ಬೆಂಗಳೂರು: ಮಗ ತನ್ನ ಪತ್ನಿಯ ಜತೆಗೂಡಿ ಹೆತ್ತತಾಯಿಯನ್ನೇ 3 ತಿಂಗಳಿಂದ ಗೃಹಬಂಧನದಲ್ಲಿರಿಸಿದ್ದ ಘಟನೆ, ಮಾರತ್ತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾಡುಬಿಸನಹಳ್ಳಿಯಲ್ಲಿ ನಡೆದಿದ್ದು, ಈ ಬಗ್ಗೆ ಮಾಹಿತಿ ಲಭ್ಯವಾಗುತ್ತಿದ್ದಂತೆ ಪೊಲೀಸರು ತಾಯಿಯನ್ನು ರಕ್ಷಿಸಿದ್ದಾರೆ. 

ಕಾಡಬಿಸನಹಳ್ಳಿಯ ಮುನಿಯಮ್ಮ ನರಕಯಾತನೆಯಿಂದ ಮುಕ್ತಿಗೊಂಡ ತಾಯಿ. ವೆಂಕಟಸ್ವಾಮಿ ಹಾಗೂ ಆಕೆಯ ಪತ್ನಿ ಸುಜಾತ, ಮುನಿಯಮ್ಮರನ್ನು ಕೂಡಿಹಾಕಿದ ಆರೋಪಕ್ಕೆ ಗುರಿಯಾಗಿರುವವರು. ಹೀಗೆ ಮಹಿಳೆಯೊಬ್ಬರನ್ನು ಗೃಹಬಂಧನದಲ್ಲಿರಿಸಿ ಆಕೆಗೆ ನಿತ್ಯ ಕಿರುಕುಳ ನೀಡಲಾಗುತ್ತಿದೆ ಎಂದು ಸ್ಥಳೀಯ ಯುವತಿಯೊಬ್ಬಳು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಳು. 

ಇದರ ಆಧಾರದ ಮೇರೆಗೆ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಎಚ್ಚರಗೊಂಡ ಪೊಲೀಸರು ಸ್ಥಳಕ್ಕಾಗಮಿಸಿ, ಮಹಿಳೆಯನ್ನು ರಕ್ಷಿಸಿ ಮಗವನ್ನು ವಶಕ್ಕೆ ಪಡೆದುಕೊಂಡಿದ್ದರು. 

ಬಳಿಕ ಈ ರೀತಿ ಮುಂದೆ ನಡೆದುಕೊಳ್ಳಬಾರದು, ತಾಯಿಯನ್ನು  ಚೆನ್ನಾಗಿ ನೋಡಿಕೊಳ್ಳಬೇಕೆಂದು ಬುದ್ಧಿವಾದ ಹೇಳಿ ಮುಚ್ಚಳಿಕೆ ಬರೆಸಿಕೊಂಡು ಕಳುಹಿಸಿದ್ದಾರೆ.