ಬೆಂಗಳೂರು: ಪಾಕಿಸ್ತಾನದ ‘ಕರಾಚಿ’ ನಗರದ ಹೆಸರಿನ ನಾಮಫಲಕ ಹೊಂದಿದ್ದ ಬೇಕರಿ ಮುಂದೆ ಹಿಂದೂ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದ ಘಟನೆ ಇಂದಿರಾನಗರದಲ್ಲಿ ನಡೆದಿದೆ. 

ಸಂಘಟನೆಗಳ ಪ್ರತಿಭಟನೆಗೆ ಮಣಿದ ಬೇಕರಿ ಮಾಲೀಕರು, ತಮ್ಮ ಬೇಕರಿ ಹೆಸರನ್ನು ಬದಲಾಯಿಸಲು ಸಮ್ಮತಿಸಿ ದ ಬಳಿಕ ಪರಿಸ್ಥಿತಿ ಶಾಂತವಾಯಿತು.

ಹೈದರಾಬಾದ್ ಮೂಲದ ವ್ಯಕ್ತಿಯೊಬ್ಬರು, ಇಂದಿರಾನಗರದ 100 ಅಡಿ ರಸ್ತೆಯಲ್ಲಿ ‘ಕರಾಚಿ ಬೇಕರಿ’ ನಡೆಸುತ್ತಿದ್ದಾರೆ. ಇತ್ತೀಚೆಗೆ ಪುಲ್ವಾಮಾ ಉಗ್ರರ ದಾಳಿ ಬಳಿಕ ಪಾಕಿಸ್ತಾನದ ವಿರುದ್ಧ ಕೆರಳಿರುವ ನಾಗರಿಕರು, ಶತ್ರು ರಾಷ್ಟ್ರದ ನಗರದ ಹೆಸರು ಇಟ್ಟಿರುವುದನ್ನು ಗಮನಿಸಿದ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.