ಆನೇಕಲ್ [ಮಾ. 29]  ಪರಪ್ಪನ ಅಗ್ರಹಾರದಲ್ಲಿ ಮೂರು ತಿಂಗಳಿಂದ ನಾನ್ ವೆಜ್ ಇಲ್ಲ ಎಂದು ಆರೋಪಿಸಿ ಕೈದಿಗಳು ಪ್ರತಿಭಟನೆ ನಡೆಸಿದ್ದಾರೆ. ಮಧ್ಯಾಹ್ನದ ಊಟ ಬಿಟ್ಟು ಕೈದಿಗಳ ಪ್ರೊಟೆಸ್ಟ್ ಮಾಡಿದ್ದು ಮಾಂಸದ ಊಟ ಬೇಕೇ ಬೇಕು ಎಂದು ಪಟ್ಟು ಹಿಡಿದಿದ್ದಾರೆ.

ಮಾಂಸ ನೀಡುವ ಟೆಂಡರ್ ಪಡೆದ ವ್ಯಕ್ತಿ ಗಾಂಜಾ ಸಾಗಣೆ ಕೇಸ್ ಅಲ್ಲಿ ಅರೆಸ್ಟ್ ಆಗಿದ್ದ ಕಾರಣ 3 ತಿಂಗಳಿಂದ್ ನಾನ್ ವೆಜ್ ನಿಷೇಧ ಮಾಡಲಾಗಿತ್ತು. ಹೊಸ ಟೆಂಡರ್ ಕರೆಯುವಲ್ಲಿ ಅಧಿಕಾರಿಗಳು ವಿಳಂಬ ಮಾಡಿದ್ದು ಪ್ರತಿಭಟನೆಗೆ ಕಾರಣವಾಗಿದೆ.

 ರೈಲಲ್ಲಿ ವೆಜ್-ನಾನ್’ವೆಜ್ ಪ್ರಯಾಣಿಕರಿಗೆ ಪ್ರತ್ಯೇಕ ಸೀಟು..!

ಪ್ರತಿ ಶುಕ್ರವಾರ ಕೈದಿಗಳಿಗೆ ನಾನ್ ವೆಜ್ ನೀಡಲಾಗುತ್ತಿತ್ತು. ಇಂದು ಶುಕ್ರವಾರ ಆದ್ದರಿಂದ ನೀಡ್ತಾರೆ ಎಂದು ಊಟಕ್ಕೆ ಕೈದಿಗಳು ಕಾದು ಕುಳಿತಿದ್ದರು.  ಪ್ರತಿಭಟನೆಯಲ್ಲಿ ತೊಡಗಿದ ಕೈದಿಗಳನ್ನು  ಮುಖ್ಯ ಅಧೀಕ್ಷಕ ಸೋಮಶೇಖರ್ ಸಮಾಧಾನಪಡಿಸಿದರು.