ಬೀದರ್[ನ.8]: ಜಿಲ್ಲೆಯ ಹುಮನಾಬಾದ್ ತಾಲೂಕಿನ ಹಳ್ಳಿಖೇಡ (ಬಿ) ಗ್ರಾಮದ ಸುಕ್ಷೇತ್ರ ಸೀಮಿ ನಾಗನಾಥ ದೇವಸ್ಥಾನದ ಜಾತ್ರಾ ಮಹೋತ್ಸವವು ನ. 14 ರಿಂದ 21 ರವರೆಗೆ ಜರುಗಲಿದೆ. ನ.14 ರಂದು ಬೆಳಗ್ಗೆ ಮಹಾರುದ್ರಾಭಿಷೇಕ ಪೂಜೆ, ಸಂಜೆ 4 ಗಂಟೆಗೆ ದೀಪಾರ್ಚನೆ ನಂತರ ಪಾದಪೂಜೆ ಕಾರ್ಯಕ್ರಮ. 15 ರಂದು ಬೆಳಗ್ಗೆ ಮಹಾರುದ್ರಾಭಿಷೇಕ ಪೂಜೆ, ಸಂಜೆ 6ಕ್ಕೆ ದೀಪಾರ್ಚನೆ ಮಹಾ ಮಂಗಳಾರತಿ ಹಾಗೂ ರಾತ್ರಿ ಪಲ್ಲಕ್ಕಿ ಉತ್ಸವ, 16 ರಂದು ಬೆಳಗ್ಗೆ ಮಹಾರುದ್ರಾಭಿಷೇಕ ಪೂಜೆ, ಸಂಜೆ 6 ಗಂಟೆಗೆ ದೀಪಾರ್ಚನೆ, ರಾತ್ರಿ ಡೊಳ್ಳು ಕುಣಿತಗಳಿಂದ ಪಲ್ಲಕ್ಕಿ ಉತ್ಸವದೊಂದಿಗೆ ಬೆಳಗಿನ ಜಾವ 5 ಗಂಟೆಗೆ ವಿವಿಧ ರೀತಿಯ ವರ್ಣರಂಜಿತ ಮದ್ದುಗಳ ಘರ್ಷಣೆಯ ಪ್ರದರ್ಶನದೊಂದಿಗೆ ಹಾಗೂ ಪಂಡಿತಾರಾದ್ಯ ಶಿವಾಚಾರ್ಯರು ಚಿಕ್ಕಮಠ ಸಂಸ್ಥಾನ ಹಳ್ಳಿಖೇಡ(ಬಿ) ಇವರ ಸಾನಿಧ್ಯದಲ್ಲಿ ಹಾಗೂ ಸಿಡಿಮದ್ದು ಆಕರ್ಷಣೆಯೊಂದಿಗೆ ಸರ್ವಭಕ್ತರ ಸಮೂಹದಲ್ಲಿ ರಥೋತ್ಸವ ಜರುಗಲಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ನ.17 ರಂದು ಬೆಳಗ್ಗೆ ಮಹಾರುದ್ರಾಭಿಷೇಕ ಪೂಜೆ, ಮಧ್ಯಾಹ್ನ 12.30 ರಿಂದ ತೆಲಂಗಾಣಾ, ಮಹಾರಾಷ್ಟ್ರ, ಕರ್ನಾಟಕದ ಕೇಸರಿ ಖ್ಯಾತ ಪೈಲ್ವಾನರಿಂದ ಜಂಗಿ ಕುಸ್ತಿಗಳು, ಸಂಜೆ 6 ಗಂಟೆಗೆ ದೀಪಾರ್ಚನೆ ನಡೆಯಲಿದೆ. 18 ರಂದು ಬೆಳಗ್ಗೆ ಮಹಾರುದ್ರಾಭಿಷೇಕ ಪೂಜೆ ನಂತರ ಕ್ರೀಡೆ ಸಂಜೆ 6 ಗಂಟೆಗೆ ದೀಪಾರ್ಚನೆ ಮಹಾಮಂಗಳಾರತಿ. 19 ರಂದು ಬೆಳಗ್ಗೆ ಮಹಾರುದ್ರಾಭಿಷೇಕ ಪೂಜೆ, ಸಂಜೆ 6 ಗಂಟೆಗೆ ದೀಪಾರ್ಚನೆ ಮಹಾಮಂಗಳಾರತಿ. 20 ರಂದು ಬೆಳಗ್ಗೆ ಮಹಾರುದ್ರಾಭಿಷೇಕ ಪೂಜೆ, ಸಂಜೆ 6 ಗಂಟೆಗೆ ದೀಪಾರ್ಚನೆ. 21 ರಂದು ಬೆಳಗ್ಗೆ ಮಹಾರುದ್ರಾಭಿಷೇಕ ಪೂಜೆ, ಸಂಜೆ 6 ಗಂಟೆಗೆ ದೀಪಾರ್ಚನೆ, ಮಹಾಮಂಗಳಾರತಿ, ಜಾತ್ರಾ ಮಹೋತ್ಸವದ ಸಮಾರೋಪ ಸಮಾರಂಭದೊಂದಿಗೆ ದೇವಸ್ಥಾನದಿಂದ ಗ್ರಾಮದವರೆಗೆ ಭವ್ಯ ಮೆರವಣಿಗೆ ಜರುಗಲಿದೆ ಎಂದು ದೇವಸ್ಥಾನದ ಆಡಳಿತಾಧಿಕಾರಿಗಳು ಪ್ರಕಣೆಯಲ್ಲಿ ತಿಳಿಸಿದ್ದಾರೆ.