ಬೆಂಗಳೂರು(ಜ.05): ಸಿರ್ಸಿ ಸರ್ಕಲ್‌ ಮೇಲ್ಸೇತುವೆ ಕಾಮಗಾರಿ ಹಿನ್ನೆಲೆಯಲ್ಲಿ, ಮೈಸೂರು ರಸ್ತೆಯಲ್ಲಿ ಟ್ರಾಫಿಕ್ ಸಮಸ್ಯೆ ಎದುರಾಗಿದೆ.

ಮೈಸೂರು ರಸ್ತೆ ಸುತ್ತ ಮುತ್ತ ಟ್ರಾಫಿಕ್ ಜಾಮ್ ಆಗಿದ್ದು, ಬೆಳಗ್ಗೆಯಿಂದಲೂ ನಿಧಾನಗತಿಯಲ್ಲಿ ವಾಹನಗಳು ಚಲಿಸುತ್ತಿವೆ. 

ಮೈಸೂರು ರಸ್ತೆ, ಕೆಆರ್ ಮಾರುಕಟ್ಟೆ, ಕಾಟನ್ ಪೇಟೆ, ಗೂಡ್ ಶೆಡ್ ರಸ್ತೆ, ಸಿರ್ಸಿ ಸರ್ಕಲ್, ಬಾಪೂಜಿ ನಗರ ಸುತ್ತಮುತ್ತ ಭಾರೀ ಟ್ರಾಫಿಕ್ ಜಾಮ್ ಆಗಿದೆ.

ಮೂಲಗಳ ಪ್ರಕಾರ ಇನ್ನೂ 40 ದಿನಗಳ ಕಾಲ ಟ್ರಾಫಿಕ್ ಜಾಮ್ ಬಿಸಿ ತಟ್ಟಲಿದ್ದು, ಫ್ಲೈಓವರ್ ಡಾಂಬರೀಕರಣ ಪೂರ್ಣವಾಗುವವರೆಗೂ ವಾಹನ ಸವಾರರು ಪರದಾಡಬೇಕಿದೆ. 

ಪ್ರತಿ ನಿತ್ಯ 300 ರಿಂದ 350 ಚ.ಮೀ ವರೆಗೂ ಕಾಮಗಾರಿ ಆಗುತ್ತಿದ್ದು, ಒಟ್ಟು 2.65 ಕಿ.ಮೀ ನಷ್ಟು ಸೇತುವೆ ಕಾಮಗಾರಿ ನಡೆಯುತ್ತಿದೆ.