ಬೆಂಗಳೂರಿನ ಪ್ರತಿಷ್ಠಿತ ಕಂಪನಿ ಸಿಇಒ ಮೊದಲ ಬಾರಿಗೆ ಬಿಎಂಟಿಸಿ ಬಸ್ ಮೂಲಕ ಕಚೇರಿಗೆ ತೆರಳಿದ್ದಾರೆ. ಆದರೆ ಈ ಬಸ್ ಪ್ರಯಾಣ ಹಲವು ಅಚ್ಚರಿಗೆ ಕಾರಣಾಗಿದೆ. ಅಷ್ಟಕ್ಕೂ ಬೆಂಗಳೂರು ಸಿಇಒಗೆ ಸರ್ಪ್ರೈಸ್ ಕೊಟ್ಟಿದ್ದೇನು?

ಬೆಂಗಳೂರು(ಏ.03) ಬೆಂಗಳೂರಿನಲ್ಲಿ ಕಚೇರಿ ಸೇರಿದಂತೆ ದಿನ ನಿತ್ಯ ಓಡಾಡುವವರು ಬಸ್, ಮೆಟ್ರೋ, ವಾಹನಗಳನ್ನು ಬಳಸುತ್ತಾರೆ. ಈ ಪೈಕಿ ಮೆಟ್ರೋ ಇತ್ತೀಚೆಗೆ ದುಬಾರಿಯಾಗಿದೆ. ಇನ್ನು ವಾಹನದಲ್ಲಿ ಓಡಾಟ ಒತ್ತಡ ಹೆಚ್ಚಿಸುತ್ತದೆ, ಆರೋಗ್ಯ ಕೆಡಿಸುತ್ತದೆ. ಬಸ್ ಪ್ರಯಾಣ ಒಕೆ ಆದರೆ ಸಮಯ ವಿಳಂಬವಾಗುತ್ತದೆ. ಇನ್ನು ಟ್ರಾಫಿಕ್ ಕಿರಿಕಿರಿ ಜರನ್ನು ಹೈರಾಣು ಮಾಡುತ್ತದೆ. ಇದೀಗ ಬೆಂಗಳೂರಿನ ಪ್ರತಿಷ್ಠಿ ಕಂಪನಿ ಸಿಇಒ ಇದೇ ಮೊದಲ ಬಾರಿಗೆ ಬಸ್ ಮೂಲಕ ಕಚೇರಿಗೆ ತೆರಳಿದ್ದಾರೆ. ಈ ಬಸ್ ಪ್ರಯಾಣ ಬೆಂಗಳೂರು ಕಂಪನಿ ಸಿಇಒಗೆ ಅಚ್ಚರಿ ನೀಡಿದೆ. ಕಾರಣ ಏನು ಅನ್ನೋದನ್ನು ಸಿಇಒ ವಿವರಿಸಿದ್ದಾರೆ.

ಕ್ಯಾಪಿಟಲ್‌ಮೈಂಡ್ ಕಂಪನಿಯ ಸಂಸ್ಥಾಪಕ ಹಾಗೂ ಸಿಇಒ ದೀಪಕ್ ಶೆಣೈ ತಮ್ಮ ಬೆಂಗಳೂರು ಬಸ್ ಪ್ರಯಾಣದ ಕುರಿತು ಹೇಳಿಕೊಂಡಿದ್ದಾರೆ. ದೀಪಕ್ ಶೆಣೈ ಪ್ರತಿ ದಿನ ಕಚೇರಿಗೆ ನಡೆದುಕೊಂಡೇ ಹೋಗುತ್ತಾರೆ. 30 ನಿಮಿಷಕ್ಕೂ ಹೆಚ್ಚು ಸಮಯ ನಡೆದುಕೊಂಡು ಕಚೇರಿಗೆ ತೆರಳುವ ದೀಪಕ್ ಶೆಣೈಗೆ ಮೊಣಕಾಲಿನ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಬಸ್ ಮೂಲಕ ಪ್ರಯಾಣ ಮಾಡಲು ನಿರ್ಧರಿಸಿದ್ದಾರೆ. ಇದರಂತೆ ಬಿಎಂಟಿಸಿ ಬಸ್ ಹತ್ತಿ ಕೇಚರಿಗೆ ತೆರಳಿದ್ದಾರೆ.

ಆರೋಗ್ಯ ಮೊದಲೋ, ಕೆಲಸ ಮೊದಲೋ? ಆಸ್ಪತ್ರೆ ಐಸಿಯುನಿಂದ ಬೆಂಗಳೂರಿನ ಸಿಇಒ ಸಂದೇಶ

ಬಸ್ ಟಿಕೆಟ್ ಕೇವಲ 6 ರೂ
ದೀಪಕ್ ಶೆಣೈ ಮನೆಯಿಂದ ಕಚೇರಿಗೆ ತೆರಳಲು ಬಿಎಂಟಿಸಿ ಬಸ್‌ನಲ್ಲಿ ಟಿಕೆಟ್ ದರ ಕೇವಲ 6 ರೂಪಾಯಿ. ಇದು ದೀಪಕ್ ಶೆಣೈ ಅಚ್ಚರಿಗೆ ಕಾರಣವಾಗಿದೆ. ಎಲ್ಲಾ ವಸ್ತುಗಳ ಬೆಲೆ ಏರಿಕೆಯಾಗಿದೆ. 10 ರೂಪಾಯಿ ಯಾವುದೂ ಲಭ್ಯವಿಲ್ಲದ ಪರಿಸ್ಥಿತಿ ಎದುರಾಗಿದೆ. ಹೀಗಿರುವಾಗ ಬಿಎಂಟಿಸಿ ಬಸ್‌ನಲ್ಲಿ ಕೇವಲ 6 ರೂಪಾಯಿಗೆ ಕಚೇರಿಗೆ ತಲುಪಲು ಸಾಧ್ಯ ಅನ್ನೋದು ದೀಪಕ್ ಶೆಣೈಗೆ ಸರ್ಪ್ರೈಸ್ ನೀಡಿದೆ.

ನಗದು ಬೇಕಿಲ್ಲ
ದೀಪಕ್ ಶೆಣೈಗೆ ಆದ ಮೊದಲ ಅಚ್ಚರಿ ಕೇವಲ 6 ರೂಪಾಯಿ ಟಿಕೆಟ್ ದರ. ಎರಡನೇ ಎಚ್ಚರಿ ಏನೆಂದರೆ, ಬಿಎಂಟಿಸಿ ಬಸ್‌ನಲ್ಲಿ ಟಿಕೆಟ್ ಖರೀದಿಸಲು ನಗದು ಹಣ ಇರಬೇಕು ಎಂದಿಲ್ಲ. ಯುಪಿಐ ಕ್ಯೂಆರ್ ಕೋಡ್ ನೀಡಲಾಗಿದೆ. ಈ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಟಿಕೆಟ್‌ಗೆ ಹಣ ಪಾವತಿ ಮಾಡಬಹುದು. ಡಿಜಿಟಲ್ ಪೇಮೆಂಟ್ ಕಾರಣದಿಂದ ಬಸ್ ಪ್ರಯಾಣ ಮತ್ತಷ್ಟು ಸುಲಭವಾಗಿದೆ ಎಂದು ದೀಪಕ್ ಶೆಣೈ ಹೇಳಿದ್ದಾರೆ.

Scroll to load tweet…

ದೀಪಕ್ ಶೆಣೈ ಟ್ವೀಟ್‌ಗೆ ಹಲವರು ಪ್ರತಿಕ್ರಿಯಿಸಿದ್ದಾರೆ. ಕಂಪನಿ ಸಿಇಒ ಆಗಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಪ್ರೋತ್ಸಾಹಿಸುತ್ತಿರುವುದು ಹಾಗೂ ಸಾರಿಗೆಯಲ್ಲಿ ಪ್ರಯಾಣ ಮಾಡಿರುವುದೇ ಸಂತೋಷ ಎಂದು ಹಲವರು ಪ್ರತಿಕ್ರಿಯಿಸಿದ್ದರೆ. ಮತ್ತೆ ಕೆಲವರು 6 ರೂಪಾಯಿ ಅತೀ ಕಡಿಮೆ ದರ. ಬಿಎಂಟಿಸಿ ಈಗಲೂ ಬಡವರ ಸಾರಿಗೆಯಾಗಿ ಉಳಿದುಕೊಂಡಿದೆ. ಆದರೆ ಮೆಟ್ರೋ ಶ್ರೀಮಂತರ ಸಾರಿಗೆಯಾಗಿದೆ ಎಂದು ಹಲವರು ಆಕ್ರೋಶ ಹೊರಹಾಕಿದ್ದಾರೆ.

ಝೆರೋಧಾ ಖಾತೆ ಕ್ಲೋಸ್ ಮಾಡಿ, ಗ್ರಾಹಕನ ಇಮೇಲ್‌ಗೆ ನಿತಿನ್ ಕಾಮತ್ ನೀಡಿದ ಉತ್ತರವೇನು?