ಬೆಂಗಳೂರಿಗನಿಗೆ ಸಿಲ್ಕ್ ಬೋರ್ಡ್ ರಸ್ತೆಯಲ್ಲಿ ಸಿಕ್ಕಿತು ಐಫೋನ್, ಮುಂದಾಗಿದ್ದೇ ರೋಚಕ!
ಬೆಂಗಳೂರಿನ ಟ್ರಾಫಿಕ್ ತುಂಬಿದ ಸಿಲ್ಕ್ ಬೋರ್ಡ್ ರಸ್ತೆಯಲ್ಲಿ ಹೊಸ ಐಫೋನ್ ಸಿಕ್ಕಿತ್ತು. ಆದರೆ ರಸ್ತೆಗೆ ಬಿದ್ದ ರಭಸಕ್ಕೆ ಫೋನ್ ಪುಡಿಯಾಗಿತ್ತು. ಈ ಐಫೋನ್ ಹೆಕ್ಕಿ ತೆಗೆದ ವ್ಯಕ್ತಿ ಮುಂದೇನು ಮಾಡಿದ?
ಬೆಂಗಳೂರು(ಜು.08) ಸಿಲಿಕಾನ್ ಸಿಟಿ ಬೆಂಗಳೂರಿಗೆ ಪ್ರತಿ ನಿತ್ಯ ಲಕ್ಷಾಂತರ ಮಂದಿ ಆಗಮಿಸುತ್ತಾರೆ.ನಾನಾ ಕಾರಣಗಳಿಗೆ ಆಗಮಿಸುವ ಜನ ಇಲ್ಲಿನ ವಾತವಾರಣ ಮೆಚ್ಚದೆ ಇರಲಾರರು. ಆದರೆ ಹೀಗೆ ಬೆಂಗಳೂರಿಗೆ ಬಂದವರು ಪೈಕಿ ಕೆಲವರ ಫೋನ್ ಕಳುವಾದ ಘಟನೆ, ಬಿದ್ದು ಹೋದ ಘಟನೆಗಳು ಪ್ರತಿ ದಿನ ವರದಿಯಾಗುತ್ತಲೇ ಇದೆ. ಕಳೆದುಕೊಂಡ ಫೋನ್ ಮರಳಿ ಸಿಕ್ಕಿದ ಉದಾಹರಣೆಗಳು ತೀರಾ ವಿರಳ. ಇದೀಗ ಬೆಂಗಳೂರಿನ ಸಿಲ್ಕ್ ಬೋರ್ಡ್ ರಸ್ತೆಯಲ್ಲಿ ಸಿಕ್ಕ ಆ್ಯಪಲ್ ಐಫೋನ್ ಘಟನೆ ಬೆಂಗಳೂರಿಗರ ಹೃದಯ ವೈಶಾಲ್ಯತೆ, ಮಾನವೀಯತೆ, ನೆರವಿಗೆ ಧಾವಿಸುವ ಗುಣಗಳನ್ನು ಕಟ್ಟಿಕೊಡುತ್ತದೆ.
IcyRefrigerator9291 ಅನ್ನೋ ರೆಡಿಟ್ ಖಾತೆಯಲ್ಲಿ ಈ ರೋಚಕ ಮಾಹಿತಿ ಹಂಚಿಕೊಳ್ಳಲಾಗಿದೆ. ಸಿಲ್ಕೋ ಬೋರ್ಡ್ ರಸ್ತೆಯಲ್ಲಿ ಐಫೋನ್ ಒಂದು ಸಿಕ್ಕಿದೆ. ಫೋನ್ ರಸ್ತೆಗೆ ಬಿದ್ದ ರಭಸ, ವಾಹನಗಳ ಓಡಾಟದಿಂದ ಐಫೋನ್ ಕೆಲ ಭಾಗ ಪುಡಿಯಾಗಿತ್ತು. ಯಾರದ್ದೋ ಫೋನ್ ಕಳೆದುಹೋಗಿದೆ. ಇದನ್ನು ಮಾಲೀಕರಿಗೆ ಹಿಂತಿರುಗಿಸಬೇಕು ಎಂದು ಹೆಕ್ಕಿಕೊಂಡ ವ್ಯಕ್ತಿ ಪ್ರಯತ್ನಗಳನ್ನು ಆರಂಭಿಸುತ್ತಾನೆ.
ನೇರವಾಗಿ ಸಾಮಾಜಿಕ ಮಾಧ್ಯಮದಲ್ಲಿ ಪುಡಿಯಾದ ಮೊಬೈಲ್ ಐಫೋನ್ ಪೋಟೋ ಪೋಸ್ಟ್ ಮಾಡಿದ್ದಾನೆ. ಸಿಲ್ಕ್ ಬೋರ್ಡ್ ರಸ್ತೆಯಲ್ಲಿ ಐಫೋನ್ ಸಿಕ್ಕಿದೆ. ಈ ಫೋನ್ ನಿಮ್ಮದಾಗಿದ್ದರೆ, ಚಿಂತೆ ಬೇಡ, ಈ ಫೋನ್‌ಗೆ ಕರೆ ಮಾಡಿ. ನಾನು ಡನ್ಜೋ ಮಾಡುತ್ತೇನೆ ಎಂದು ಸಂದೇಶ ಹಾಕಿದ್ದ. ಹಲವು ಸಂದೇಶಗಳು, ಪ್ರತಿಕ್ರಿಯೆಗಳು ಈ ಪೋಸ್ಟ್‌ಗೆ ವ್ಯಕ್ತವಾಗಿತ್ತು.
ಅವನ ಬ್ಯಾಗ್‌ನಲ್ಲಿ ಬಾಂಬ್ ಇದೆ, ಮುಂಬೈಗೆ ಹೋಗ್ತಿರೋ ಗೆಳೆಯನನ್ನ ತಡೆಯಿರಿ: ಬೆಂಗಳೂರು ಏರ್ಪೋರ್ಟ್‌ಗೆ ಯುವತಿ ಕರೆ
ಫೋನ್‌ಗೆ ಕರೆ ಮಾಡಲು ಪೋಸ್ಟ್ ಹಾಕಿ ಆಗಿದೆ.ಆದರೆ ಫೋನ್ ಮಾತ್ರ ಆನ್ ಆಗುತ್ತಿಲ್ಲ. ಫೋನ್ ಚಾರ್ಜ್ ಮಾಡಿದರೂ ಪ್ರಯೋಜನವಾಗಿಲ್ಲ. 2 ಗಂಟೆ ಚಾರ್ಜ್ ಮಾಡುತ್ತಾ ರಿ ಸ್ಟಾರ್ಟ್ ಮಾಡುವ ಪ್ರಯತ್ನ ಫಲಿಸಿದರೂ ಡ್ಯಾಮೇಜ್ ಕಾರಣ ಫೋನ್ ನೆಟ್‌ವರ್ಕ್ ಕಾರ್ಯನಿರ್ವಹಿಸುತ್ತಿಲ್ಲ. ಹೀಗಾಗಿ ಫೋನ್ ಹೆಚ್ಚು ಡ್ಯಾಮೇಜ್ ಆಗಿದೆ ಎಂದು ಪೋಸ್ಟ್‌ನಲ್ಲಿ ಅಪ್‌ಡೇಟ್ ಮಾಡಿದ್ದ.
ಫೋನ್ ಆನ್ ಮಾಡಿ ಕರೆಗೆ ಕಾಯುವ ಪ್ರಯತ್ನ ಕೈಗೂಡಲಿಲ್ಲ. ಹೀಗಾಗಿ ಪೊಲೀಸ್ ಠಾಣೆಗೆ ಒಪ್ಪಿಸಲು ನಿರ್ಧರಿಸಿದೆ. ಇನ್ನೇನು ಪೊಲೀಸ್ ಠಾಣೆಗೆ ತೆರಳುವ ಮುನ್ನ ಮತ್ತೊಂದು ರಿಸ್ಕ್ ತಗೆದುಕೊಳ್ಳಲು ನಿರ್ಧರಿಸಿದ್ದ. ಐಫೋನ್ ಸಿಮ್ ಕಾರ್ಡ್ ತೆಗೆದು ತನ್ನ ಫೋನ್‌ಗೆ ಹಾಕಿದರೆ ಕರೆಗಳು ಬರಬಹುದು. ಆದರೆ ಅನಾಮಿಕರ ಫೋನ್ ಸಿಮ್ ಕಾರ್ಡ್ ಈ ರೀತಿ ಉಪಯೋಗಿಸುವುದು ಅತೀ ದೊಡ್ಡ ಅಪಾಯಕ್ಕೆ ಎಡೆ ಮಾಡಿಕೊಡಲಿದೆ.
ಮಾಲೀಕರಿಗೆ ಫೋನ್ ಹಿಂತಿರುಗಿಸುವ ಒಳ್ಳೆ ಉದ್ದೇಶಕ್ಕಾಗಿ ಈ ರಿಸ್ಕ್ ತೆಗೆದುಕೊಳ್ಳಲು ನಿರ್ಧರಿಸಿದ ಆತ, ಸಿಮ್ ತೆಗೆದು ತನ್ನ ಫೋನ್‌ಗೆ ಹಾಕಿದ ಬೆನ್ನಲ್ಲೇ 100ಕ್ಕೂ ಹೆಚ್ಚು ಮಿಸ್ ಕಾಲ್ ಮೆಸೇಜ್. ಆದರೆ ಈ ಎಲ್ಲಾ ಮೆಸೇಜ್ ಜಿಯೋದಿಂದ ಬಂದಿತ್ತು. ಕೆಲ ಹೊತ್ತಲ್ಲೇ ಫೋನ್ ಮಾಲೀಕನ ಗೆಳೆಯನಿಂದ ಕರೆ ಬಂದಿತ್ತು. ಫೋನ್ ಸ್ವೀಕರಿಸಿ ಮಾತನಾಡಿ ಮಾಹಿತ ಪಡೆದು ಫೋನ್ ಹಿಂತಿರುಗಿಸಲು ಸ್ಥಳ ನಿರ್ಧರಿಸಲಾಯಿತು.
ಫೋರಮ್ ಮಾಲ್‌ನಲ್ಲಿ ಫೋನ್ ಹಿಂತಿರುಗಿಸಲು ನಿರ್ಧರಿಸಲಾಯಿತು. ಕೇರಳದಿಂದ ಆಗಮಿಸಿ ಯುವಕರ ತಂಡದ ಒಬ್ಬನ ಫೋನ್ ಇದಾಗಿತ್ತು. ಫೋನ್ ಮಾಲೀಕ ಇತ್ತೀಚೆಗೆ ಉದ್ಯೋಗ ಕಳೆದುಕೊಂಡಿದ್ದ. ಬೇರೆ ಕೆಲಸ ಹುಡಿಕಿದರೂ ಸರಿಯಾಗಿ ಸಿಗಲಿಲ್ಲ. ಹೀಗಾಗಿ ಬೆಂಗಳೂರು ತೊರೆದು ಮರಳಿ ಕೇರಳಕ್ಕೆ ವಾಪಾಸ್ ಆಗಲು ನಿರ್ಧರಿಸಿದ್ದ. ಇದರ ನಡುವೆ ಫೋನ್ ಕಳೆದು ಹೋಗಿತ್ತು. ಫೋನ್ ಮಾಲೀಕ, ಆತನ ಗೆಳೆಯರು ಆಗಮಿಸಿದ್ದರು. ಫೋನ್ ಮಾಲೀಕ ಅತ್ತ ಕೆಲಸವೂ ಇಲ್ಲದೆ ಇತ್ತ ಫೋನ್ ಕೂಡ ಇಲ್ಲದೆ ಬೇಸರಗೊಂಡಿದ್ದ. ಪುಡಿಯಾದ ಫೋನ್ ಮರಳಿ ಸಿಗುತ್ತಿದ್ದಂತೆ ಭಾವುಕನಾಗಿದ್ದ. ಫೋನ್ ಮರಳಿ ನೀಡಿದ್ದಕ್ಕೆ ಬರ್ಗರ್ ಕಿಂಗ್ ಸೇರಿದಂತೆ ಇತರ ತಿನಿಸು ನೀಡಿದ್ದರು. ಈ ಫೋನ್‌ನಿಂದ ಭಾಂದವ್ಯ ಬೆಳೆದಿದೆ, ಆತ್ಮೀಯತೆ ಹೆಚ್ಚಾಗಿದೆ ಎಂದು ರೆಡಿಟ್ ಬಳಕೆದಾರ ಬರೆದುಕೊಂಡಿದ್ದಾರೆ.
ನಾಲ್ಕು ವರ್ಷದಿಂದ ನಾಪತ್ತೆಯಾಗಿದ್ದ ವ್ಯಕ್ತಿ ಬೆಂಗಳೂರಿನಿಂದ ಥಾಯ್ಲೆಂಡ್‌ಗೆ ವಿಮಾನ ಹತ್ತುವಾಗ ಪತ್ತೆ!