Asianet Suvarna News Asianet Suvarna News

ಬೆಂಗಳೂರು ವಿಮಾನ ನಿಲ್ದಾಣಕ್ಕೆ ಸ್ಫೋಟ ಬೆದರಿಕೆ

ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಸ್ಫೋಟ ಬೆದರಿಕೆ ಒಡ್ಡಲಾಗಿದ್ದು ಈ ಸಂಬಂಧ ಶೋಧ ನಡೆಸಿ ಇದೊಂದು ಹುಸಿ ಕರೆ ಎಂದು ತಿಳಿದು ಬಂದಿದೆ. ಇದೀಗ ಹುಸಿ ಕರೆ ಮಾಡಲಾಗಿದ ದುಷ್ಕರ್ಮಿಗಳಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ.

Bengaluru Airport Gets Hoax Bomb Call
Author
Bengaluru, First Published Aug 21, 2018, 9:06 AM IST

ಬೆಂಗಳೂರು :  ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬೆದರಿಕೆ ಕರೆಯೊಂದು ಬಂದಿದ್ದು, ವಿಮಾಣ ನಿಲ್ದಾಣವನ್ನು ಸ್ಫೋಟಿಸುವ ಬೆದರಿಕೆ ಒಡ್ಡಲಾಗಿದೆ. 

ಟರ್ಮಿನಲ್ ಕಂಟ್ರೋಲ್ ಗೆ ಕರೆ ಮಾಡಿರುವ ದುಷ್ಕರ್ಮಿಗಳು ಬೆದರಿಕೆ ಒಡ್ಡಿದ್ದಾರೆ.  ಬೆಳಿಗ್ಗೆ 12 ಗಂಟೆಗೆ ಬ್ಲಾಸ್ಟ್ ಮಾಡಲಾಗುತ್ತದೆ ಬೆದರಿಕೆ ಒಡ್ಡಿದ್ದಾರೆ.  ಬಾಂಬ್ ಬೆದರಿಕೆ ಕರೆಯಿಂದ ಆತಂಕ್ಕೊಳಗಾಗಿದ್ದು, ಈ ಸಂಬಂಧ ಏರ್ಪೋರ್ಟ್ ಪೊಲೀಸರಿಗೆ ದೂರು ನೀಡಲಾಗಿದೆ. 

ಸದ್ಯ ಈ ಹುಸಿ ಕರೆ ಬಂದ ದೂರವಾಣಿ ಸಂಖ್ಯೆಯ ಲೋಕೇಶನ್ ಪತ್ತೆ ಮಾಡಲಾಗುತ್ತಿದ್ದು, ದುಷ್ಕರ್ಮಿಗಳಿಗೆ ಶೋಧ ನಡೆಸಲಾಗುತ್ತಿದೆ.

Follow Us:
Download App:
  • android
  • ios