Asianet Suvarna News Asianet Suvarna News

ಬೀದರ್: ಅಪರಾಧಿಗೆ 1 ವರ್ಷ ಶಿಕ್ಷೆ ನೀಡಿ ತೀರ್ಪು ನೀಡಿದ ನ್ಯಾಯಾಲಯ

ಸುಜಾಬಾಯಿ ಪಾಂಡುರಂಗ ಜಾಧವ್ ಎಂಬ ಅಪರಾಧಿಗೆ ಔರಾದ ಜೆಎಂಎಫ್‌ಸಿ ಕೋರ್ಟ್ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ| ಒಂದು ವರ್ಷ ಕಾರಾಗೃಹ ಶಿಕ್ಷೆ ಹಾಗೂ 10000 ರು. ದಂಡ| ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಎಂ.ಡಿ. ಆರೀಫ್ ಕಾಲಿಬುಡ್ಡೆ ನ್ಯಾಯಾಲಯದಲ್ಲಿ ವಾದ ಮಂಡನೆ| 

Offender Sentenced to 1 year From Court
Author
Bengaluru, First Published Oct 27, 2019, 12:37 PM IST
  • Facebook
  • Twitter
  • Whatsapp

ಬೀದರ್(ಅ27): ಅಬಕಾರಿ ಪ್ರಕರಣದಲ್ಲಿ ಔರಾದ ತಾಲೂಕಿನ ಹಂದಿಕೇರಾ ತಾಂಡಾದ ಸುಜಾಬಾಯಿ ಪಾಂಡುರಂಗ ಜಾಧವ್ ಎಂಬ ಅಪರಾಧಿಗೆ ಔರಾದ ಜೆಎಂಎಫ್‌ಸಿ ನ್ಯಾಯಾಲಯ ಒಂದು ವರ್ಷ ಕಾರಾಗೃಹ ಶಿಕ್ಷೆ ಹಾಗೂ 10000 ರು. ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ.

ಬೀದರ್ ಉಪ ವಿಭಾಗದ ಅಬಕಾರಿ ಉಪಅಧೀಕ್ಷಕ ಅನಿಲ ಕುಮಾರ ಪೋದ್ದಾರ ಅವರು 12 ಜನೆವರಿ 2012 ರಂದು ಔರಾದ್ ತಾಲೂಕಿನ ಹಂದಿಕೇರಾ ತಾಂಡಾ ಮೇಲೆ ಅಬಕಾರಿ ದಾಳಿ ಮಾಡಿ 16 ಲೀಟರ್ ಕಳ್ಳಭಟ್ಟಿ ಸಾರಾಯಿ ಜಪ್ತಿ ಪಡಿಸಿಕೊಂಡು ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿದ್ದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಔರಾದ್ ವಲಯದ ಅಬಕಾರಿ ಉಪ ನಿರೀಕ್ಷಕರಾದ ಮೀರ ಮೆಹಬೂಬ ಅಲಿ ಅವರು ತನಿಖೆ ನಡೆಸಿ ಈ ಆರೋಪಿಗಳ ವಿರುದ್ಧ ದೋಷಾರೋಪಣಾ ಪಟ್ಟಿಯನ್ನು ಘನ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಔರಾದ್ ಜೆಎಂಎಫ್‌ಸಿ ನ್ಯಾಯಾಲಯದ ಗೌರವಾನ್ವಿತ ನ್ಯಾಯಾಧೀಶರಾದ ಶಶಿಕಾಂತ ಬಿ. ಭಾವಿಕಟ್ಟಿ ಅ.16 ರಂದು ತೀರ್ಪು ನೀಡಿರುತ್ತಾರೆ. ಸದರಿ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಎಂ.ಡಿ. ಆರೀಫ್ ಕಾಲಿಬುಡ್ಡೆ ನ್ಯಾಯಾಲಯದಲ್ಲಿ ವಾದ ಮಂಡಿಸಿರುತ್ತಾರೆ ಎಂದು ಅಬಕಾರಿ ಇಲಾಖೆಯ ಪ್ರಕಟಣೆ ತಿಳಿಸಿದೆ.
 

Follow Us:
Download App:
  • android
  • ios