ರೇಣುಕಾಸ್ವಾಮಿ ಪ್ರಕರಣದ ವಿಚಾರಣೆಯಲ್ಲಿ ಪ್ರಮುಖ ಪ್ರತ್ಯಕ್ಷದರ್ಶಿ ಪುನೀತ್ ತನ್ನ ಹಿಂದಿನ ಹೇಳಿಕೆಯಿಂದ ಹಿಂದೆ ಸರಿದು ಪ್ರಾಸಿಕ್ಯೂಷನ್ಗೆ ಆಘಾತ ನೀಡಿದ್ದಾನೆ. ಇನ್ನು ನಟ ದರ್ಶನ್ ಮತ್ತು ಪವಿತ್ರಾ ಗೌಡ ನಡುವೆ ವಿಡಿಯೋ ಕಾನ್ಫರೆನ್ಸ್ ನಲ್ಲಿ ಖಾಸಗಿ ಸಂಭಾಷಣೆ ಕುತೂಹಲ ಮೂಡಿಸಿದೆ.
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಪ್ರಕರಣದ ವಿಚಾರಣೆ ಬೆಂಗಳೂರಿನ 59ನೇ ಸೆಷನ್ಸ್ ನ್ಯಾಯಾಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ. ಇಂದಿನ ವಿಚಾರಣೆಯಲ್ಲಿ ಪ್ರಕರಣದ ಪ್ರಮುಖ ಪ್ರತ್ಯಕ್ಷದರ್ಶಿ ಸಾಕ್ಷಿ ಪುನೀತ್, ವಿಶೇಷ ಸರ್ಕಾರಿ ಅಭಿಯೋಜಕ ಪ್ರಸನ್ನಕುಮಾರ್ ಅವರ ಪಾಟೀಸವಾಲಿನ ವೇಳೆ ಪ್ರತಿಕೂಲ ಸಾಕ್ಷಿಯಾ ಬದಲಾಗುವ ಮೂಲಕ ಪ್ರಾಸಿಕ್ಯೂಷನ್ಗೆ ದೊಡ್ಡ ಆಘಾತ ನೀಡಿದ್ದಾರೆ. ಮತ್ತೊಂದೆಡೆ, ವಿಚಾರಣೆಯ ನಡುವೆ ತಾಂತ್ರಿಕ ದೋಷದಿಂದ ವಿಡಿಯೋ ಕಾನ್ಫರೆನ್ಸ್ ಸಂಪರ್ಕ ಕಡಿತಗೊಂಡಾಗ ಆರೋಪಿಗಳಾದ ನಟ ದರ್ಶನ್ ಮತ್ತು ಪವಿತ್ರಾ ಗೌಡ ನಡುವೆ ನಡೆದ ಖಾಸಗಿ ಮಾತುಕತೆ ನಡೆದಿದೆ ಎಂದು ವರದಿಯಾಗಿದೆ.
ಕಟಕಟೆಯಲ್ಲಿ ಉಲ್ಟಾ ಹೊಡೆದ ಪ್ರತ್ಯಕ್ಷದರ್ಶಿ ಪುನೀತ್
ಈ ಹಿಂದೆ ಮ್ಯಾಜಿಸ್ಟ್ರೇಟ್ ಮುಂದೆ ಸಿಆರ್ಪಿಸಿ ಸೆಕ್ಷನ್ 164 (CrPC 164) ಅಡಿಯಲ್ಲಿ ಹೇಳಿಕೆ ನೀಡಿದ್ದ ಪ್ರತ್ಯಕ್ಷದರ್ಶಿ ಪುನೀತ್, ರೇಣುಕಾಸ್ವಾಮಿ ಮೇಲೆ ನಟ ದರ್ಶನ್ ಹಲ್ಲೆ ನಡೆಸಿದ್ದನ್ನು ನೋಡಿರುವುದಾಗಿ ತಿಳಿಸಿದ್ದ . ಆದರೆ, ಇಂದು ನ್ಯಾಯಾಲಯದ ಕಟಕಟೆಯಲ್ಲಿ ನಿಂತು ಎಸ್ಪಿಪಿ ಪ್ರಸನ್ನಕುಮಾರ್ ಅವರ ಪ್ರಶ್ನೆಗಳಿಗೆ ಉತ್ತರಿಸಿದ ಪುನೀತ್, ತಮ್ಮ ಹಿಂದಿನ ಹೇಳಿಕೆಯಿಂದ ಸಂಪೂರ್ಣವಾಗಿ ಹಿಂದೆ ಸರಿದಿದ್ದಾರೆ.
ನಾನು ಮ್ಯಾಜಿಸ್ಟ್ರೇಟ್ ಮುಂದೆ ಏನು ಹೇಳಿಕೆ ನೀಡಿದ್ದೆ ಎಂಬುದು ನನಗೆ ನೆನಪಿಲ್ಲ ಹಾಗೂ ಗೊತ್ತಿಲ್ಲ. ಅಂದು ಭಯದಿಂದ ಆ ರೀತಿ ಹೇಳಿಕೆ ನೀಡಿದ್ದೆ ಎಂದು ಪುನೀತ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಮ್ಯಾಜಿಸ್ಟ್ರೇಟ್ ಮುಂದೆ ದಾಖಲಾಗಿದ್ದ ಹೇಳಿಕೆಯನ್ನು ಉಲ್ಲೇಖಿಸಿ ಎಸ್ಪಿಪಿ ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಇಲ್ಲ ಎಂದೇ ಉತ್ತರಿಸಿದ , ಆರೋಪಿಗಳು ಬಂಧನವಾಗಿರುವುದನ್ನು ಟಿವಿಯಲ್ಲಿ ನೋಡಿದ್ದೆ, ಟಿವಿಯಲ್ಲಿ ನೋಡಿದ್ದನ್ನಷ್ಟೇ ನಾನು ಹೇಳಿದ್ದೇನೆ ಎಂದು ಹೇಳುವ ಮೂಲಕ ಪ್ರಕರಣಕ್ಕೆ ಹೊಸ ತಿರುವು ನೀಡಿದ್ದಾನೆ.
ವಿಡಿಯೋ ಕಾನ್ಫರೆನ್ಸ್ ಕಟ್ ಆದಾಗ ದರ್ಶನ್-ಪವಿತ್ರಾ ಮಾತುಕತೆ
ನ್ಯಾಯಾಲಯದ ವಿಚಾರಣೆಯ ಮಧ್ಯೆ ತಾಂತ್ರಿಕ ಕಾರಣದಿಂದ ಕೆಲಕಾಲ ವಿಡಿಯೋ ಕಾನ್ಫರೆನ್ಸ್ ಸಂಪರ್ಕ ಕಡಿತಗೊಂಡಿತ್ತು. ಸಂಪರ್ಕ ಕಟ್ ಆಗಿದೆ ಎಂದು ಭಾವಿಸಿದ ದರ್ಶನ್ ಮತ್ತು ಪವಿತ್ರಾ ಗೌಡ, ಉಳಿದ ಆರೋಪಿಗಳು ಅಲ್ಲಿಂದ ಹೊರಹೋದ ಸಮಯದಲ್ಲಿ ಪರಸ್ಪರ ಯೋಗಕ್ಷೇಮ ವಿಚಾರಿಸಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.
ಅವರಿಬ್ಬರ ನಡುವೆ ನಡೆದ ಸಂಭಾಷಣೆಯ ಏನು?
ವಿಡಿಯೋ ಕಾನ್ಫರೆನ್ಸ್ ಅಲ್ಲಿ ಪರಸ್ಪರ ಯೋಗ ಕ್ಷೇಮ ವಿಚಾರಿಸಿಕೊಂಡ ಸುಬ್ಬಾ - ಸುಬ್ಬಿ ಊಟ ಆಯ್ತಾ? ಎಂದು ಕೇಳಿದ ಪವಿತ್ರಾಗೌಡ ಹೇಗಿದೆ ಬೆನ್ನು ನೋವು? ಫಿಸಿಯೋಥೆರಪಿ ಆಯ್ತಾ? ಎಷ್ಟು ದಿನ ಮಾಡಿಸಬೇಕು? ಎಂದು ಕೇಳಿದಾಗ ದರ್ಶನ್ ಪ್ರತಿಕ್ರಿಯೆ ನೀಡಿ ಬೆನ್ನು ಪೂರ್ತಿ ಮುರಿದು ಹೋಗಿದೆ ನೋವು ಆಗ್ತಿದೆ. ಫಿಸಿಯೋಥೆರಪಿ ಮಾಡ್ತಾ ಇದ್ದಾರೆ. ಒಂದು ಸೆಷನ್ ಆಗಿದೆ ಅಷ್ಟೇ ಇನ್ನೂ ಮಾಡಿಸಬೇಕು ಎಂದಿದ್ದಾನೆ.
ಇನ್ನು ಎಷ್ಟು ದಿನ ಹೀಗೆ ಜೈಲಲ್ಲಿ ಇರಬೇಕು ಎಂದು ಪವಿತ್ರ ಕೇಳಿದಾಗ ಕೈ ಸನ್ನೆಯಲ್ಲಿ 4 ಎಂದು ದರ್ಶನ್ ತಿಳಿಸಿದ್ದು, ಆಗ ಪವಿತ್ರ ನಂಗೆ ಇಲ್ಲಿ ಇರೋದಕ್ಕೆ ಆಗ್ತಾ ಇಲ್ಲ ನರಕ ಆಗ್ತಿದೆ ಎಂದಿದ್ದಾಳೆ. ಆಗ ದರ್ಶನ್ ಇನ್ನು 4 ತಿಂಗಳು ಇರು ಹೈಕೋರ್ಟ್ ಅಲ್ಲಿ ಜಡ್ಜ್ ಚೇಂಜ್ ಆಗ್ತಾರೆ ಎಂದು ಹೇಳಿದ್ದು, ಇದಕ್ಕೆ ಯಾರು ವಿಶ್ವಜಿತ್ ಶೆಟ್ಟಿ ಅವರಾ? ಎಂದು ಪವಿತ್ರ ಕೇಳಿದಾಗ ದರ್ಶನ್ ಹೌದು ಎಂದಿದ್ದಾನೆ. ಜೊತೆಗೆ ಇಷ್ಟು ದಿನನೇ ಇದ್ದಿಯ 4 ರಿಂದ 5 ತಿಂಗಳು ಇರು, ಮೆಂಟಲಿ ಸ್ಟ್ರಾಂಗ್ ಇರು, ಹೃದಯ ಗಟ್ಟಿ ಮಾಡ್ಕೊ ಎಂದು ಹೇಳಿದ ದರ್ಶನ್.
ಇನ್ನು ದರ್ಶನ್ - ಪವಿತ್ರ ಮಾತನಾಡುವಾಗ ಬೇರೆ ಆರೋಪಿಗಳು ಹೊರಗೆ ಹೋಗಿದ್ರು. ಇಬ್ಬರೂ ಮಾತನಾಡುತ್ತಿರುವಾಗಲೇ ದಿಢೀರ್ ಎಂದು ವಿಡಿಯೋ ಕಾನ್ಫರೆನ್ಸ್ ಸಂಪರ್ಕ ಮರುಸ್ಥಾಪನೆಯಾಗಿದ್ದು, ತಕ್ಷಣ ಎಚ್ಚೆತ್ತುಕೊಂಡ ದರ್ಶನ್ ಮತ್ತು ಪವಿತ್ರಾ ಗೌಡ ಮೌನಕ್ಕೆ ಶರಣಾದರು. ಒಂದೆಡೆ ಪ್ರಮುಖ ಸಾಕ್ಷಿ ಪ್ರತಿಕೂಲವಾಗಿರುವುದು ಮತ್ತು ಮತ್ತೊಂದೆಡೆ ಜಡ್ಜ್ ಬದಲಾವಣೆಯ ಬಗ್ಗೆ ಆರೋಪಿಗಳು ನಡೆಸಿರುವ ಚರ್ಚೆ ಕಾರಣವಾಗಿದೆ.














