ಉತ್ತರ ಭಾಗದಲ್ಲಿ ಉತ್ತಮ ಮಳೆ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 11, Feb 2019, 8:51 AM IST
Heavy Rain Lashes In Bengaluru North Side
Highlights

ಕಳೆದ ಎರಡು ದಿನಗಳಿಂದ ರಾಜ್ಯದ ಹಲವು ಪ್ರದೇಶಗಳಲ್ಲಿ ಮಳೆಯಾಗುತ್ತಿದ್ದು ಫೆ.11ರ ಭಾನುವಾರವೂ ಕೂಡ ಬೆಂಗಳೂರಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದೆ. 

ಬೆಂಗಳೂರು :  ನಗರದಲ್ಲಿ ಭಾನುವಾರವೂ [ಫೆ.11] ಮಳೆ ಮುಂದುವರಿದಿದ್ದು, ಮೇಖ್ರಿ ವೃತ್ತದ ಬಳಿ ಒಂದು ಮರ ಧರೆಗುರುಳಿದೆ. ಕಳೆದೆರಡು ದಿನಗಳಿಂದ ರಾಜ್ಯ ಸೇರಿದಂತೆ ಬೆಂಗಳೂರಿನಲ್ಲಿ ಗುಡುಗು ಸಿಡಿಲು ಸಹಿತ ಮಳೆಯಾಗುತ್ತಿದೆ. 

ಭಾನುವಾರ ನಗರದ ಉತ್ತರ ಭಾಗದಲ್ಲಿ ಹೆಚ್ಚಿನ ಪ್ರಮಾಣದ ಮಳೆಯಾದ ವರದಿಯಾಗಿದೆ. ಮಳೆಗೆ ಮೇಖ್ರಿ ವೃತ್ತದಲ್ಲಿ ಒಂದು ಮರ ಧರೆಗುರುಳಿತ್ತು. ಬಿಬಿಎಂಪಿ ಅರಣ್ಯ ವಿಭಾಗದ ಸಿಬ್ಬಂದಿ ಮರವನ್ನು ತೆರವು ಮಾಡಿದ್ದಾರೆ. 

ಶಿವಕೋಟೆಯಲ್ಲಿ 78 ಮಿ.ಮೀ, ಕೆಎಸ್‌ಎನ್‌ಡಿಎಂಸಿ ಕೇಂದ್ರದಲ್ಲಿ 60 ಮಿ.ಮೀ. ಅತಿ ಹೆಚ್ಚು ಮಳೆಯಾದ ವರದಿಯಾಗಿದೆ. ಇನ್ನುಳಿದಂತೆ ಸಾಧಾರಣ ಮಳೆಯಾಗಿದ್ದು, ಮೋಡ ಕವಿದ ವಾತಾವರಣ ಉಂಟಾಗಿತ್ತು.

loader