ಬೆಂಗಳೂರು, (ಫೆ.13): ಅಖಿಲ ಕರ್ನಾಟಕ ಪೊಲೀಸ್ ಮಹಾಸಭಾ ಅಧ್ಯಕ್ಷ ವಿ. ಶಶಿಧರ್ ಅವರನ್ನು ಯಲಹಂಕ ಬಳಿಯ ರಾಜನಕುಂಟೆಯಲ್ಲಿ ಬಂಧಿಸಲಾಗಿದೆ.

ರಾಜ್ಯ ಸಮ್ಮಿಶ್ರ ಸರ್ಕಾರದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವಿ. ಶಶಿಧರ್ ಹರಿಹಾಯ್ದಿದ್ದರು. ಬಜೆಟ್ ನಲ್ಲಿ ಪೊಲೀಸರಿಗೆ ಸಿಎಂ ಕುಮಾರಸ್ವಾಮಿ ಅನ್ಯಾಯ ಮಾಡಿದ್ದಾರೆ ಎಂದು ಫೇಸ್ಬುಕ್ ನಲ್ಲಿ ಪೋಸ್ಟ್ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದರು. 

ರಾಜ್ಯ ಸರ್ಕಾರದ ವಿರುದ್ಧ ಪೋಸ್ಟ್ ಹಾಕಿದ್ದ ಹಿನ್ನೆಲೆಯಲ್ಲಿ ಅವರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಬಳಿಕ ಬಂಧಿಸಿದ್ದಾರೆ ಎನ್ನಲಾಗಿದೆ. 

ಹಿಂದೆ ಶಶಿಧರ್ ಅವರು ದಂಗೆ ಏಳಲು ಪೊಲೀಸರಿಗೆ ಕರೆ ನೀಡಿದ್ದ ಆರೋಪದ ಮೇಲೆ ಬಂಧಿತರಾಗಿದ್ದರು.