ವಿಡಿಯೋ ಮಾಡ್ಸಿದ್ದು ನಾನಲ್ಲ, ಶೇರ್ ಮಾತ್ರ;ಪರಪ್ಪನ ಅಗ್ರಹಾರ ಪ್ರಕರಣದಲ್ಲಿ ನಟ ಧನ್ವೀರ್‌ಗೆ ಪೊಲೀಸ್ ಡ್ರಿಲ್, ಈ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ. ನಟ ಧನ್ವೀರ್ ಮೊಬೈಲ್ ಫೋನ್ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ್ದಾರೆ. 

ಬೆಂಗಳೂರು (ನ.10) ಪರಪ್ಪನ ಅಗ್ರಹಾರ ಜೈಲಿನಲ್ಲಿ ಉಗ್ರರು, ಖೈದಿಗಳು ಸೇರಿದಂತೆ ನಟೋರಿಯಸ್ ಕ್ರಿಮಿನಲ್‌ಗಳು ಮೊಬೈಲ್ ಬಳಕೆ ಮಾಡತ್ತಾ, ಪಾರ್ಟಿ ಮಾಡುತ್ತಾ ಕುಣಿದು ಕುಪ್ಪಳಿಸುತ್ತಿರುವ ವಿಡಿಯೋಗಳು ಬಹಿರಂಗವಾಗುತ್ತಿದ್ದಂತೆ ಅಕ್ರಮ ಬಯಲಾಗಿದೆ. ಈ ಪ್ರಕರಣ ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿದೆ. ಜೈಲಿನಲ್ಲಿ ನಡೆಯುತ್ತಿರುವ ಅಕ್ರಮಗಳು ಒಂದೊಂದಾಗಿ ಹೊರಬರುತ್ತಿದೆ. ಈ ಪ್ರಕರಣ ಸಂಬಂಧ ನಟ ಧನ್ವೀರ್ ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜೈಲಿನ ವಿಡಿಯೋಗಳನ್ನು ಷೇರ್ ಮಾಡಿದ ನಟ ಧನ್ವೀರ್ ಇದೀಗ ವಿಚಾರಣೆ ಎದುರಿಸುತ್ತಿದ್ದಾರೆ. ವಿಚಾರಣೆಯಲ್ಲಿ ಪರಪ್ಪನ ಅಗ್ರಹಾರದಲ್ಲಿ ವಿಡಿಯೋ ಮಾಡಿಸಿಲ್ಲ ಕೇವಲ ಶೇರ್ ಮಾಡಿದ್ದೇನೆ ಎಂದಿದ್ದಾರೆ.

ನಟ ಧನ್ವೀರ್ಗೆ ಮುಂದುವರೆಗೆ ಡ್ರೀಲ್

ಪರಪ್ಪನ ಅಗ್ರಹಾರ ಜೈಲಿನ ವಿಡಿಯೋಗಳು ಹಂಚಿಕೆಯಾದ ಕುರಿತು ಜೈಲು ಸೂಪರಿಡೆಂಟ್ ಮ್ಯಾಗೇರಿಯಿಂದಲೇ ಪರಪ್ಪನ ಅಗ್ರಹಾರದಿಂದಲೇ ದೂರು ನೀಡಿದ್ದಾರೆ. ಮ್ಯಾಗೇರಿ ಇದೇ ಪ್ರಕರಣದಲ್ಲಿ ಅಮಾನತುಗೊಂಡಿದ್ದಾರೆ. ಈ ಪ್ರಕರಣ ಸಂಬಂಧ ಒಟ್ಟು ಮೂರು ಎನ್.ಸಿ.ಆರ್, ಒಂದು ಎಫ್ಐಆರ್ ದಾಖಲಾಗಿದೆ . ಮುಂದಿನ ದಿನಗಳಲ್ಲಿ ಉಳಿದ ಎನ್.ಸಿ.ಆರ್ ಪ್ರಕರಣಗಳನ್ನ ಪೊಲೀಸರು ಎಫ್ಐಆರ್ ದಾಖಲಿಸಿಕೊಳ್ಳಲಿದ್ದಾರೆ. ಇದೇ ಪ್ರಕರಣದಲ್ಲಿ ಧನ್ವೀರ್‌ಗೆ ಪೊಲೀಸರು ಡ್ರಿಲ್ ಮಾಡಿದ್ದಾರೆ.

ವಿಡಿಯೋ ವೈರಲ್ ಆದ ಬಗ್ಗೆ ನಾಲ್ಕು ದೂರುಗಳು

  • 1) ಜೈಲಿನಲ್ಲಿ ಕೈದಿಗಳು ಡ್ಯಾನ್ಸ್ ವಿಡಿಯೋ ವೈರಲ್
  • 2)ಜುಹಾದ್ ಹಮೀದ್ ಶಕೀಲ್ ಮನ್ನಾ ಟೆರರಿಸ್ಟ್ ವಿಡಿಯೋ
  • 3) ಉಮೇಶ್ ರೆಡ್ಡಿ ವಿಡಿಯೋ ವೈರಲ್
  • 4) ತರುಣ್ ರಾಜ್ ವಿಡಿಯೋ ವೈರಲ್

ಡ್ಯಾನ್ಸ್ ವಿಡಿಯೋ ಸಂಬಂಧಿಸಿದಂತೆ ಧನ್ವೀರ್ ವಿಚಾರಣೆ

ಪರಪ್ಪನ ಅಗ್ರಾಹರ ಜೈಲಿನಲ್ಲಿ ಡ್ಯಾನ್ಸ್, ಪಾರ್ಟಿ ಮಾಡಿದ ವಿಡಿಯೋ ಪ್ರಕರಣ ಸಂಬಂಧ ನಟ ಧನ್ವೀರ್ ವಿಚಾರಣೆ ನಡಸೆಲಾಗಿದೆ. ಧನ್ವೀರ್ ಮೊಬೈಲ್ ನಿಂದ ವಿಡಿಯೋ ಶೇರ್ ಆಗಿದೆ ಎಂದು ತನಿಖೆ ನಡೆಸಲಾಗಿದೆ. ನಟ ಧನ್ವೀರ್ ಮೊಬೈಲ್ ಸೀಜ್ ಮಾಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಶೇರ್ ಮಾಡಿ ವಿವಾದವಾಗುತ್ತಿದ್ದಂತೆ ವಿಡಿಯೋ ಡಿಲೀಟ್ ಮಾಡಿದ್ದಾರೆ. ಹೀಗಾಗಿ ವಿಡಿಯೋ ರಿಟ್ರೀವ್‌ಗೆ ಎಫ್ಎಸ್ಎಲ್ ಕಳುಹಿಸಿದ್ದಾರೆ.

ಇದು ಜೈಲಿನ ವಿಡಿಯೋಗಳು, ಯಾವಾಗ ವಿಡಿಯೋ ಚಿತ್ರೀಕರಣ ಮಾಡಲಾಗಿದೆ. ಎಲೆಕ್ಟ್ರಾನಿಕ್ ಸಿಟಿ ಡಿಸಿಪಿ ನಾರಾಯಣ್ ರಿಂದ ಧನ್ವೀರ್ ವಿಚಾರಣೆ ನಡೆಸಿದ್ದಾರೆ.