Asianet Suvarna News Asianet Suvarna News

'ಕೊರೋನಾ; ರಾತ್ರಿ 10 ರಿಂದ ಬೆಳಗ್ಗೆ 5, ಬೆಂಗ್ಳೂರಿಗರು, ಕಲ್ಬುರ್ಗಿಯವರು ಹೊರಬರಂಗಿಲ್ಲ' Fact Check

ರಾತ್ರಿ 10 ಗಂಟೆಯಿಂದ ಬೆಳಗ್ಗೆ 5ರ ವರೆಗೆ ಮನೆಯಿಂದ ಹೊರಗೆ ಬರಬೇಡಿ/ ಬಿಬಿಎಂಪಿ ಇಂಥ ಆದೇಶ ಹೊರಡಿಸಿದೆಯೇ? ಬೆಂಗಳೂರಿನಲ್ಲಿ ರಾತ್ರಿ ಔಷಧಿ ಸಿಂಪಡಣೆ/ ಸುದ್ದಿ ಸತ್ಯಾಸತ್ಯತೆ ಏನು

Fact Check BBMP Planned to Spraying medicine in air to kill coronavirus
Author
Bengaluru, First Published Mar 18, 2020, 8:14 PM IST

ಬೆಂಗಳೂರು(ಮಾ. 18)   ಕೊರೋನಾ ವೈರಸ್ ಕಾಟ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇದೆಲ್ಲದರ ನಡುವೆ ಬಿಬಿಎಂಪಿ ಹೊರಡಿಸಿದೆ ಎನ್ನಲಾದ ಆದೇಶದ ಸಂದೇಶವೊಂದು ಶರವೇಗದಲ್ಲಿ ಹರಿದಾಡುತ್ತಿದೆ.

ಸೋಶಿಯಲ್ ಮೀಡಿಯಾದ ಆಯಾಮಗಳಾದ ಫೇಸ್ ಬುಕ್, ವಾಟ್ಸಪ್ ನಲ್ಲಿ ಬುಧವಾರ ಈ ಸಂದೇಶದ್ದೇ ಹಾವಳಿ. ಇಂದು ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ಯಾರೂ ಮನೆಯಿಂದ ಹೊರಗೆ ಬರಬೇಡಿ.  ಕೊವೀಡ್ 19 ಕೊರೋನಾ ವೈರಸ್ ನಾಶಕ್ಕಾಗಿ ರಾಸಾಯನಿಕ ಸಿಂಪಡಣೆ ಮಾಡುವ ಕೆಲಸ ಆ  ವೇಳೆಯುಲ್ಲಿ ನಡೆಯಲಿದೆ. ಬೆಂಗಳೂರಿನಲ್ಲಿರುವ ನಿಮ್ಮ ಸ್ನೇಹಿತರು ಮತ್ತು ಬಂಧು-ಬಳಗಕ್ಕೆ ಈ ಸಂದೇಶ ರವಾನಿಸಿ..ಧನ್ಯವಾದ ಎಂಬ ಸಂದೇಶ ಆಂಗ್ಲ ಮಾಧ್ಯಮದಲ್ಲಿ ಹರಿದಾಡುತ್ತಿದೆ.

ಕೊರೋನಾ: ಮಾಧ್ಯಮಗಳು ಹೇಗೆ ನಿಭಾಯಿಸುತ್ತಿವೆ, ವಿವರಣೆ ಇಲ್ಲಿದೆ!

ಆದರೆ ಈ ಸುದ್ದಿಯನ್ನು ಬಿಬಿಎಂಪಿ ಅಲ್ಲಗಳೆದಿದೆ. ನಾವು ಈ ರೀತಿಯ ಯಾವ ಕೆಲಸ ಮಾಡುತ್ತಿಲ್ಲ ಎಂದು ಸ್ಪಷ್ಟನೆ ನೀಡಿದೆ.

ಮಾಸ್ಕ್ ಧರಿಸಿ ದರೋಡೆ ಮಾಡಿದ ಪ್ರಕರಣ ಬಿಹಾರದಿಂದ ವರದಿಯಾಗಿತ್ತು. ನಿಮ್ಮ  ಮನೆಗೆ  ಕೊರೋನಾ ಬರದಂತೆ ತಡೆಯುತ್ತೇವೆ, ಔಷಧಿ ಸಿಂಪಡಣೆ ಮಾಡುತ್ತೇವೆ ಎಂದೆಲ್ಲ ನಂಬಿಸುವವರು ಇದ್ದಾರೆ. ಕೊರೋನಾದ ಜತೆಗೆ ಇಂಥ ಘಟನಾವಳಿಗಳಿಂದಲೂ ಜಾಗೃತರಾಗಿರಬೇಕಾಗುತ್ತದೆ.

ರಾತ್ರಿ ವೇಳೆಯಲ್ಲಿ  ಔಷಧ ಸಿಂಪಡಿಸುತ್ತಿಲ್ಲ: ಡಿ.ಸಿ.ಶರತ್ ಬಿ. ಸ್ಪಷ್ಟನೆ

ಕಲಬುರಗಿ:  ಕೊರೋನಾ ವೈರಸ್ ಹರಡದಂತೆ ಅರೋಗ್ಯ ಇಲಾಖೆಯಿಂದ ಕಲಬುರಗಿ ನಗರದಲ್ಲಿ ಗಾಳಿಯಲ್ಲಿ ಔಷಧ ಸಿಂಪಡಿಸುತ್ತಿಲ್ಲ ಎಂದು ಜಿಲ್ಲಾಧಿಕಾರಿ ಶರತ್ ಬಿ. ಸ್ಪಷ್ಟಪಡಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಇಂದು ರಾತ್ರಿ 10 ಗಂಟೆಯುಂದ ಬೆಳಿಗ್ಗೆ 5 ಗಂಟೆ ವರೆಗೆ ಗಾಳಿಯಲ್ಲಿ ಔಷಧ ಸಿಂಪಡಿಸಲಾಗುತ್ತಿದೆ. ಹೀಗಾಗಿ ಸಾರ್ವಜನಿಕರು ಹೊರಗಡೆ ಬರಬಾರದು ಎಂಬುದು ಸುಳ್ಳು ಸುದ್ದಿ ಹರಿದಾಡುತ್ತಿದೆ. ಇಂತಹ ಊಹಾಪೋಹ ಸುದ್ದಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು ಎಂದಿದ್ದಾರೆ.

ಆರೋಗ್ಯ ತುರ್ತು ಪರಿಸ್ಥಿತಿಯ ಈ ಸಂದರ್ಭದಲ್ಲಿ ಇಂತಹ ಗಾಳಿ ಸುದ್ದಿಗಳಿಗೆ ಯಾರು ನಂಬಬಾರದು ಮತ್ತು ಅನಗತ್ಯ ಭಯಭೀತರಾಗಬಾರದು. ಜಿಲ್ಲಾಡಳಿತದಿಂದ ನೀಡಲಾಗುವ ಅಧಿಕೃತ ಮಾಹಿತಿಯನ್ನು ಮಾತ್ರ ಸಾರ್ವಜನಿಕರು ಪರಿಗಣಿಸಬೇಕು ಎಂದು ಅವರು ಜಿಲ್ಲೆಯ ಜನತೆಯಲ್ಲಿ ಮನವಿ ಮಾಡಿದ್ಧಾರೆ.

 

 

Follow Us:
Download App:
  • android
  • ios