ಬೆಂಗಳೂರು :  ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬೆದರಿಕೆ ಕರೆಯೊಂದು ಬಂದಿದ್ದು, ವಿಮಾಣ ನಿಲ್ದಾಣವನ್ನು ಸ್ಫೋಟಿಸುವ ಬೆದರಿಕೆ ಒಡ್ಡಲಾಗಿದೆ. 

ಟರ್ಮಿನಲ್ ಕಂಟ್ರೋಲ್ ಗೆ ಕರೆ ಮಾಡಿರುವ ದುಷ್ಕರ್ಮಿಗಳು ಬೆದರಿಕೆ ಒಡ್ಡಿದ್ದಾರೆ.  ಬೆಳಿಗ್ಗೆ 12 ಗಂಟೆಗೆ ಬ್ಲಾಸ್ಟ್ ಮಾಡಲಾಗುತ್ತದೆ ಬೆದರಿಕೆ ಒಡ್ಡಿದ್ದಾರೆ.  ಬಾಂಬ್ ಬೆದರಿಕೆ ಕರೆಯಿಂದ ಆತಂಕ್ಕೊಳಗಾಗಿದ್ದು, ಈ ಸಂಬಂಧ ಏರ್ಪೋರ್ಟ್ ಪೊಲೀಸರಿಗೆ ದೂರು ನೀಡಲಾಗಿದೆ. 

ಸದ್ಯ ಈ ಹುಸಿ ಕರೆ ಬಂದ ದೂರವಾಣಿ ಸಂಖ್ಯೆಯ ಲೋಕೇಶನ್ ಪತ್ತೆ ಮಾಡಲಾಗುತ್ತಿದ್ದು, ದುಷ್ಕರ್ಮಿಗಳಿಗೆ ಶೋಧ ನಡೆಸಲಾಗುತ್ತಿದೆ.