ಬುದ್ಧನ ಸಂದೇಶ ಪ್ರತಿಯೊಬ್ಬರಿಗೆ ಆದರ್ಶಪ್ರಾಯ: ಬಂಡೆಪ್ಪ ಖಾಶೆಂಪೂರ್
ಶಾಂತಿ ಸ್ಥಾಪಿಸಿ ಎಲ್ಲರೂ ಸೌಹಾರ್ದತೆಯಿಂದ ಬದುಕು ಸಾಗಿಸಲು ಭಗವಾನ ಬುದ್ದರು ಶಾಂತಿಯ ಸಂದೇಶವನ್ನ ನೀಡಿದ್ದಾರೆ| ಅವರ ಆದರ್ಶಗಳು ಎಲ್ಲರಿಗೂ ಒಪ್ಪಿಗೆಯಾಗಲಿವೆ| ಸಾಮ್ರಾಟ ಅಶೋಕ ಕಳಿಂಗ ಯುದ್ಧದಲ್ಲಿ ನಡೆದ ಸಾವು ನೊವುಗಳನ್ನು ಕಂಡು ದುಃಖ ಭರಿತರಾಗಿ ಯುದ್ಧವನ್ನು ತ್ಯಜಿಸಿ ಶಾಂತಿ ಮಾರ್ಗ ಅನುಸರಿಸಲು ಯೋಚನೆ ಮಾಡಿ ಮುಂದೆ ಗೌತಮ ಬುದ್ಧರ ಶಾಂತಿ ಮಾರ್ಗವನ್ನು ಅನುಸರಿಸಿದರು|
ಹುಮನಾಬಾದ್(ಅ.10): ಶಾಂತಿ ಸ್ಥಾಪಿಸಿ ಎಲ್ಲರೂ ಸೌಹಾರ್ದತೆಯಿಂದ ಬದುಕು ಸಾಗಿಸಲು ಭಗವಾನ ಬುದ್ದರು ಶಾಂತಿಯ ಸಂದೇಶವನ್ನ ನೀಡಿದ್ದಾರೆ. ಅವರ ಆದರ್ಶಗಳು ಎಲ್ಲರಿಗೂ ಒಪ್ಪಿಗೆಯಾಗಲಿವೆ ಎಂದು ಶಾಸಕ ಬಂಡೆಪ್ಪ ಖಾಶೆಂಪೂರ್ ತಿಳಿಸಿದರು.
ತಾಲೂಕಿನ ಮನ್ನಾಎಖ್ಖೆಳ್ಳಿಯ ರೇಕುಳಗಿ ಮೌಂಟ್‌ನಲ್ಲಿರುವ ಅನಾಥ ಪಿಂಡಕ ಬುದ್ಧ ವಿಹಾರದಲ್ಲಿ ನಡೆದ ಅಶೋಕ ವಿಜಯ ದಶಮಿ ಹಾಗೂ ಧಮ್ಮ ಚಕ್ರ ಪರಿವರ್ತನಾ ದಿನದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ನೆಮ್ಮದಿಯ ಬದುಕು ರೋಗದಿಂದ ದೂರವಿರಲು ಸಾಧ್ಯವಾಗುತ್ತದೆ ಬುದ್ಧ ವಿಹಾರದಲ್ಲಿ ಸಿಸಿ ರಸ್ತೆಗಾಗಿ ಶಾಸಕರ ಅನುದಾನದಲ್ಲಿ 5 ಲಕ್ಷ ರು. ಒದಗಿಸುವದಾಗಿ ತಿಳಿಸಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಸಾಮ್ರಾಟ ಅಶೋಕ ಕಳಿಂಗ ಯುದ್ಧದಲ್ಲಿ ನಡೆದ ಸಾವು ನೊವುಗಳನ್ನು ಕಂಡು ದುಃಖ ಭರಿತರಾಗಿ ಯುದ್ಧವನ್ನು ತ್ಯಜಿಸಿ ಶಾಂತಿ ಮಾರ್ಗ ಅನುಸರಿಸಲು ಯೋಚನೆ ಮಾಡಿ ಮುಂದೆ ಗೌತಮ ಬುದ್ಧರ ಶಾಂತಿ ಮಾರ್ಗವನ್ನು ಅನುಸರಿಸಿದರು. ಬೌದ್ಧ ಗಯಾದ ಭಿಕ್ಕು ಡಾ. ಸಂಘರಕ್ಷಿತ ಮಹಾಥೇರೊ ಮಾತನಾಡಿ, ಮಾನವಕುಲದ ಏಳಿಗೆಗಾಗಿ ಭಗವಾನ ಬುದ್ದರು ಕಠಿಣ ತಪಸ್ಸು ಮಾಡಿ ಶಾಂತಿಯ ಮಾರ್ಗಗಳನ್ನ ತೋರಿಸಿಕೊಟ್ಟಿದ್ದಾರೆ. ಸಮಾಜಕ್ಕೆ ಅಂಟಿಕೊಂಡಿರುವ ಹಲವಾರು ವಿಚಾರಗಳ ಕುರಿತು ಪರಿಹಾರವನ್ನ ಸೂಚಿಸಿದ್ದಾರೆ. ಅವರ ಸಂದೇಶಗಳು ಜೀವನಕ್ಕೆ ದಾರಿಯಾಗಿದೆ ಎಂದರು.
ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನಾಗಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಮ್ಮ ಐದು ಲಕ್ಷ ಅನುಯಾಯಿಗಳೊಂದಿಗೆ ಭೌದ್ಧ ಧರ್ಮ ಸ್ವೀಕರಿಸಿದ ಪವಿತ್ರ ದಿನವನ್ನು ಧಮ್ಮ ಚಕ್ರ ಪರಿವರ್ತನೆ ದಿನವನ್ನಾಗಿ ಆಚರಿಸಲಾಗುತ್ತದೆ ಎಂದು ಹೇಳಿದರು.
ಮಹಾರಾಷ್ಟ್ರದ ಭಿಕ್ಕು ಡಾ. ಖೇಮ ಧಮ್ಮೊ ಮಹಾಥೆರೋ, ಡಾ. ಭಿಕ್ಕು ಧಮ್ಮನಾಗ ಹತ್ಯಾಳ್, ಸ್ಥಳೀಯ ಮೌಂಟ್‌ನ ಭಿಕ್ಕು ರೇವತ್, ಭಿಕ್ಕು ಧರ್ಮಪಾಲ, ಭಿಕ್ಕುಣಿ ಮಹಾಪ್ರಜಾಪತಿ ಸೇರಿದಂತೆ ಮತ್ತಿತರರು ಭೌದ್ಧ ಧರ್ಮದ ಕುರಿತು ಮಾತನಾಡಿದರು. ಇದಕ್ಕೂ ಮುನ್ನ ಬುದ್ಧ ವಿಹಾರದಲ್ಲಿ ಬೆಳಿಗ್ಗೆ ಭಿಕ್ಕು ಸಂಘದಿಂದ ಬುದ್ಧ ಪೂಜೆ, ಧ್ವಜಾರೋಹಣ, ನಂತರ ಭಿಕ್ಕು ಸಂಘದಿಂದ ಸಾಮೂಹಿಕ ಬುದ್ಧ ವಂದನೆ ಕಾರ್ಯಕ್ರಮಗಳು ಜರುಗಿದವು. ರಾಜ್ಯ ಸೇರಿದಂತೆ ತೆಲಂಗಾಣ, ಮಹಾರಾಷ್ಟ್ರ ರಾಜ್ಯಗಳ ಬೌದ್ಧ ಅನುಯಾಯಿಗಳು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಮಾಜಿ ಎಂಎಲ್‌ಸಿ ಕೆ. ಪುಂಡಲಿಕರಾವ್, ಪ್ರಮುಖರಾದ ಅನೀಲಕುಮಾರ ಬೆಲ್ದಾರ, ಸಂಜು ಗಾಯಕವಾಡ, ಪ್ರೇಮ್‌ಸಾಗರ ದಾಂಡೇಕರ್, ಶಂಕರರಾವ್ ಪ್ರೀಯಾ, ಮನೋಹರ ಮೋರೆ, ಶ್ರಾವಣಕುಮಾರ ಮೂಲಭಾರತಿ, ಪ್ರಶಾಂತ ಪ್ರೀಯಾ, ಪ್ರೇಮಿಳಾ ಢಾಂಗೆ, ಸವಿತಾಬಾಯಿ ಕೌಠ, ವೆಂಕಟ ಸಿಂಧೆ ಸೇರಿ ಹಲವರು ಹಾಜರಿದ್ದರು.