ನಮ್ಮ ಮೆಟ್ರೋ ಅಂಜನಾಪುರ ನಿಲ್ದಾಣಕ್ಕೆ 'ಸಿಲ್ಕ್' ಹೆಸರು!

ಯಲಚೇನಹಳ್ಳಿ-ಅಂಜನಾಪುರ ಮಾರ್ಗ ಕೊನೆಗೂ ಕಾರ್ಯಾಚರಣೆಗೆ  ಸಿದ್ಧ/ ಅಂಜನಾಪುರ ನಿಲ್ದಾಣಕ್ಕೆ ಸಿಲ್ಕ್ ಇನ್ ಸ್ಟಿಟ್ಯೂಶನ್ ನಿಲ್ದಾಣ ಎಂದು ಹೆಸರಿಡಲು ಬಿಎಂಆರ್ ಸಿಎಲ್ ನಿರ್ಧಾರ / ಹಸಿರು ಮಾರ್ಗದ ಕನಕಪುರ ರಸ್ತೆಯ ಕೊನೆಯ ನಿಲ್ದಾಣ

Bengaluru Anjanapura Metro station to be renamed as Silk Institute station

ಬೆಂಗಳೂರು(  ಡಿ. 02)  ನಮ್ಮ ಮೆಟ್ರೋ ಯೋಜನೆಯ ಬಹು ನಿರೀಕ್ಷಿತ ಯಲಚೇನಹಳ್ಳಿ-ಅಂಜನಾಪುರ ಮಾರ್ಗ ಕೊನೆಗೂ ಕಾರ್ಯಾಚರಣೆಗೆ ಸಿದ್ಧವಾಗಿದ್ದು, ಡಿಸೆಂಬರ್ ನಲ್ಲಿ ಈ ಮಾರ್ಗದಲ್ಲಿ ಮೆಟ್ರೋ ರೈಲು ಪ್ರಯಾಣಿಕರಿಗೆ ಲಭ್ಯವಾಗುತ್ತದೆ ಎನ್ನುವ ನಿರೀಕ್ಷೆ ಇದೆ. ಇದರ ನಡುವೆ ಅಂಜನಾಪುರ ನಿಲ್ದಾಣಕ್ಕೆ ನಾಮಕರಣ ಮಾಡಲಾಗಿದೆ.

ಅಂಜನಾಪುರ ನಿಲ್ದಾಣಕ್ಕೆ ಸಿಲ್ಕ್ ಇನ್ ಸ್ಟಿಟ್ಯೂಶನ್ ನಿಲ್ದಾಣ ಎಂದು ಹೆಸರಿಡಲು ಬಿಎಂಆರ್ ಸಿಎಲ್ ನಿರ್ಧಾರ ಮಾಡಿದೆ.

ಹತ್ತು ನಿಮಿಷದಲ್ಲಿ ಯಲಚೇನಹಳ್ಳಿಯಿಂದ-ಅಂಜನಾಪುರಕ್ಕೆ

ಹಸಿರು ಮಾರ್ಗದ ಕನಕಪುರ ರಸ್ತೆಯ ಕೊನೆಯ ನಿಲ್ದಾಣಕ್ಕೆ ಸಿಲ್ಕ್  ಇನ್ ಸ್ಟಿಟ್ಯೂಷನ್ ಹೆಸರಿಡಲು ತೀರ್ಮಾನ ಮಾಡಲಾಗಿದೆ ಎಂದು ಬಿಎಂಆರ್ ಸಿಎಲ್ ಮ್ಯಾನೆಜಿಂಗ್ ಡೈರೆಕ್ಟರ್ ಅಜಯ್ ಸೇಥ್ ತಿಳಿಸಿದ್ದಾರೆ.

ಕರ್ನಾಟಕ ಸ್ಟೇಟ್ ಸೆರಿಕಲ್ಚರ್ ರಿಸರ್ಚ್ ಆಂಡ್ ಡೆವಲಪ್ ಮೆಂಟ್ ಇನ್ ಸ್ಟಿಟ್ಯೂಷನ್  ಎಂದು ಹೆಸರಿಡಲಾಗುತ್ತಿದೆ.ಸೆಂಟ್ರಲ್ ಸಿಲ್ಕ್ ಬೋರ್ಡ್ ನಲ್ಲಿಯೂ ಮೆಟ್ರೋ ಹಾದುಹೋಗಲಿದ್ದು ಮುಂದಿನ ದಿನಗಳಲ್ಲಿ ಪ್ರಯಾಣಿಕರಿಗೆ ಗೊಂದಲ ಉಂಟಾಗಬಹುದು ಎಂಬ ಮಾತು ಕೇಳಿಬಂದಿದೆ.

 

Latest Videos
Follow Us:
Download App:
  • android
  • ios