ಬ್ರಿಗೇಡ್ ರಸ್ತೆ ಹೊಸ ವರ್ಷ ಪಾರ್ಟಿಯಲ್ಲಿ ನೂಕು ನುಗ್ಗಲು, ಲಘು ಲಾಠಿ ಪ್ರಹಾರ!

ಬೆಂಗಳೂರಿನ ಬ್ರಿಗೇಡ್ ರಸ್ತೆ ಹೊಸ ವರ್ಷ ಪಾರ್ಟಿಗೆ ಭಾರಿ ಜನ ಸೇರಿದ್ದಾರೆ. ಈ ವೇಳೆ ನುಕು ನುಗ್ಗಲು ಸಂಭವಿಸಿದೆ. ಇದರ ಪರಿಣಾಮ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ ಘಟನೆ ವರದಿಯಾಗಿದೆ.

Bengaluru Police lathi charge to control crowd at brigade road new year celebration ckm

ಬೆಂಗಳೂರು(ಡಿ.31) ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ಇತರ ಎಲ್ಲಾ ನಗರಕ್ಕಿಂತ ವಿಶೇಷ. ಅದ್ಧೂರಿಯಾಗಿ ಹೊಸ ವರ್ಷಾಚರಣೆ ಮಾಡಲಾಗುತ್ತದೆ. ಈ ಬಾರಿಯೂ ಹೊಸ ವರ್ಷಚಾರಣೆಗೆ ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರು. ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್ ಸೇರಿದಂತೆ ಹಲವೆಡೆ ಸಂಭ್ರಮಿಸಲಾಗಿದೆ.ಇದರ ನಡುವೆ ಬ್ರಿಗೇಡ್ ರಸ್ತೆಯಲ್ಲಿ ಭಾರಿ ಸಂಖ್ಯೆಯಲ್ಲಿ ಜನ ಸೇರಿದ ಕಾರಣ ನೂಕು ನುಗ್ಗಲು ಸಂಭವಿಸಿದೆ. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಹಾಸ ಪಡಬೇಕಾಗಿದೆ. ಇದೇ ವೇಳೆ ನೂಕು ನುಗ್ಗಲು ಹಾಗೂ ಜನರ ನಿಯಂತ್ರಣಕ್ಕೆ ಲು ಲಾಠಿ ಪ್ರಹಾರ ನಡೆಸಲಾಗಿದೆ.

ಬ್ರಿಗೇಡ್ ರಸ್ತೆಯಲ್ಲಿ ಹೊಸ ವರ್ಷಕ್ಕೆ ಕ್ಷಣಗಣನೆ ಶುರುವಾಗುತ್ತಿದ್ದಂತೆ ಭಾರಿ ಸಂಖ್ಯೆಯಲ್ಲಿ ಜನ ನೆರೆದಿದ್ದರೆ. ಈ ವೇಳೆ ನೂಕು ನುಗ್ಗಲು ಸಂಭವಿಸಿದೆ. ಹೀಗಾಗಿ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ಲಘು ಲಾಠಿ ಪ್ರಹಾರ ಮಾಡಿ ನಿಯಂತ್ರಿಸಲಿದ್ದಾರೆ. ಇದೇ ವೇಳೆ ಪೊಲೀಸರು ಜನರನ್ನು ಹೊರಗೆ ಕಳುಹಿಸಲು ಹರಸಾಹಸ ಪಟ್ಟಿದ್ದರೆ. ಮೈಕ್ ಮೂಲಕ ಅನೌನ್ಸ್ ಮಾಡಿದ್ದಾರೆ.  ಬ್ಯಾರಿಕೇಡ್ ಹಿಡಿದೇ ತಳ್ಳಾಡುತ್ತಿರುವ ಜನರನ್ನು ನಿಯಂತ್ರಿಸಲು ಪೊಲೀಸರು ಎಮರ್ಜೆನ್ಸಿ ಸೈರನ್ ಬಳಸಿದ್ದಾರೆ.

ಹೊಸ ವರ್ಷದ ಕಾರಣ ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್ ರಸ್ತೆಗಳಲ್ಲಿರುವ ಪಬ್‌ಗಳಲ್ಲಿ ಜನ ತುಂಬಿ ತುಳುಕಿದ್ದಾರೆ. ಪಬ್ ಗಳಲ್ಲಿ ಪುಲ್ ಪಾರ್ಟಿ ಮೂಡ್ ನಲ್ಲಿರುವ ಮದ್ಯ ಪ್ರಿಯರು ಸ್ಟೆಪ್ ಹಾಕಿ ಹೊಸ ವರ್ಷ ಸ್ವಾಗತ ಕೋರುತ್ತಿದ್ದಾರೆ.  

ಬೆಂಗಳೂರಿನ ಹೊಸ ವರ್ಷ ಪಾರ್ಟಿ ಮತ್ತಲ್ಲಿ ಮಗುವನ್ನೇ ಮರೆತ ಪೋಷಕರು, ಪೊಲೀಸ್ ವಶದಲ್ಲಿ ಕಂದ!

ಬ್ರಿಗೇಡ್ ರಸ್ತೆ ಸೇರಿದಂತೆ ಹಲೆವೆಡೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಹೆಚ್ಚುವರಿ ಪೊಲೀಸ್ ನಿಯೋಜನೆ,ಸಿಸಿಟಿ ಅಳವಡಿಕೆ ಸೇರಿದಂತ ಹಲವು ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದಾರೆ ಬ್ರಿಗೇಡ್ ರಸ್ತೆಗೆ ಆಗಮಿಸುವ ಪ್ರತಿಯೊಬ್ಬರನ್ನು ಪೊಲೀಸರು ತಪಾಸಣೆ ಮಾಡಿದ್ದಾರೆ. ಸಿಗರೇಟ್ ,ಮದ್ಯ ,ಇತರೆ ಅಪಾಯಕಾರಿ ವಸ್ತುಗಳನ್ನು ಕಂಡು ಬಂದರೆ ವಾಪಸ್ ಕಳುಹಿಸಲಾಗಿದೆ. ಇಷ್ಟೇ ಅಲ್ಲ ಇವರಿಂದ ನಿರ್ಬಂಧಿತ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.  ರಸ್ತೆಯಲ್ಲಿ ಗುಂಪು ಸೇರಲು ಅವಕಾಶ ನಿರಾಕರಿಸಲಾಗಿದೆ. ಒನ್ ವೇ ಮಾಡಿರುವ ಕಾರಣ ರಸ್ತೆಯಲ್ಲಿ ನಿಲ್ಲಲು ಅವಕಾಶ ನಿರಾಕರಿಸಲಾಗಿದೆ.  ಬೆಂಗಳೂರು ನಗರದಲ್ಲಿ 11 ಸಾವಿರಕ್ಕೂ ಹೆಚ್ಚು ಪೋಲಿಸರ ನಿಯೋಜಿಸಲಾಗಿದೆ.  ಮಹಿಳೆಯರಿಗಾಗಿಯೇ ಪ್ರತ್ಯೇಕ ಪಥ ನಿರ್ಮಿಸಲಾಗಿದೆ.  

ಇತ್ತ ಕೋರಮಂಗಲದಲ್ಲಿ ಹೊಸ ವರ್ಷ ಪಾರ್ಟಿಯಲ್ಲಿ ಯುವಕನೊಬ್ಬ ಕುಡಿದು ಟೈಟ್ ಆದ ಘಟನೆ ನಡೆದಿದೆ. ಕಂಠಪೂರ್ತಿ ಕುಡಿದು ನೆಲಕ್ಕೆ ಬಿದ್ದ ಯುವಕನನ್ನು ಪೊಲೀಸರು ಮೇಲಕ್ಕೆತ್ತಿ ಕಳುಹಿಸಿದ್ದಾರೆ. ತನ್ನನ್ನು ಮೇಲಕ್ಕೆತ್ತಿದ ಪೊಲೀಸರಿಗೆ ಅಪ್ಪುಗೆ ನೀಡಿದ ಘಟನೆಯೂ ನಡೆದಿದೆ. 

ಹೊಸ ವರ್ಷ ಸಂಭ್ರಮಾಚರಣೆ, ಬೆಂಗಳೂರಿನ ಬಹುತೇಕ ಫ್ಲೈವರ್ ಬಂದ್!
 

Latest Videos
Follow Us:
Download App:
  • android
  • ios