ಬೆಂಗಳೂರು[ಮಾ.15]  ಹಲ್ಲೆಗೊಳಗಾಗಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಮಹಿಳೆಗೆ ಪೊಲೀಸ್ ಇನ್ಸ್ ಪೆಕ್ಟರ್ ಅವರೇ ರಕ್ತ ನೀಡಿ ಮಾನವೀಯತೆ ಮೆರೆದಿದ್ದಾರೆ. ಗಿರಿನಗರ ಠಾಣೆಯ ಇನ್ಸ್ ಪೆಕ್ಟರ್ ಸಿದ್ದಲಿಂಗಯ್ಯ ಮಾದರಿ ಕೆಲಸ ಮಾಡಿದ್ದಾರೆ.

ದುಷ್ಕರ್ಮಿಯೊಬ್ಬನಿಂದ ಮಾರಕಾಸ್ತ್ರಗಳಿಂದ ಹಲ್ಲೆಗೊಳಗಾಗಿದ್ದ ಶಿಕ್ಷಕಿ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದರು. ಗಾತಾಳು ತನುಜಾ ಅವರನ್ನು ಆಸ್ಪತ್ರೆಗೆ ದಾಖಲಿಸಿದಾಗ ರಕ್ತ ಅವಶ್ಯವಿತ್ತು. ಈ ವೇಳೆ ಪೊಲೀಸ್ ಅಧಿಕಾರಿಯೇ ರಕ್ತ ನೀಡಿದ್ದಾರೆ.

DCP ಅಣ್ಣಾಮಲೈ ದಿಟ್ಟ ಕ್ರಮ: ಒಂದೇ ಬಾರಿ 71 ಪೊಲೀಸ್ ಸಿಬ್ಬಂದಿ ಎತ್ತಂಗಡಿ

ಹೊಸಕೆರೆಹಳ್ಳಿಯಲ್ಲಿ ಗುರುವಾರ  ಸಂಜೆ ಶಿಕ್ಷಕಿ ಮೇಲೆ ಹಲ್ಲೆ ಮಾಡಲಾಗಿತ್ತು. ಪೊಲೀಸ್ ಅಧಿಕಾರಿಯ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದ್ದು  ದಕ್ಷಿಣ ವಿಭಾಗ ಡಿಸಿಪಿ ಅಣ್ಣಮಲೈರಿಂದ ಮೆಚ್ಚುಗೆ ಸೂಚಿಸಿದ್ದಾರೆ.