ಬೆಂಗಳೂರು :   ಸಿಲಿಕಾನ್ ಸಿಟಿ ಜನತೆಗೆ ಕೆಂಪೆಗೌಡ ವಿಮಾನ ನಿಲ್ದಾಣ ಸಿಹಿ ಸುದ್ದಿಯೊಂದನ್ನು ನೀಡುತ್ತಿದೆ.  ಶೀಘ್ರದಲ್ಲೆ ವಿಮಾನ ನಿಲ್ದಾಣದಲ್ಲಿ ಟರ್ಮಿನಲ್ 2 ಲೋಕಾರ್ಪಣೆಯಾಗಲಿದೆ. 

13000 ಕೋಟಿ ವೆಚ್ಚದಲ್ಲಿ ಟರ್ಮಿನಲ್ ನಿರ್ಮಾಣವಾಗುತ್ತಿದ್ದು, ಸೆಪ್ಟೆಂಬರ್ ಅಂತ್ಯದೊಳಗೆ ಟರ್ಮಿನಲ್ ಕಾಮಗಾರಿ ಪೂರ್ಣಗೊಳ್ಳಲಿದೆ. 

ಅಕ್ಟೋಬರ್ 1ರಿಂದ ನೂತನ ಟರ್ಮಿನಲ್ ಸಾರ್ವಜನಿಕ ಬಳಕೆಗೆ ಸಿದ್ದವಾಗಲಿದ್ದು,   ಟರ್ಮಿನಲ್ 2 ರಿಂದ ವಿಮಾನ ಹಾರಾಟದ ಸಂಖ್ಯೆಯಲ್ಲಿಯೂ ಹೆಚ್ಚಳವಾಗುವ ಸಾಧ್ಯತೆ ಇದೆ.  ಸದ್ಯ 380 ರಿಂದ 400 ವಿಮಾನಗಳು ಹಾರಾಟ ನಡೆಸುವ ಸಾಧ್ಯತೆ ಇದೆ. 

ಟರ್ಮಿನಲ್ 2 ಲೋಕಾರ್ಪಣೆ ಆದ ಬಳಿಕ 600 ರಿಂದ 650 ವಿಮಾನಗಳ ಹಾರಾಟದಷ್ಟು ಸಾಮರ್ಥ್ಯ ಇದರಲ್ಲಿರಲಿದೆ.  ಇನ್ನು ಟರ್ಮಿನಲ್ 2 ರಲ್ಲಿ ಮೆಟ್ರೋಗೂ ಸಂಪರ್ಕ ಕಲ್ಪಿಸುವ ವ್ಯವಸ್ಥೆ ಮಾಡಲಾಗುತ್ತದೆ.  

ನೂತನವಾಗಿ ನಿರ್ಮಾಣವಾಗುತ್ತಿರುವ ಟರ್ಮಿನಲ್ ನಲ್ಲಿ ಗಾರ್ಡನ್ ಸಿಟಿಯನ್ನು ನೆನಪಿಸುವಂತೆ ಪರಿಸರ ಸ್ನೇಹಿಯಾದ ವ್ಯವಸ್ಥೆ ಇರಲಿದೆ.  ಮಳೆಕೊಯ್ಲು ಪದ್ದತಿ, ಸೋಲಾರ್ ವಿದ್ಯುತ್ ಬಳಕೆಗೆ ವ್ಯವಸ್ಥೆ ಇರಲಿದೆ.  ಒಂದು ದಿನದಲ್ಲಿ 2.4 ಮಿಲಿಯನ್ ಲೀ. ನೀರು ಸಂಗ್ರಹ ಮಾಡುವ ಸಾಮರ್ಥ್ಯವೂ ಈ ಟರ್ಮಿನಲ್ ಮಳೆಕೊಯ್ಲು ಪದ್ಧತಿಯಲ್ಲಿ ಇರಲಿದೆ ಎಂದು ಹೊಸ ಟರ್ಮಿನಲ್ ಬಗ್ಗೆ ಕೆಐಎಎಲ್  ಎಂಡಿ ಹರಿ ಮಾರರ್ ಮಾಹಿತಿ ನೀಡಿದ್ದಾರೆ.