ಬೆಂಗಳೂರು ಟ್ರಾಫಿಕ್ ನಿಯಮಗಳು ಕಠಿಣಗೊಳ್ಳುತ್ತಿದೆ. ತಪ್ಪು ಯಾರೇ ಮಾಡಿದರೂ ದಂಡ ಖಚಿತ. ಇದೀಗ ಹೆಲ್ಮೆಟ್ ಧರಿಸದೆ ಬೈಕ್ ಹಿಂಬದಿ ಸವಾರರಾಗಿ ತೆರಳಿದ ಟ್ರಾಫಿಕ್ ಪೊಲೀಸ್‌ಗೆ ದಂಡ ಹಾಕಲಾಗಿದೆ. ವಿಡಿಯೋ ವೈರಲ್ ಆದ ಬೆನ್ನಲ್ಲೇ ದಂಡ ವಿಧಿಸಲಾಗಿದೆ.

ಬೆಂಗಳೂರು(ಮೇ.27) ನಿಯಮ ಎಲ್ಲರಿಗೂ ಒಂದೇ. ಹಲವು ಬಾರಿ ಅವರಿಗೊಂದು ನ್ಯಾ, ಇವರಿಗೊಂದು ನ್ಯಾಯ ಅನ್ನೋ ಚರ್ಚೆಗಳು ಜೋರಾಗಿ ಕೇಳುತ್ತದೆ. ಆದರೆ ಬೆಂಗಳೂರು ಟ್ರಾಫಿಕ್ ವಿಚಾರದಲ್ಲಿ ನಿಯಮ ಕಠಿಣ. ಎಲ್ಲೆಡೆ ಎಐ ಕ್ಯಾಮೆರಾ ಅಳವಡಿಸಲಾಗಿದೆ. ನಿಯಮ ಉಲ್ಲಂಘಿಸಿದರೆ ದಂಡ ಖಚಿತ. ಇನ್ನು ವೈರಲ್ ವಿಡಿಯೋಗಳನ್ನು ಅಧರಿಸಿ ಟ್ರಾಫಿಕ್ ಪೊಲೀಸರು ದಂಡ ವಿಧಿಸುತ್ತಾರೆ. ಇದೀಗ ಬೆಂಗಳೂರು ಟ್ರಾಫಿಕ್ ಪೊಲೀಸ್‌ಗೆ ದಂಡ ವಿಧಿಸಿದ ಘಟನೆ ನಡೆದಿದೆ. ಹೆಲ್ಮೆಟ್ ಧರಿಸಿದ ಹಿಂಬದಿ ಸವಾರರಾಗಿ ತೆರಳಿದ ಟ್ರಾಫಿಕ್ ಪೊಲೀಸ್ ನಿಯಮ ಉಲ್ಲಂಘಿಸಿದ ಕಾರಣಕ್ಕೆ ದಂಡ ವಿಧಿಸಲಾಗಿದೆ.

ಇಬ್ಬರು ಟ್ರಾಫಿಕ್ ಪೊಲೀಸರು ಬೈಕ್ ಮೂಲಕ ತೆರಳಿದ್ದಾರೆ. ಹೆಬ್ಬಾಳ ವಲಯದಲ್ಲಿ ಈ ಘಟನೆ ನಡೆದಿದೆ. ಆದರೆ ಬೈಕ್ ರೈಡಿಂಗ್ ಮಾಡುತ್ತಿರುವ ಪೊಲೀಸ್ ಹೆಲ್ಮೆಟ್ ಧರಿಸಿದ್ದರೆ, ಹಿಂಬದಿ ಕುಳಿತ ಪೊಲೀಸ್ ಹೆಲ್ಮೆಟ್ ಇಲ್ಲದೆ ಸವಾರಿ ಮಾಡಿದ್ದಾರೆ. ಈ ಫೋಟೋ ಹಾಗೂ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ನಿಯಮ ಉಲ್ಲಂಘಿಸಿದ ಟ್ರಾಫಿಕ್ ಪೊಲೀಸ್ ಮೇಲೆ ದಂಡ ವಿಧಿಸಲಾಗಿದೆ.

ಹೆಲ್ಮೆಟ್ ಇಲ್ಲದೆ ಸವಾರಿ ಮಾಡಿದ ಪೊಲೀಸ್‌ಗೆ 500 ರೂ ದಂಡ

ಬೈಕ್‌ನಲ್ಲಿ ಹಿಂಬದಿ ಸವಾರರಾಗಿ ಹೆಲ್ಮೆಟ್ ಇಲ್ಲದೆ ಸವಾರಿ ಮಾಡಿದ ನಿಯಮ ಉಲ್ಲಂಘಿಸಿದ ಟ್ರಾಫಿಕ್ ಪೊಲೀಸ್‌ಗೆ 500 ರೂಪಾಯಿ ದಂಡ ವಿಧಿಸಲಾಗಿದೆ. ಟ್ರಾಫಿಕ್ ಪೊಲೀಸ್ ಬೈಕ್ ನಂಬರ್ ಮೇಲೆ ದಂಡ ವಿಧಿಸಲಾಗಿದೆ. ಹೆಲ್ಮೆಟ್ ಇಲ್ಲದೆ ಸವಾರಿ ಮಾಡಿ ನಿಯಮ ಉಲ್ಲಂಘಿಸಿದ ಕಾರಣಕ್ಕೆ ಕಾನೂನು ಪ್ರಕಾರ 500 ರೂಪಾಯಿ ದಂಡ ವಿಧಿಸಲಾಗಿದೆ.

ದಂಡ ವಿಧಿಸಿದ ಹೆಬ್ಬಾಳ ಟ್ರಾಫಿಕ್ ಪೊಲೀಸ್

ಹೆಬ್ಬಾಳ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಹೆಬ್ಬಾಳ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ. ತಕ್ಷಣವೇ ಬೈಕ್ ನಂಬರ್ ಪ್ಲೇಟ್ ಗುರುತಿಸಿ ಸಿಸಿಟಿವಿಯಲ್ಲಿ ಪರಿಶೀಲಿಸಿದ್ದಾರೆ. ಈ ವೇಳೆ ಪೊಲೀಸರೇ ನಿಯಮ ಉಲ್ಲಂಘಿಸಿರುವುದು ಸಾಬೀತಾಗಿದೆ. ಹೀಗಾಗಿ ತಕ್ಷಣವೇ ದಂಡ ವಿಧಿಸಿದ್ದಾರೆ.

ಬೆಂಗಳೂರು ಟ್ರಾಫಿಕ್ ನಿಯಮ ಮತ್ತಷ್ಟು ಕಠಿಣ

ಬೆಂಗಳೂರು ಟ್ರಾಫಿಕ್ ನಿಯಮಗಳು ಕಠಿಣವಾಗಿದೆ. ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಬಗೆ ಹರಿಸಲು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಯಾವುದೇ ಟ್ರಾಫಿಕ್ ನಿಯಮ ಉಲ್ಲಂಘನೆಗೆ ದಂಡ ವಿಧಿಸಲಾಗುತ್ತದೆ. ನಗರದ ಹಲವು ಜಂಕ್ಷನ್‌ಗಳಲ್ಲಿ ಎಐ ಕ್ಯಾಮೆರಾ ಬಳಕೆ ಮಾಡಲಾಗುತ್ತಿದೆ. ಈ ಮೂಲಕ ನಿಯಮ ಉಲ್ಲಂಘನೆಯನ್ನು ಪತ್ತೆ ಹಚ್ಚಲಾಗುತ್ತಿದೆ.

ಬೆಂಗಳೂರಿನಲ್ಲಿ ಶೀಘ್ರದಲ್ಲೇ ಟೋಯಿಂಗ್ ಜಾರಿ

ಬೆಂಗಳೂರಿನಲ್ಲಿ ಎಲ್ಲೆಡೆ ಪಾರ್ಕಿಂಗ್ ಮಾಡುತ್ತಿರುವ ಕಾರಣ ಟ್ರಾಫಿಕ್ ಹೆಚ್ಚಾಗುತ್ತಿದೆ. ಹೀಗಾಗಿ ಸ್ಥಗಿತಗೊಂಡಿದ್ದ ಟೋಯಿಂಗ್ ಮತ್ತೆ ಜಾರಿ ಮಾಡಲಾಗುತ್ತದೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ. ಬೆಂಗಳೂರು ಪೊಲೀಸರು ಜೊತೆಗಿನ ಮಹತ್ವದ ಚರ್ಚೆ ಬಳಿಕ ಈ ನಿರ್ಧಾರ ಪ್ರಕಟಿಸಿದ್ದಾರೆ.