Asianet Suvarna News Asianet Suvarna News

'ತಿಂಗಳ ಒಳಗಾಗಿ ನೀರಿನ ಸಂಪರ್ಕ ಪಡೆದುಕೊಳ್ಳಿ'

11 ಹಳ್ಳಿಗಳಲ್ಲಿ ರಸ್ತೆ ಡಾಂಬರಿಕರಣ ಕಾಮಗಾರಿಯನ್ನು ಮುಂದಿನ ತಿಂಗಳು ಆರಂಭಿಸಲಾಗುತ್ತಿದೆ. ಹಾಗಾಗಿ, 30 ದಿನಗಳೊಳಗಾಗಿ ಆ ಭಾಗದ ಜನರು ಕಾವೇರಿ ನೀರು ಸಂಪರ್ಕ ಪಡೆದುಕೊಳ್ಳಬೇಕು ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್‌. ಅನಿಲ್‌ ಕುಮಾರ್‌ ಸೂಚಿಸಿದ್ದಾರೆ.
 

Take water Connection Before One Month Says BBMP Commissioner
Author
Bengaluru, First Published Oct 16, 2019, 8:15 AM IST

ಬೆಂಗಳೂರು (ಅ.16):  ಕೆ.ಆರ್‌.ಪುರ ಹಾಗೂ ರಾಮಮೂರ್ತಿನಗರ ವ್ಯಾಪ್ತಿಯಲ್ಲಿ 11 ಹಳ್ಳಿಗಳಲ್ಲಿ ರಸ್ತೆ ಡಾಂಬರಿಕರಣ ಕಾಮಗಾರಿಯನ್ನು ಮುಂದಿನ ತಿಂಗಳು ಆರಂಭಿಸಲಾಗುತ್ತಿದೆ. ಹಾಗಾಗಿ, 30 ದಿನಗಳೊಳಗಾಗಿ ಆ ಭಾಗದ ಜನರು ಕಾವೇರಿ ನೀರು ಸಂಪರ್ಕ ಪಡೆದುಕೊಳ್ಳಬೇಕು ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್‌. ಅನಿಲ್‌ ಕುಮಾರ್‌ ಸೂಚಿಸಿದ್ದಾರೆ.

ಕೆ.ಆರ್‌.ಪುರ ಹಾಗೂ ರಾಮಮೂರ್ತಿ ನಗರದ ವ್ಯಾಪ್ತಿಯ 11 ಗ್ರಾಮದಲ್ಲಿ ಬೆಂಗಳೂರು ಜಲಮಂಡಳಿ ಕಾವೇರಿ ನೀರು ಸರಬರಾಜು ಹಾಗೂ ಒಳಚರಂಡಿ ಕೊಳವೆ ಅಳವಡಿಕೆ ಕಾಮಗಾರಿಯಿಂದ ರಸ್ತೆಗಳು ಹಾಳಾಗಿವೆ. ರಸ್ತೆಗಳ ದುರಸ್ತಿ ಕಾಮಗಾರಿ ಆರಂಭಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಕೆ.ಆರ್‌.ಪುರ ವ್ಯಾಪ್ತಿಯ ಹೊರಮಾವು, ಅಗರ, ಬಾಬುಸಾಬ್‌ ಪಾಳ್ಯ, ಚಳ್ಳಕೆರೆ, ಗೆದ್ದಲಹಳ್ಳಿ, ಕೊತ್ತನೂರು, ಕೆ.ನಾರಾಯಣಪುರ, ನಗರೇಶ್ವರ ನಾಗೇನಹಳ್ಳಿ, ಕ್ಯಾಲಸನಹಳ್ಳಿ ಹಾಗೂ ರಾಮಮೂರ್ತಿ ನಗರ ವ್ಯಾಪ್ತಿಯ ಕಲ್ಕೆರೆ ಗ್ರಾಮ ಮತ್ತು ಕೆ.ಚನ್ನಸಂದ್ರ ವ್ಯಾಪ್ತಿಯ ಸುತ್ತಮುತ್ತಲಿನ ಪ್ರದೇಶದ ಸಾರ್ವಜನಿಕರು, ಕಾವೇರಿ ನೀರು ಸರಬರಾಜು ಹಾಗೂ ಒಳಚರಂಡಿ ಪೈಪ್‌ಗಳ ಸಂಪರ್ಕವನ್ನು ನಿಯಮಾನುಸಾರ ತಿಂಗಳ ಒಳಗಾಗಿ ಪಡೆದುಕೊಳ್ಳಬೇಕು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ರಸ್ತೆ ಡಾಂಬರೀಕರಣ ಕೆಲಸ ಪ್ರಾರಂಭವಾದ ಮೇಲೆ ಮತ್ತೆ ರಸ್ತೆ ಅಗೆಯಲು ಮುಂದಾದರೆ ಕಾನೂನಿನ ಕ್ರಮ ಜರುಗಿಸಲಾಗುವುದು ಎಂದು ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.

Follow Us:
Download App:
  • android
  • ios