ಕಳೆದ ಕೆಲವು ದಿನಗಳಿಂದ ನಗರದಲ್ಲಿ ದುರ್ಬಲವಾಗಿದ್ದ ಮುಂಗಾರು, ಮತ್ತೆ ಚುರುಕು ಪಡೆದಿದ್ದು ಭಾನುವಾರ ಮಧ್ಯಾಹ್ನ ವಿವಿಧೆಡೆ ಮಳೆಯಾಗಿದೆ.
ಬೆಂಗಳೂರು : ಕಳೆದ ಕೆಲವು ದಿನಗಳಿಂದ ನಗರದಲ್ಲಿ ದುರ್ಬಲವಾಗಿದ್ದ ಮುಂಗಾರು, ಮತ್ತೆ ಚುರುಕು ಪಡೆದಿದ್ದು ಭಾನುವಾರ ಮಧ್ಯಾಹ್ನ ವಿವಿಧೆಡೆ ಮಳೆಯಾಗಿದೆ.
ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣವಿದ್ದು ಮಧ್ಯಾಹ್ನದ ನಂತರ ಅಲ್ಲಲ್ಲಿ ತುಂತುರು ಮಳೆ ಕಾಣಿಸಿಕೊಂಡಿತು. ಸಂಜೆ ವೇಳೆಗೆ ಕೆಲವು ಭಾಗಗಳಲ್ಲಿ ಜೋರು ಮಳೆ ಸುರಿಯಿತು. ಮಾಗಡಿ ರಸ್ತೆ, ಹೆಬ್ಬಾಳ, ಪುಲಕೇಶಿನಗರ, ಚೊಕ್ಕಸಂದ್ರ, ಬಾಣಸವಾಡಿ, ಬಾಗಲಗುಂಟೆ, ದಾಸರಹಳ್ಳಿ, ಮನೋರಾಯನಪಾಳ್ಯದಲ್ಲಿ ಉತ್ತಮ ಮಳೆಯಾಗಿದೆ. ಉಳಿದ ಪ್ರದೇಶಗಳಲ್ಲೂ ಸಾಧಾರಣ ಮಳೆಯಾಗಿದೆ. ಮುಂದಿನ ಒಂದು ವಾರ ಕಾಲ ಮೋಡ ಕವಿದ ವಾತಾವರಣ ಇರಲಿದ್ದು, ಶುಷ್ಕ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಶನಿವಾರ ನಗರದಲ್ಲಿ ಕನಿಷ್ಟ ಉಷ್ಣಾಂಶ 20.3 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಠ 28.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು.
ಎಲ್ಲಿ, ಎಷ್ಟು ಮಳೆ (ಮಿ.ಮೀ.ಗಳಲ್ಲಿ)
ಅಂಜನಾಪುರ 17.50
ವಿ. ನಾಗೇನಹಳ್ಳಿ 16.50
ಬಾಣಸವಾಡಿ 15.50
ಗೊಟ್ಟಿಗೆರೆ 14.50
ಪುಲಕೇಶಿನಗರ 13.50
ಚೊಕ್ಕಸಂದ್ರ 11
ಬಾಗಲಗುಂಟೆ 11
ಮನೋರಾಯನಪಾಳ್ಯ 10.50
ತರಕಾರಿ ಮಾರುಕಟ್ಟೆಯಲ್ಲಿ ಬೆಲೆಗಳು ಗಗನಕ್ಕೇರಿವೆ
ಕಳೆದ 20 ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತೋಟದಲ್ಲೇ ಹಾಳಾಗುತ್ತಿರುವ ಬೆಳೆ ಇದರ ಪರಿಣಾಮವಾಗಿ ಬೆಂಗಳೂರಿನ ತರಕಾರಿ ಮಾರುಕಟ್ಟೆಯಲ್ಲಿ ಬೆಲೆಗಳು ಗಗನಕ್ಕೇರಿವೆ. ಕೆ.ಆರ್.ಮಾರ್ಕೆಟ್‌ಗೆ ಅಗತ್ಯಕ್ಕೆ ತಕ್ಕಷ್ಟು ತರಕಾರಿಗಳು ಆಗಮಿಸದ ಹಿನ್ನೆಲೆ ಪೂರೈಕೆ ಕೊರತೆಯಿಂದ ದರಗಳು ಗಗನಕ್ಕೇರಿವೆ.
ನುಗ್ಗೆಕಾಯಿ ₹200 ಗಡಿ ದಾಟಿದರೆ, ಡಬ್ಬಲ್ ಬಿನ್ಸ್ ಕೆಜಿಗೆ ₹300 ಗಡಿ ದಾಟುವ ಸಾಧ್ಯತೆಯಿದೆ. ಇನ್ನು ಬಟಾಣಿ ಈಗಾಗಲೇ ₹400 ಗಡಿ ದಾಟಿದೆ. ತರಕಾರಿ ಬೆಲೆ ಕೇಳಿ ಗ್ರಾಹಕರು ಸುಸ್ತಾಗಿದ್ದಾರೆ.
ಬೀನ್ಸ್- 80- 100
ಕ್ಯಾರೆಟ್-60-80
ಊಟಿ ಕ್ಯಾರೆಟ್- 100
ಬದನೆಕಾಯಿ-60
ಬಿಳಿ ಬದನೆಕಾಯಿ- 80
ಬೆಂಡೆಕಾಯಿ- 50-60
ತೊಂಡೆಕಾಯಿ- 60
ಬಿಟ್ರೂಟ್- 40
ಚಪ್ಪರದವರೆಕಾಯಿ- 100
ನುಗ್ಗೆಕಾಯಿ- 200
ಬಟಾಣಿ- 400
ಹೀರೇಕಾಯಿ- 60
ಹಾಗಲಕಾಯಿ-80
ಸೌತೆಕಾಯಿ - 60
ಸೋರೆಕಾಯಿ- 60
ಹೂಕೋಸು- 40
ಈರುಳ್ಳಿ- 25
ಬೆಳ್ಳುಳ್ಳಿ- 100
ಮೆಣಸಿನಕಾಯಿ- 60
ಕ್ಯಾಪ್ಸಿಕಂ- 80
ನವಿಲುಕೋಸು- 80
ಡಬ್ಬಲ್ ಬೀನ್ಸ್- 300
ಮಂಗಳೂರು ಸೌತೆ- 60
