋರ್ಸ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ!
ವೇಣುಗೋಪಾಲ್ ಮೋಟಾರ್ಸ್ ಕಂಪಿಯ ಥಂಡರ್ ಸ್ಕೂಟರ್ ಬೆಲೆ 53,000 ರೂಪಾಯಿ, ವೇಣು ಸ್ಕೂಟರ್ ಬೆಲೆ 55,000 ರೂಪಾಯಿ(ಎಕ್ಸ್ ಶೋ ರೂಂ). ಲಿಥಿಯಂ ಐಯಾನ್ ಬ್ಯಾಟರಿ ಸ್ಕೂಟರ್ ಒಂದು ಬಾರಿ ಚಾರ್ಜ್ ಮಾಡಿದರೆ 80 ಕಿಲೋಮೀಟರ್ ಮೈಲೇಜ್ ನೀಡಲಿದೆ. ಇನ್ನು ಚಾರ್ಜಿಂಗ್ ಸಮಯ 3 ರಿಂದ 4 ಗಂಟೆ. ಕೈಗೆಟುಕುವ ದರದಲ್ಲಿ ಲಭ್ಯವಿರುವ ಈ ಸ್ಕೂಟರ್‌ಗೆ ಭಾರಿ ಬೇಡಿಕೆ ವ್ಯಕ್ತವಾಗಿದೆ.
ಈಗಾಗಲೇ 1145 ಸ್ಕೂಟರ್ ಮಾರಾಟಗೊಂಡಿದೆ. ಪ್ರತಿ ತಿಂಗಳು 160-200 ಸ್ಕೂಟರ್ ಉತ್ಪಾದನೆ ಮಾಡಲಾಗುತ್ತಿದೆ. ಪ್ರತಿ ತಿಂಗಳು 66 ಲಕ್ಷ ರೂಪಾಯಿ ಸ್ಕೂಟರ್ ಮಾರಾಟವಾಗುತ್ತಿದೆ. 2021ರ ಆಗಸ್ಟ್‌ನಿಂದ 2022ರ ಆಗಸ್ಟ್ ವರೆಗೆ ಒಂದು ವರ್ಷದಲ್ಲಿ 6 ಕೋಟಿ ರೂಪಾಯಿ ಆದಾಯಗಳಿಸಿದೆ.
ಕೈಗೆಟುಕವ ದರದಲ್ಲಿ ಕೊಮಾಕಿ ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್, 100 ಕಿ.ಮೀ ಮೈಲೇಜ್!
ವೇಣುಗೋಪಾಲ್ ಯಶಸ್ಸಿನ ಹಾದಿ ಸುಗಮವಾಗಿರಲಿಲ್ಲ. ಕಾರಣ ದೇವಿರೆಡ್ಡಿ ವೇಣುಗೋಪಾಲ್ 6ನೇ ತರಗತಿ ಬಳಿಕ ಶಾಲೆಗೆ ಹೋಗಿಲ್ಲ. 6ನೇ ತರಗತಿಗೆ ಡ್ರಾಪ್ ಔಟ್, ಬಳಿಕ 10ನೇ ತರಗತಿ ಪರೀಕ್ಷೆ ಬರೆದು ಎಸ್‌ಎಸ್‌ಎಲ್‌ಸಿ ಅಂಕಪಟ್ಟಿಯೊಂದಿಗೆ ಮೆಕಾನಿಕ್ ಡಿಪ್ಲೋಮಾ ಕ್ಲೀಯರ್ ಮಾಡಿದ್ದ ವೇಣುಗೋಪಾಲ್ ಕೆಲ ಕಂಪನಿಗಳಲ್ಲಿ ಸಂಬಳಕ್ಕೆ ಕೆಲಸ ಮಾಡಿದ್ದರು. 19ನೇ ವಯಸ್ಸಿನಲ್ಲಿ ವೇಣುಗೋಪಾಲ್ ಫೈನಾನ್ಸ್ ಕಂಪನಿಯಲ್ಲಿ ಕಲೆಕ್ಷನ್ ಎಕ್ಸ್‌ಕ್ಯೂಟೀವ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದರು. 5,500 ರೂಪಾಯಿ ಸಂಬಂಳಕ್ಕೆ ಕೆಲಸ ಮಾಡಿದ ವೇಣುಗೋಪಾಲ್ ಬಳಿಕ ಕೆಲಸ ಕಂಪನಿಗಳಲ್ಲಿ ಕೆಲಸ ಮಾಡಿದ್ದರು.
2021ರಲ್ಲಿ ಎಲ್ಲಾ ಕೆಲಸಕ್ಕೆ ಗುಡ್ ಬೈ ಹೇಳಿ ಎಲೆಕ್ಟ್ರಿಕ್ ಸ್ಕೂಟರ್ ಕಂಪನಿ ಆರಂಭಿಸಿದ ವೇಣುಗೋಪಾಲ್ ಇಂದು ಯಶಸ್ವಿ ಉದ್ಯಮಿಯಾಗಿದೆ ಬೆಳೆದು ನಿಂತಿದ್ದಾರೆ.