Asianet Suvarna News Asianet Suvarna News

ಸ್ಥಳೀಯ ಚುನಾವಣೆಗೆ ನಾಮಪತ್ರ ಸಲ್ಲಿಕೆ: ಅಧಿಸೂಚನೆ ಪ್ರಕಟ

ಎರಡು ಮಹಾನಗರ ಪಾಲಿಕೆಗಳು, 6 ನಗರ ಸಭೆಗಳು, 3 ಪುರಸಭೆ ಮತ್ತು 3 ಪಟ್ಟಣ ಪಂಚಾಯಿತಿಗಳಿಗೆ ನ.12ರಂದು ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಗುರುವಾರ ಅಧಿಸೂಚನೆ ಪ್ರಕಟವಾಗಲಿದ್ದು, ನಾಮಪತ್ರ ಸಲ್ಲಿಕೆ ಕೂಡ ಆರಂಭವಾಗಲಿದೆ.

Nominations to be filed for local body elections
Author
Bangalore, First Published Oct 24, 2019, 10:48 AM IST

ಬೆಂಗಳೂರು(ಅ.24): ಡಿಸೆಂಬರ್‌ ತಿಂಗಳಲ್ಲಿ ಅವಧಿ ಪೂರ್ಣಗೊಳ್ಳುವ ದಾವಣಗೆರೆ, ಮಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ಆರು ನಗರಸಭೆ ಮತ್ತು ತಲಾ ಮೂರು ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳಿಗೆ ಮುಂದಿನ ತಿಂಗಳು ನಡೆಯಲಿರುವ ಚುನಾವಣೆ ಸಂಬಂಧ ಗುರುವಾರ ಅಧಿಸೂಚನೆ ಪ್ರಕಟವಾಗಲಿದ್ದು, ನಾಮಪತ್ರ ಸಲ್ಲಿಕೆ ಕೂಡ ಆರಂಭವಾಗಲಿದೆ.

ಎರಡು ಮಹಾನಗರ ಪಾಲಿಕೆಗಳು, 6 ನಗರ ಸಭೆಗಳು, 3 ಪುರಸಭೆ ಮತ್ತು 3 ಪಟ್ಟಣ ಪಂಚಾಯಿತಿಗಳಿಗೆ ನ.12ರಂದು ಸಾರ್ವತ್ರಿಕ ಚುನಾವಣೆ ನಡೆಯಲಿದೆ. ವಿವಿಧ ಕಾರಣಗಳಿಂದ ತೆರವಾಗಿರುವ 5 ಸದಸ್ಯ ಸ್ಥಾನಗಳಿಗೆ ಅದೇ ದಿನ ಉಪ ಚುನಾವಣೆ ಜರುಗಲಿದೆ. ಗುರುವಾರ ಸಂಬಂಧಪಟ್ಟಜಿಲ್ಲಾಧಿಕಾರಿಗಳು ಅಧಿಸೂಚನೆ ಪ್ರಕಟಿಸಲಿದ್ದಾರೆ.

ಬಿಜೆಪಿಗೂ ಅನರ್ಹರಿಗೂ ಸಂಬಂಧವಿಲ್ಲ: ಸವದಿ

ಅ.31ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ನ.2ರಂದು ನಾಮಪತ್ರಗಳನ್ನು ಪರಿಶೀಲಿಸುವ ಕಾರ್ಯ ನಡೆಯಲಿದೆ. ನ.4ರಂದು ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದೆ. ನ.12ರಂದು ಮತದಾನ ನಡೆಯಲಿದೆ. ಮರು ಮತದಾನ ಅವಶ್ಯವಿದ್ದರೆ ನ.13ರಂದು ನಡೆಯಲಿದೆ. ನ.14ರಂದು ಮತ ಎಣಿಕೆ ನಡೆಯಲಿದೆ.

ರಾಮನಗರ ಜಿಲ್ಲೆ: ಕನಕಪುರ (ನಗರಸಭೆ), ಮಾಗಡಿ (ಪುರಸಭೆ)., ದಾವಣಗೆರೆ ಜಿಲ್ಲೆ: ದಾವಣಗೆರೆ (ಮಹಾನಗರ ಪಾಲಿಕೆ)., ಕೋಲಾರ ಜಿಲ್ಲೆ: ಕೋಲಾರ (ನಗರ ಸಭೆ), ಮುಳಬಾಗಿಲು (ನಗರಸಭೆ), ಕೆಜಿಎಫ್‌ (ನಗರಸಭೆ)., ಚಿಕ್ಕಬಳ್ಳಾಪುರ ಜಿಲ್ಲೆ: ಗೌರಿಬಿದನೂರು (ನಗರಸಭೆ), ಚಿಂತಾಮಣಿ (ನಗರಸಭೆ)., ಶಿವಮೊಗ್ಗ ಜಿಲ್ಲೆ: ಜೋಗ-ಕಾರ್ಗಲ್‌ (ಪಟ್ಟಣ ಪಂಚಾಯಿತಿ)., ಚಿಕ್ಕಮಗಳೂರು ಜಿಲ್ಲೆ: ಬೀರೂರು (ಪುರಸಭೆ)., ದಕ್ಷಿಣ ಕನ್ನಡ ಜಿಲ್ಲೆ: ಮಂಗಳೂರು (ಮಹಾನಗರ ಪಾಲಿಕೆ)., ಧಾರವಾಡ ಜಿಲ್ಲೆ: ಕುಂದಗೋಳ (ಪಟ್ಟಣ ಪಂಚಾಯಿತಿ), ಬಳ್ಳಾರಿ ಜಿಲ್ಲೆ: ಕಂಪ್ಲಿ (ಪುರಸಭೆ), ಕೂಡ್ಲಿಗಿ ( ಪಟ್ಟಣ ಪಂಚಾಯಿತಿ) ನಗರ ಸ್ಥಳೀಯ ಸಂಸ್ಥೆಗೆ ಚುನಾವಣೆ ನಡೆಯಲಿದೆ.

ಎರಡು ದಶಕದಲ್ಲೇ ಅತಿ ಹೆಚ್ಚು ಮಳೆ ಕಂಡಿದೆ ಈ ಅಕ್ಟೋಬರ್..!

Follow Us:
Download App:
  • android
  • ios