ಬೆಂಗಳೂರು, (ಫೆ.13): ಅಧಿಕಾರದ ದರ್ಪ, ಅಪ್ಪನ ಹಣ, ಏನು ಮಾಡಿದರೂ ಜಯಿಸಿಕೊಳ್ಳಬಹುದೆಂಬ ಹುಂಬತನ ಕೆಲ ರಾಜಕಾರಣಿಗಳ ಮನಸ್ಥಿತಿಯಾಗಿರುತ್ತೆ. ಆದ್ರೆ ಈ ಸಚಿವರೊಬ್ಬರು ಪೇದೆ ಮಾತಿಗೆ ಬೆಲೆಕೊಟ್ಟು ನಿಯಮ ಪಾಲಿಸಿದ್ದಾರೆ.

ಹೈ ಗ್ರೌಂಡ್ ಟ್ರಾಫಿಕ್ ಪೇದೆ ನೀಡಿದ ಎಚ್ಚರಿಕೆಗೆ ಪ್ರವಾಸೋದ್ಯಮ ಸಚಿವ ಸಾ ರಾ ಮಹೇಶ್  ಎಚ್ಚೆತ್ತುಕೊಂಡಿರುವ ಅಪರೂಪ ಘಟನೆ ನಡೆದಿದೆ.

ಡಿಸಿಎಂ ಪುತ್ರಿ ರ್‍ಯಾಷ್ ಡ್ರೈವಿಂಗ್ ಮಾಡಿದ್ರೂ ಪೊಲೀಸರು ಕೇಳೋದೇ ಇಲ್ಲ!

ಸಚಿವ ಸಾ. ರಾ. ಮಹೇಶ್  ಅವರ ಕಾರು ತಾಜ್ ಹೋಟೆಲ್ ನಿಂದ  ತಮ್ಮ‌ ಸರ್ಕಾರಿ ಬಂಗೆಲೆಗೆ ಒನ್ ವೇ ನಲ್ಲಿ ಹೊರಟಿತ್ತು. ಇದನ್ನ ನೋಡಿದ ಹೈ ಗ್ರೌಂಡ್ ಟ್ರಾಫಿಕ್ ಪೇದೆ ಸಂತೋಷ್ ಕುಮಾರ್, ಕಾರು ತಡೆದು ಸರ್ ಇದು ಒನ್ ವೇ. ಹೋಗ್ಬೇಡಿ  ಅಂತ ಎಚ್ಚರಿಸಿದರು. 

ಪೇದೆಯ ಮಾತಿಗೆ ಬೆಲೆ ಕೊಟ್ಟ ಸಚಿವ ಸಾ. ರಾ. ಮಹೇಶ್, ತಾಜ್ ಹೊಟೇಲ್ ಗೇಟ್ ನಲ್ಲಿ ತಾವು ಇದ್ದ ಕಾರಿನಿಂದ ಇಳಿದುಕೊಂಡು, ಯೂರ್ಟನ್ ಮಾಡಿಕೊಂಡು ಬಾ ಎಂದು ಡ್ರೈವರ್‌ಗೆ ಹೇಳಿ ನಡೆದುಕೊಂಡು ತಮ್ಮ ಸರ್ಕಾರಿ ನಿವಾಸದತ್ತ ಹೆಜ್ಜೆ ಹಾಕಿದರು.

ಪೇದೆಯ ಎಚ್ಚರಿಕೆಗೆ ಬೆಲೆ ಕೊಟ್ಟಿರುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆ. ಈ ಹಿಂದೆ ಕೆಲ ರಾಜಕಾರಣಿಗಳಿಗೆ ಹಾಗೂ ಅವರ ಮಕ್ಕಳಿಗೆ ಹೀಗೆ ಹೇಳಿದಕ್ಕೆ ರಂಪಾಟ ಮಾಡಿರುವ ಉದಾಹರಣೆಗಳು ಸಾಕಷ್ಟು ಇವೆ.