ಆನೇಕಲ್ (ನ.12): ಬೋರ್‌ವೆಲ್ ಕೊರೆಸಲು ನೀಡಿದ್ದ ಸಾಮಗ್ರಿಗಳನ್ನು ತನ್ನ ಗೋಡೌನ್‌ನಲ್ಲಿ ಬಚ್ಚಿಟ್ಟಿದ್ದನ್ನು ಪತ್ತೆ ಮಾಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷೆಯನ್ನು ಸದಸ್ಯನೋರ್ವ ನಿಂದಿಸಿದ ಘಟನೆ ಆನೇಕಲ್‌ನ ಹುಲಿಮಂಗಲ ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ.

ತನ್ನ ವಾರ್ಡ್‌ಗೆ ಅನುದಾನ ನೀಡುತ್ತಿಲ್ಲ ಎಂದು ಗ್ರಾಪಂ ಸದಸ್ಯ ಗಜೇಂದ್ರ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಅಧ್ಯಕ್ಷೆ ಸರಸ್ವತಮ್ಮ, ಅಧಿಕಾರಿಗಳು, ಕೆಲ ಸದಸ್ಯರೊಂದಿಗೆ ಮಾರಗೊಂಡನಹಳ್ಳಿಗೆ ಭೇಟಿ ನೀಡಿದ್ದರು. ಈ ವೇಳೆ ನೀರಿನ ಸಮಸ್ಯೆ ಬಗ್ಗೆ ಗ್ರಾಮಸ್ಥರು ದೂರಿದರು.

ಹೆಚ್ಚಿನ ಜಿಲ್ಲಾಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ವೇಳೆ ಹಾಜರಿದ್ದ ಪಿಡಿಒ ಜಯರಾಂ, ಕೊಳವೆ ಬಾವಿಗೆ ಬೇಕಾದ ಸಾಮಗ್ರಿಗಳನ್ನು ನೀಡಲಾಗಿದೆ ಎಂದು ತಿಳಿಸಿದರು. ಈ ಬಗ್ಗೆ ವಾಟರ್‌ಮ್ಯಾನ್‌ನನ್ನು ಪ್ರಶ್ನಿಸಿ ದಾಗ, ಸದಸ್ಯ ಗಜೇಂದ್ರ ಅವರ ಗೋಡೌನ್‌ನಲ್ಲಿ ಸಾಮಗ್ರಿಗಳಿವೆ ಎಂದು ತಿಳಿಸಿದ. ಗೋಡೌನ್ ಅನ್ನು ಪರಿಶೀಲಿಸಿದಾಗ ಸಾಮಗ್ರಿಗಳು ಪತ್ತೆ ಆದವು. ಗ್ರಾಮ ಸ್ಥರ ಮುಂದೆ ಮಾನ ಹರಾಜಾಗುತ್ತಿದ್ದಂತೆ ಕೆರಳಿದ ಗಜೇಂದ್ರ, ಅಧ್ಯಕ್ಷೆ, ಆಕೆಯ ಪತಿಯನ್ನು ನಿಂದಿಸಿದರು. 

ಹಿತವಚನ ಹೇಳಿದರೂ ಗಜೇಂದ್ರ ಕೂಗಾಡಿದ್ದಾರೆ. ಇದರಿಂದ ಕೆಲ ಕಾಲ ಮಾತಿನ ಚಕಮಕಿ ನಡೆಯಿತು. ಅಧ್ಯಕ್ಷೆ ಹೆಬ್ಬಗೋಡಿ ಪೊಲೀಸರಿಗೆ ದೂರು ನೀಡಿದ್ದಾರೆ.