Asianet Suvarna News Asianet Suvarna News

BMTC: ಅಂತಿಮ ವರ್ಷದ ವಿದ್ಯಾರ್ಥಿಗಳ ಪಾಸ್‌ ವಿಸ್ತರಿಸಿದ ಬಿಎಂಟಿಸಿ

2021-22 ನೇ ಸಾಲಿನ ವಿದ್ಯಾರ್ಥಿ ಬಸ್‌ ಪಾಸಿನೊಂದಿಗೆ ಅಂತಿಮ ವರ್ಷದ/ಸೆಮಿಸ್ಟರ್‌ನ ಪದವಿ, ವೃತ್ತಿಪರ, ಸ್ನಾತಕೋತ್ತರ ಮತ್ತು ತಾಂತ್ರಿಕ ಹಾಗೂ ವೈಧ್ಯಕೀಯ ವಿದ್ಯಾರ್ಥಿಗಳು ದಿನಾಂಕ 31.10.2022 ರವರೆಗೆ ಸಂಸ್ಥೆಯ ಸಾಮಾನ್ಯ ಸೇವೆಗಳಲ್ಲಿ ಪ್ರಯಾಣಿಸಲು ಬಿಎಂಟಿಸಿ ಅವಕಾಶ ಕಲ್ಪಿಸಿದೆ.

BMTC extending students pass for final year students till October 31 san
Author
First Published Sep 1, 2022, 5:00 PM IST

ಬೆಂಗಳೂರು (ಸೆ.1): ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(Bangalore Metropolitan Transport Corporation) ಅಂತಿಮ ವರ್ಷದ ವಿದ್ಯಾರ್ಥಿ ಪಾಸ್‌ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. ಕೋವಿಡ್‌-19 ಸಾಂಕ್ರಾಮಿಕದ ಕಾರಣ 2021-22 ನೇ ಸಾಲಿನ ಕಾಲೇಜಿನ ತರಗತಿಗಳು ತಡವಾಗಿ ಪ್ರಾರಂಭವಾಗಿದೆ. ಅಂತಿಮ ಸೆಮಿಸ್ಟರ್‌ನ ಪದವಿ, ವೃತ್ತಿಪರ, ಸ್ನಾತಕೋತ್ತರ ಮತ್ತು ತಾಂತ್ರಿಕ ಹಾಗೂ ವೈದ್ಯಕೀಯ ವಿದ್ಯಾರ್ಥಿಗಳ ಪರೀಕ್ಷೆಗಳು ಸೆಪ್ಟೆಂಬರ್‌-2022 ಮತ್ತು ಅಕ್ಟೋಬರ್‌ – 2022ರ ತಿಂಗಳಲ್ಲಿ ನಡೆಯಲಿದೆ. ಈ ಸಲುವಾಗಿ, ಸದರಿ ವಿದ್ಯಾರ್ಥಿಗಳ ಪರೀಕ್ಷೆಗಳು ಮುಗಿಯುವವರೆಗೂ ಸಂಸ್ಥೆಯ ಸೇವೆಗಳಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸುವ ಸಲುವಾಗಿ, 2021-22 ನೇ ಸಾಲಿನ ವಿದ್ಯಾರ್ಥಿ ಬಸ್‌ ಪಾಸಿನೊಂದಿಗೆ (students pass) ಅಂತಿಮ ವರ್ಷದ/ಸೆಮಿಸ್ಟರ್‌ನ ಪದವಿ, ವೃತ್ತಿಪರ, ಸ್ನಾತಕೋತ್ತರ ಮತ್ತು ತಾಂತ್ರಿಕ ಹಾಗೂ ವೈಧ್ಯಕೀಯ ವಿದ್ಯಾರ್ಥಿಗಳು ದಿನಾಂಕ ಅಕ್ಟೋಬರ್‌ 31ರವರೆಗೆ ಸಂಸ್ಥೆಯ ಸಾಮಾನ್ಯ ಸೇವೆಗಳಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ಇದಕ್ಕೂ ಮುನ್ನ ಕೂಡ ಬಿಎಂಟಿಸಿ ಹಲವು ಬಾರಿ ವಿದ್ಯಾರ್ಥಿ ಪಾಸ್‌ಗಳ ವಿಸ್ತರಣೆ ಮಾಡಿತ್ತು.


 

Follow Us:
Download App:
  • android
  • ios