ಬೀದರ್[ನ.3]: ಇತ್ತೀಚೆಗೆ ರಾಜ್ಯದಲ್ಲಿ ಮೂಲ ಕಾಂಗ್ರೆಸಿಗರಿಂದ ಪರ್ಯಾಯ ನಾಯಕನ ಕೂಗು ಕೇಳಿ ಬರುತ್ತಿದೆ. ಆದರೆ, ಬೀದರ್ ನಲ್ಲಿ ಮಾತ್ರ  ಮಾಜಿ ಸಿದ್ದರಾಮಯ್ಯ ಅವರ ಅಭಿಮಾನಿಗಳು ಮಾತ್ರ "ಮುಂದಿನ ಸಿಎಂ ಸಿದ್ದರಾಮಯ್ಯ" ಅವರೇ ಎಂದು ಹೇಳುತ್ತಿದ್ದಾರೆ.

ಹೌದು, ಸಿದ್ದರಾಮಯ್ಯ ಅವರ ಅಭಿಮಾನಿಗಳು "ಮುಂದಿನ ಸಿಎಂ ಸಿದ್ದರಾಮಯ್ಯ" ಎನ್ನುವ ಕಟೌಟ್ ಹಾಕಿದ್ದಾರೆ. ಈ ಮೂಲಕ ಮೂಲ ಕಾಂಗ್ರೆಸಿಗರಿಗೆ ಸಿದ್ದರಾಮಯ್ಯ ಅಭಿಮಾನಿಗಳು ಟಾಂಗ್ ಕೊಟ್ಟಿದ್ದಾರೆ. ರಾಜ್ಯ ಕಾಂಗ್ರೆಸ್ ನಲಲಿ ಪರ್ಯಾಯ ನಾಯಕನ ಕೂಗು ಎದ್ದ ಬೆನ್ನಲ್ಲೆ ನಗರದ ಗಣೇಶ ಮೈದಾನದಲ್ಲಿ ನಡೆಯುತ್ತಿರುವ ಅಹಿಂದ ಸಮಾವೇಶದಲ್ಲಿ "ಮುಂದಿನ ಸಿಎಂ ಸಿದ್ದರಾಮಯ್ಯ" ಎನ್ನುವ ಕಟೌಟ್ ಅನ್ನು ಸಿದ್ದು ಅಭಿಮಾನಿಗಳು ಹಾಕಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಇಂದು ನಗರದಲ್ಲಿ ನಡೆಯುತ್ತಿರುವ ಅಹಿಂದ‌‌ ಸಮಾವೇಶ ಹಾಗೂ ಅಭಿನಂದನಾ ಸಮಾರಂಭದಲ್ಲಿ ಮಾಜಿ ಸಿದ್ದರಾಮಯ್ಯ ಅವರು ಪಾಲ್ಗೊಳ್ಳಲಿದ್ದಾರೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಧ್ಯಂತರ ಚುನಾವಣೆಗೆ ತಯಾರಾಗುತಿದ್ದಾರಾ ಅನ್ನೋ ಅನುಮಾನ ಮೂಡುತ್ತಿದೆ. ಈ ಸಂಬಂಧ ಬಸವಣ್ಣನ ಕರ್ಮಭೂಮಿ ಬೀದರ್ ನಿಂದಲೆ ಮಧ್ಯಂತರ ಚುನಾವಣೆಗೆ ಸಿದ್ದು ರಣಕಹಳೆ ಮೊಳಗಿಸಿದ್ರಾ‌ ಎಂಬ ಮಾತುಗಳು ಕೇಳಿ ಬರುತ್ತಿವೆ.