ಬೆಂಗಳೂರು : ಬೆಂಗಳೂರಿನಲ್ಲಿ ಕುಖ್ಯಾತ ಕೆಜಿಎಫ್ ಕಳ್ಳನ ಬಂಧನವಾಗಿದೆ.  ಕೆ ಆರ್ ಪುರ ಪೊಲೀಸರು ಕಳ್ಳ ಕೆ.ಜಿ.ಎಫ್ ರಮೇಶ್ ಎಂಬಾತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.   

ಕೆ ಆರ್ ಪುರ ಇನ್ಸ್ ಪೆಕ್ಟರ್ ಜಯರಾಜ್ ನೇತೃತ್ವದಲ್ಲಿ  ಆರೋಪಿ ಬಂಧಿಸಲಾಗಿದ್ದು,  ರಮೇಶ್ 1996ರ ಕಾಲದಲ್ಲಿಯೇ ಕಳ್ಳತನದಲ್ಲಿ ಕುಖ್ಯಾತಿ ಪಡೆದಿದ್ದ ಎನ್ನಲಾಗಿದೆ.  

ಮನೆಗಳಿಗೆ ನುಗ್ಗಿ ಕೈಗೆ ಸಿಕ್ಕಿದಷ್ಟು ಹಣ ಹಾಗೂ ಒಡವೆಗಳನ್ನು ಬಾಚಿ ಆತ ಎಸ್ಕೇಪ್ ಆಗುತ್ತಿದ್ದ ಎನ್ನಲಾಗಿದ್ದು,  ಎರಡು ದಶಕಗಳ ಹಿಂದೆಯೇ ಹಲವೆಡೆ‌ ಕಳ್ಳತನ ಮಾಡಿ ಜೈಲು ಕಂಬಿ ಎಣಿಸಿದ್ದ. 

ಮತ್ತೆ ಕಳೆದ ನಾಲ್ಕು ವರ್ಷಗಳಿಂದ ಕಳ್ಳತನಕ್ಕೆ ಇಳಿದಿದ್ದು, ಆತನ ಮುಖಚಹರೆಯಲ್ಲಿ ಬದಲಾದ ಕಾರಣದಿಂದ ಆತ ಹೊಸ ಕಳ್ಳನೆಂದು ತಿಳಿದಿದ್ದರು. ಆದರೆ  ಫಿಂಗರ್ ಪ್ರಿಂಟ್ ಆದಾರದಲ್ಲಿ ಕೆಜಿಎಫ್ ರಮೇಶ್ ಎಂದು ಗುರುತು ಪತ್ತೆ ಮಾಡಲಾಗಿದೆ. 

ಕಳೆದ ಕೆಲ ವರ್ಷಗಳಿಂದಲೂ ಕೂಡ ಈತನಿಗಾಗಿ ನಿರಂತರವಾಗಿ ಶೋಧ ನಡೆಸಿದ್ದು, ಕೊನೆಗೂ ಈತನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ರಮೇಶ್ ಕದ್ದ ಮಾಲುಗಳನ್ನ ಮಾರಾಟ ಮಾಡುತ್ತಿದ್ದ ಆರೋಪಿ ರಾಮ್ ಕುಮಾರ್ ನನ್ನೂ ಕೆ ಆರ್ ಪುರ ಪೊಲೀಸರು ಬಂಧಿಸಿದ್ದು, ಸದ್ಯ ಆರೋಪಿಯಿಂದ ಕಳ್ಳತನ ಮಾಡಿದ್ದ 13ಲಕ್ಷಕ್ಕೂ ಅಧಿಕ‌ ಮೌಲ್ಯದ ಚಿನ್ನಾಭರಣಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.