ಬೆಂಗಳೂರು :  ಈಗಾಗಲೇ ಸಿಲಿಕಾನ್ ಸಿಟಿಯಲ್ಲಿ ಚಳಿಯ ಅಬ್ಬರ ಹೆಚ್ಚಾಗುತ್ತಲೇ ಇದ್ದು, ಚಳಿಯಿಂದ ಜನತೆ ತತ್ತರಿಸಿದ್ದಾರೆ. ಆದರೆ ಕೊರೆಯುವ ಚಳಿಯ ಪ್ರಮಾಣ ನಗರದಲ್ಲಿ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. 

ಉತ್ತರ ಭಾರತದಿಂದ ದಕ್ಷಿಣ ಭಾರತದ ಕಡೆಗೆ ಶೀತಗಾಳಿ ಬೀಸುತ್ತಿರುವುದರಿಂದ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಉಷ್ಣಾಂಶ ಕಡಿಮೆಯಾಗಿ ಚಳಿಯ ಪ್ರಮಾಣ ಹೆಚ್ಚಾಗುತ್ತಿದೆ. 

ಉತ್ತರ ಭಾರತದಲ್ಲಿ ಬೀರುತ್ತಿರುವ ಶೀತ ಮಾರುತ ಪ್ರಭಾವ ಬೆಂಗಳೂರಿನ ಮೇಲೆ ತುಸು ಹೆಚ್ಚೇ ಇದೆ. ಇದರಿಂದ ದಿನದಿಂದ ದಿನಕ್ಕೆ ಬೆಂಗಳೂರಿನಲ್ಲಿ ತಾಪಮಾನ ಇಳಿಕೆಯಾಗುತ್ತಿದೆ.

ಇದರಿಂದಲೇ ಮುಂದಿನ ಒಂದು ವಾರಗಳ ಕಾಲ ತೀವ್ರ ಚಳಿ ಎದುರಿಸಬೇಕಾಗುತ್ತದೆ ಎಂದು ಹವಮಾನ ಇಲಾಖೆ ಮಾಹಿತಿ ನೀಡಿದೆ.