ಬೆಂಗಳೂರು(ಜೂ.15): ಜೂನ್ 16 ಭಾನುವಾರ ಬೆಳಗ್ಗೆ ಕೊಂಚ ಬಿಡುವು ಮಾಡಿಕೊಂಡರೆ ಎರಡು ಅಧ್ಯಾತ್ಮ ಗ್ರಂಥಗಳ ಬಿಡುಗಡೆಯನ್ನು ಹತ್ತಿರದಿಂದ ಕಣ್ಣು ತುಂಬಿಕೊಳ್ಳುವ ಅವಕಾಶ ನಿಮ್ಮ ಪಾಲಿಗಿದೆ.

ಹೊಳೆನರಸೀಪುರ ಕರ್ನಾಟಕ ಶಂಕರ ಶ್ರೀ ಶ್ರೀ ಸಚ್ಚಿದಾನಂದೇಂದ್ರ ಸರಸ್ವತೀ ಸ್ವಾಮೀಜಿಗಳು ರಚಿಸಿರುವ ಅಧ್ಯಾತ್ಮ ಹಾಡುಗಳ ‘ವೇದಾಂತ ವಚನಗಾನ  ರಸಾಯನ’ ಸಿಡಿ ಮತ್ತು ಚಿತ್ರದುರ್ಗದ ವಕೀಲರಾದ ಸಿ.ಚೆನ್ನಕೇಶವಯ್ಯ ಅವರ ‘ಶ್ರೀಮದ್ವಾಲ್ಮೀಕಿ ರಾಮಾಯಣ ಶ್ರೀ ಸಂಕ್ಷಿಪ್ತ ಸುಂದರಕಾಂಡಮ್’  ಲೋಕಾರ್ಪಣೆಯಾಗಲಿದೆ.

16 ಜೂನ್‌ 2019ರ ಭಾನುವಾರ ಲೋಕಾರ್ಪಣೆ ಸಮಾರಂಭವನ್ನು ಬಸವನಗುಡಿ ಶಂಕರಪುರದಲ್ಲಿರುವ ಶಂಕರ ಮಠದಲ್ಲಿ ಬೆಳಗ್ಗೆ 10 ಗಂಟೆಗೆ ಆಯೋಜನೆ ಮಾಡಲಾಗಿದೆ.

ಬೆಂಗಳೂರು ಜಯನಗರದ ಆರ್ ವಿ ಇಸ್ಟಿಟ್ಯೂಟ್ ನ ಸಂಸ್ಕೃತ ವಿಭಾಗದ  ಡಾ. ಎಸ್. ರಂಗನಾಥ್  ಸಿಡಿ ಲೋಕಾರ್ಪಣೆ ಮಾಡಲಿದ್ದು ಐಪಿಎಸ್ ಅಧಿಕಾರಿ ಡಿ.ರೂಪಾ ಸಂಕ್ಷಿಪ್ತ ಸುಂದರಕಾಂಡಮ್ ಬಿಡುಗಡೆ ಮಾಡಲಿದ್ದಾರೆ. 

ಕಾರ್ಯಕ್ರಮದಲ್ಲಿ ಡಾ.ಕೆ.ಜಿ.ಸುಬ್ರಾಯ ಶರ್ಮ, ಉಭಯಗಾನ ವಿದುಷಿ ಡಾ.ಶ್ಯಾಮಲಾ ಜಿ ಭಾವೆ ಉಪಸ್ಥಿತರಿರಲಿದ್ದಾರೆ. ವಚನಗಾನ ಜತೆಗೆ ರಾಮಾಯಣ ದರ್ಶನ, ತಪ್ಪಿಸಿಕೊಳ್ಳಬೇಡಿ