ಬೆಂಗಳೂರು [ನ.12]: ತಾನು ಎಂಎಲ್‌ಎ ಮಗ ಎಂದು 26 ವರ್ಷದ ಯುವತಿಯನ್ನು ಪರಿಚಯಿಸಿಕೊಂಡು ಬಳಿಕ ಅತ್ಯಾಚಾರ ಎಸಗಿ ಕಿಡಿಗೇಡಿಯೊಬ್ಬ ಪರಾರಿಯಾಗಿರುವ ಘಟನೆ ಹಲಸೂರು ಸಮೀಪ ನಡೆದಿದೆ.

ಜಹಗೀರ್ ಅಲಿಯಾಸ್ ಕಾರ್ತಿಕ ರೆಡ್ಡಿ ಎಂಬಾತನೇ ಈ ಕೃತ್ಯ ಎಸಗಿದ್ದು, ಈ ಸಂಬಂಧ ಪಂಜಾಬ್ ಮೂಲದ ಸಂತ್ರಸ್ತೆ ಹಲಸೂರು ಠಾಣೆಗೆ ದೂರು ನೀಡಿದ್ದಾರೆ. ಎಂ.ಜಿ.ರಸ್ತೆಯಲ್ಲಿ ಸಂತ್ರಸ್ತೆಯನ್ನು ಶನಿವಾರ ರಾತ್ರಿ ಪರಿಚಯಿಸಿಕೊಂಡ ಆರೋಪಿ, ಬಳಿಕ ಆಕೆಯನ್ನು ಕಾರಿನಲ್ಲಿ ಕೂರಿಸಿಕೊಂಡು ನಗರದಲ್ಲಿ ಸುತ್ತಾಡಿಸಿದ್ದಾನೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ವೇಳೆ ತನ್ನ ತಂದೆ ಎಂಎಲ್‌ಎ, ತಾಯಿ ವೈದ್ಯೆ ಆಗಿದ್ದು, ತಾನು ಸ್ವಂತ ಉದ್ಯಮ ನಡೆಸುತ್ತಿದ್ದೇನೆ ಎಂದಿದ್ದಾನೆ. ಬಳಿಕ ಪಿಸ್ತೂಲ್ ಇದೆ ಎಂದು ಸಂತ್ರಸ್ತೆಗೆ ಬೆದರಿಸಿ ಹೋಟೆಲ್ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಿಕೊಂಡು ಆರೋಪಿ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.