ಭರ್ಜರಿ ಕಾರ್ಯಚರಣೆ ಮಾಡಿ ಸುಮಾರು 35 ಲಕ್ಷ ಮೌಲ್ಯದ 650 KG ಗಾಂಜಾ ವಶಪಡಿಸಿಕೊಂಡ ಬೀದರ್ ಪೊಲೀಸ್ ತಂಡಕ್ಕೆ 1 ಲಕ್ಷ ರೂ. ಬಹುಮಾನ ಸಿಕ್ಕಿದೆ.
ಬೀದರ್, [ಮೇ.05): ಗಾಂಜಾ ಅಡ್ಡೆಗಳ ಮೇಲೆ ದಾಳಿ ನಡೆಸಿದ ಪೊಲೀಸರು ಸುಮಾರು 35 ಲಕ್ಷಕ್ಕೂ ಅಧಿಕ ಮೌಲ್ಯದ 650 ಕೆಜಿ ಗಾಂಜಾ, ಒಂದು ಕಾರು ಹಾಗೂ ಮೂರು ಬೈಕ್ಗಳನ್ನ ವಶಕ್ಕೆ ಪಡೆದಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಔರಾದ್ ತಾಲೂಕಿನ ಘಾಮಾ ತಾಂಡದ ಜಮೀನಿನಲ್ಲಿ 650 ಕೆಜಿ ಗಾಂಜಾವನ್ನ ಸಂಗ್ರಹಿಸಿಡಲಾಗಿತ್ತು. ಈ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಪೊಲೀಸರು ಅನಿಲ್, ವಿಜಯ್ ಎಂಬುವರನ್ನ ಬಂಧಿಸಿದ್ದಾರೆ.
Scroll to load tweet…
ಗೋಪಾಲ್, ಅಮರೇಶ್ ಎಂಬುವವರು ಪರಾರಿಯಾಗಿದ್ದು, ಅವರಿಗಾಗಿಯೂ ಬಲೆ ಬೀಸಲಾಗಿದೆ. ಈ ಗಾಂಜಾವನ್ನ ಮಹಾರಾಷ್ಟ್ರ, ಗೋವಾ, ಬೆಂಗಳೂರಿಗೆ ಸಾಗಿಸಲಾಗುತಿತ್ತು.
ವಿಶೇಷ ಅಂದ್ರೆ ಪ್ರಕರಣ ಪತ್ತೆ ಮಾಡಿದ ಪೊಲೀಸ್ ತಂಡಕ್ಕೆ ಒಂದು ಲಕ್ಷ ನಗದು ಬಹುಮಾನವನ್ನ ಎಸ್ಪಿ ಶ್ರೀಧರ್ ಘೋಷಣೆ ಮಾಡಿದ್ದಾರೆ.
