ಬೆಂಗಳೂರು: ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ನಡೆ ಯುತ್ತಿರುವ ಫಲಪುಷ್ಪ ಪ್ರದರ್ಶನ ವೀಕ್ಷಣೆಗೆ ಅನುಕೂಲವಾಗುವಂತೆ ಜ. 25ರಿಂದ 27ರ ವರೆಗೆ ರಿಯಾಯಿತಿ ದರದಲ್ಲಿ ಟಿಕೆಟ್ ಮಾರಾಟ ಮಾಡುವುದಾಗಿ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿ) ತಿಳಿಸಿದೆ. 

ಮೇಲ್ಕಂಡ 3 ದಿನಗಳಲ್ಲಿ ಲಾಲ್‌ಬಾಗ್ ಮೆಟ್ರೋ ನಿಲ್ದಾಣದಿಂದ ಬೇರೆ ಯಾವುದೇ ನಿಲ್ದಾಣಗಳಿಗೆ ಪ್ರಯಾಣಿಸಲು 30 ಟಿಕೆಟ್ ದರ ನಿಗದಿಪಡಿಸಲಾಗಿದೆ. 

ಈ ಮೂರು ದಿನಗಳಲ್ಲಿ ಬೆಳಗ್ಗೆ 10 ರಿಂದ ರಾತ್ರಿ 8 ಗಂಟೆವರೆಗೆ ಲಾಲ್‌ಬಾಗ್ ಮೆಟ್ರೋ ನಿಲ್ದಾಣದಿಂದ ಯಾವುದೇ ನಿಲ್ದಾಣಕ್ಕೆ ಪ್ರಯಾಣಿಸಬಹುದು. ಈ ಪೇಪರ್ ಟಿಕೆಟ್‌ಗಳು ಖರೀದಿಸಿದ ದಿನಕ್ಕೆ ಮಾತ್ರ ಸೀಮಿತವಾಗಿರುತ್ತವೆ. 

ಇತರೆ ಮೆಟ್ರೋ ನಿಲ್ದಾಣಗಳಿಂದ ಲಾಲ್‌ಬಾಗ್ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣಿಸಲು ಟೋಕನ್ ಮತ್ತು ಸ್ಮಾರ್ಟ್ ಕಾರ್ಡ್‌ಗಳ ದರವು ನಿತ್ಯ ಬಳಕೆಯಲ್ಲಿ ರುವ ದರದಲ್ಲೇ ಇರಲಿದೆ. ಅದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದಿದೆ. ಜ. 25 ರಿಂದ 27 ರವರೆಗೆ ಬೆಳಗ್ಗೆ 8 ರಿಂದ ಸಂಜೆ 6 ರವರೆಗೆ ಪೇಪರ್ ಟಿಕೆಟ್ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಖರೀದಿಸಲು ಲಭ್ಯವಿರುತ್ತದೆ. 

ಲಾಲ್‌ಬಾಗ್ ನಿಲ್ದಾಣದಲ್ಲಿ ರಾತ್ರಿ ೮ರವರೆಗೆ ಪೇಪರ್ ಟಿಕೆಟ್‌ಅನ್ನು ಖರೀದಿಸಬಹುದು. ಮೆಟ್ರೋ ರೈಲು ಪ್ರಯಾಣಿಕರು ಲಾಲ್‌ಬಾಗ್ ಮೆಟ್ರೋ ನಿಲ್ದಾಣಕ್ಕೆ ಪ್ರವೇಶಿಸಲು ಪೇಪರ್ ಟಿಕೆಟ್ ಗಳನ್ನು ಹಾಜರುಪಡಿಸಿ ನಂತರ ಸದರಿ ಟಿಕೆಟ್ ನ್ನು ತಲುಪುವ ನಿಲ್ದಾಣದಲ್ಲಿ ಹಿಂದುರಿಗಿಸಬೇಕು.