Asianet Suvarna News Asianet Suvarna News

SSLC ಪಾಸಾದವರಿಗೆ ಇಲ್ಲಿದೆ ಉದ್ಯೋಗಾವಕಾಶ

ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಿಂದ ಸೆಕ್ಯೂರಿಟಿ ಹುದ್ದೆಗಳ ನೇಮಕಾತಿ| ಅ.24 ರಂದು ಔರಾದ್‌ ಸರ್ಕಾರಿ ಕೈಗಾರಿಕಾ ತರಬೇತಿ ಕೆಂದ್ರದಲ್ಲಿ ನೇರ ಸಂದರ್ಶನ| ಕ್ಯಾಪ್ಸ್ಟ್‌ನ್‌ ಫೇಸಿಲಿಟೆಟರ್ ಮ್ಯಾನೇಜಮೆಂಟ್ ಪ್ರೈವೇಟ್‌ ಲಿಮಿಟೆಡ್ ಕಂಪನಿಯಲ್ಲಿ 200 ಕ್ಕೂ ಹೆಚ್ಚು ಸೆಕ್ಯೂರಿಟಿಗಾರ್ಡ್ ಹುದ್ದೆಗಳ ಆಯ್ಕೆ| ಎಸ್‌ಎಸ್‌ಎಲ್‌ಸಿ, ಪಿಯುಸಿ ಐಟಿಐ, ಪದವಿ ಉತ್ತೀರ್ಣ ಅಥವಾ ಅನುತ್ತೀರ್ಣರಾದ ಹಾಗೂ 18 ರಿಂದ 35 ವರ್ಷ ವಯೋಮಿತಿಯಲ್ಲಿರುವ ಅಭ್ಯರ್ಥಿಗಳು ಪಾಲ್ಗೊಳ್ಳಬಹುದು|

Walk in Interview in Aurad in Bidar District
Author
Bengaluru, First Published Oct 23, 2019, 2:30 PM IST
  • Facebook
  • Twitter
  • Whatsapp

ಬೀದರ್[ಅ.23]: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಿಂದ ಸೆಕ್ಯೂರಿಟಿ ಹುದ್ದೆಗಳ ನೇಮಕಾತಿಗೆ ಅ.24 ರ ಬೆಳಗ್ಗೆ 11 ರಿಂದ ಮಧ್ಯಾಹ್ನ 3 ರವರೆಗೆ ಔರಾದ್‌ ಸರ್ಕಾರಿ ಕೈಗಾರಿಕಾ ತರಬೇತಿ ಕೆಂದ್ರದಲ್ಲಿ ನೇರ ಸಂದರ್ಶನ ಏರ್ಪಡಿಸಲಾಗಿದೆ. 

ಕ್ಯಾಪ್ಸ್ಟ್‌ನ್‌ ಫೇಸಿಲಿಟೆಟರ್ ಮ್ಯಾನೇಜಮೆಂಟ್ ಪ್ರೈವೇಟ್‌ ಲಿಮಿಟೆಡ್ ಕಂಪನಿಯಲ್ಲಿ 200 ಕ್ಕೂ ಹೆಚ್ಚು ಸೆಕ್ಯೂರಿಟಿಗಾರ್ಡ್ ಹುದ್ದೆಗಳ ಆಯ್ಕೆಗೆ ಈ ಸಂದರ್ಶನವನ್ನು ಏರ್ಪಡಿಸಲಾಗಿದೆ. ಎಸ್‌ಎಸ್‌ಎಲ್‌ಸಿ, ಪಿಯುಸಿ ಐಟಿಐ, ಪದವಿ ಉತ್ತೀರ್ಣ ಅಥವಾ ಅನುತ್ತೀರ್ಣರಾದ ಹಾಗೂ 18 ರಿಂದ 35 ವರ್ಷ ವಯೋಮಿತಿಯಲ್ಲಿರುವ ಅಭ್ಯರ್ಥಿಗಳು ಪಾಲ್ಗೊಳ್ಳಬಹುದು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಸಂದರ್ಶನಕ್ಕೆ ಬರುವಾಗ ರೆಸ್ಯೂಮ್, ವಿದ್ಯಾರ್ಹತೆಯ ಪ್ರಮಾಣ ಪತ್ರಗಳು, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಎರಡು ಭಾವಚಿತ್ರಗಳು ಹಾಗೂ ಬ್ಯಾಂಕ್ ಪಾಸ್‌ಬುಕ್‌ ಜೆರಾಕ್ಸ್ ಪ್ರತಿಯೊಂದಿಗೆ ಹಾಜರಾಗಗಬೇಕು. ಆಯ್ಕೆಯಾದವರಿಗೆ ಊಟ ಹಾಗೂ ವಾಹನ ಸೌಲಭ್ಯವಿರುತ್ತದೆ. ಗ್ರಾಮೀಣ ಅಭ್ಯರ್ಥಿಗಳಿಗೆ ವಿಶೇಷ ಆದ್ಯತೆ ನೀಡಲಾಗುತ್ತಿದೆ. 

ಮೊಬೈಲ್‌ಸಂಖ್ಯೆ: 8217886740 ಗೆ ಕರೆ ಮಾಡಿ ಪೂರ್ವ ನೋಂದಣಿ ಮಾಡಿಕೊಳ್ಳಬೇಕು. ಹೆಚ್ಚಿನ ಮಾಹಿತಿಗೆಕಚೇರಿ ದೂರವಾಣಿ ಸಂಖ್ಯೆ: 08482-234682 ,8217886740 ಗೆ ಸಂಪರ್ಕಿಸಬಹುದು ಎಂದು ಜಿಲ್ಲಾಉದ್ಯೋಗ ವಿನಿಮಯ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow Us:
Download App:
  • android
  • ios