ನವದೆಹಲಿ: ಬೆಂಗಳೂರಿನ ಐಟಿ ತಾಣವಾದ ವೈಟ್‌ಫೀಲ್ಡ್ ಹಾಗೂ ಬಾಣಸವಾಡಿ ನಡುವೆ  ರೈಲು ಸಂಚಾರ ಫೆ.3ರಿಂದ ಆರಂಭವಾಗಲಿದೆ.

ಬೆಳಗ್ಗೆ 7.50ಕ್ಕೆ ವೈಟ್‌ಫೀಲ್ಡ್‌ನಿಂದ ಹೊರಡುವ ರೈಲು 8.30 ಕ್ಕೆ ಬಾಣಸವಾಡಿ ತಲುಪಲಿದೆ. ಸಂಜೆ 6.25ಕ್ಕೆ ಬಾಣಸವಾಡಿಯಿಂದ ಹೊರಟು, 7.20ಕ್ಕೆ ವೈಟ್ ಫೀಲ್ಡ್ ತಲುಪಲಿದೆ. 

ಮಾರ್ಗಮಧ್ಯದಲ್ಲಿ ಹೂಡಿ, ಕೃಷ್ಣರಾಜಪುರ ಹಾಗೂ ಬೈಯಪ್ಪನಹಳ್ಳಿ ರೈಲು ನಿಲ್ದಾಣಗಳಲ್ಲಿ ನಿಲುಗಡೆ ಹೊಂದಲಿದೆ ಎಂದು ತಿಳಿಸಲಾಗಿದೆ.