ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ)ದಲ್ಲಿ ಖಾಲಿ ಇರುವ 5280 ಸರ್ಕಲ್ ಬೇಸ್ಡ್ ಆಫೀಸರ್ ಹುದ್ದೆಯ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದ್ದು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 5280 ಸರ್ಕಲ್ ಬೇಸ್ಡ್ ಆಫೀಸರ್ ಹುದ್ದೆಗಳು ಖಾಲಿ ಇದ್ದು, ಹುದ್ದೆಯ ನೇಮಕಾತಿಗಾಗಿ ಅಭ್ಯರ್ಥಿಗಳು ಆನ್‌ಲೈನ್ ಪರೀಕ್ಷೆ ಮತ್ತು ಸಂದರ್ಶನದಲ್ಲಿ ಪಡೆದ ಅಂಕಗಳನ್ನು ಪರಿಗಣಿಸಿ ಅಂತಿಮ ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ)ದಲ್ಲಿ ಖಾಲಿ ಇರುವ 5280 ಸರ್ಕಲ್ ಬೇಸ್ಡ್ ಆಫೀಸರ್ ಹುದ್ದೆಯ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದ್ದು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಹುದ್ದೆಯ ವಿವರ: ಸರ್ಕಲ್ ಬೇಸ್ಡ್ ಆಫೀಸರ್ - 5280 ಹುದ್ದೆಗಳು

ಈ ಮೇಲಿನ ಹುದ್ದೆಗಳು ಭಾರತದಾದ್ಯಂತ ಇರುವ ಎಲ್ಲಾ ರಾಜ್ಯಗಳ ಎಸ್‌ ಬಿ ಐ ಶಾಖೆ/ವೃತ್ತಗಳಲ್ಲಿ ಹಂಚಿಕೆಯಾಗಿದ್ದು, ಅವುಗಳಲ್ಲಿ ಅಹಮದಾಬಾದ್- 430, ಅಮರಾವತಿ- 400, ಬೆಂಗಳೂರು- 280, ಭೋಪಾಲ್- 450, ಭುವನೇಶ್ವರ- 250 , ಚಂಡೀಗಢ- 300, ಚೆನ್ನೈ-125 , ಈಶಾನ್ಯ-250 , ಹೈದರಾಬಾದ್- 425 , ಜೈಪುರ-500 , ಲಕ್ನೋ-600, ಕೋಲ್ಕತ್ತಾ-230 , ಮಹಾರಾಷ್ಟ್ರ-300, ಮುಂಬೈ ಮೆಟ್ರೋ -90, ನವದೆಹಲಿ- 300, ತಿರುವನಂತಪುರಂ-250 ಹುದ್ದೆಗಳು ಖಾಲಿ ಇವೆ.

ವಯಸ್ಸಿನ ಮಿತಿ (31-10-2023 ರಂತೆ)

ಕನಿಷ್ಠ ವಯಸ್ಸಿನ ಮಿತಿ: 21 ವರ್ಷಗಳು

ಗರಿಷ್ಠ ವಯಸ್ಸಿನ ಮಿತಿ: 30 ವರ್ಷಗಳು

ಪ್ರಮುಖ ದಿನಾಂಕಗಳು

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಮತ್ತು ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: 12-12-2023

ಆನ್‌ಲೈನ್ ಪರೀಕ್ಷೆಗಾಗಿ ಕರೆ ಪತ್ರವನ್ನು ಡೌನ್‌ಲೋಡ್ ಮಾಡಲು ದಿನಾಂಕ: ಜನವರಿ 2024 (ತಾತ್ಕಾಲಿಕ)

ಆನ್‌ಲೈನ್ ಪರೀಕ್ಷೆಯ ದಿನಾಂಕ: ಜನವರಿ 2024 (ತಾತ್ಕಾಲಿಕ)

ಅರ್ಜಿ ಶುಲ್ಕಎಷ್ಟು?

ಸಾಮಾನ್ಯ/ ಓಬಿಸಿ/ಇಡ್ಬ್ಲೂಎಸ್‌ ಅಭ್ಯರ್ಥಿಗಳಿಗೆ : ರೂ. 750

ಎಸ್‌ ಸಿ/ ಎಸ್‌ ಟಿ/ ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ : ಅರ್ಜಿ ಶುಲ್ಕ ಇಲ್ಲ

ಶೈಕ್ಷಣಿಕ ಅರ್ಹತೆಗಳು

1.ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವಿ ಅಥವಾ ತತ್ಸಮಾನ ಅರ್ಹತೆಯನ್ನು ಹೊಂದಿರಬೇಕು ಅಥವಾ ಕೇಂದ್ರ ಸರ್ಕಾರದಿಂದ ಗುರುತಿಸಲ್ಪಟ್ಟ ಇಂಟಿಗ್ರೇಟೆಡ್ ಡ್ಯುಯಲ್ ಡಿಗ್ರಿ ಸೇರಿದಂತೆ ವೈದ್ಯಕೀಯ, ಇಂಜಿನಿಯರಿಂಗ್, ಚಾರ್ಟರ್ಡ್ ಅಕೌಂಟೆಂಟ್, ಮುಂತಾದ ಅರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಗಳು ಸಹ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

2. ಸ್ಥಳೀಯ ಭಾಷೆ: ನಿರ್ದಿಷ್ಟ ವೃತ್ತದ ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಅಲ್ಲಿಯ ಸ್ಥಳೀಯ ಭಾಷೆಯನ್ನು ಓದುವುದು, ಬರೆಯುವುದು ಮತ್ತು ಅರ್ಥಮಾಡಿಕೊಳ್ಳುವುದರಲ್ಲಿ ಪ್ರವೀಣರಾಗಿರಬೇಕು.

ಆಯ್ಕೆ ವಿಧಾನ ಹೇಗೆ?

ಆಯ್ಕೆ ಪ್ರಕ್ರಿಯೆಯು ಆನ್‌ಲೈನ್ ಪರೀಕ್ಷೆ, ಸ್ಕ್ರೀನಿಂಗ್ ಮತ್ತು ಸಂದರ್ಶನವನ್ನು ಒಳಗೊಂಡಿರುತ್ತದೆ.

(ಎ) ಆನ್‌ಲೈನ್ ಪರೀಕ್ಷೆ: ಆನ್‌ಲೈನ್ ಪರೀಕ್ಷೆಯು 120 ಅಂಕಗಳಿಗೆ ಆಬ್ಜೆಕ್ಟಿವ್ ಮತ್ತು50 ಅಂಕಗಳಿಗೆ ವಿವರಣಾತ್ಮಕ ಪರೀಕ್ಷೆಗಳನ್ನು ಒಳಗೊಂಡಿರುತ್ತದೆ. ಅಭ್ಯರ್ಥಿಗಳು ಉತ್ತರಗಳನ್ನು ಕಂಪ್ಯೂಟರ್ ಮೂಲಕವೇ ಟೈಪ್ ಮಾಡಬೇಕು.

ಆಬ್ಜೆಕ್ಟಿವ್ ಪರೀಕ್ಷೆಯ ವಿವರ: ವಸ್ತುನಿಷ್ಠ ಪರೀಕ್ಷೆಯು ಇಂಗ್ಲೀಷ್ ಭಾಷೆ , ಬ್ಯಾಂಕಿಂಗ್ ಜ್ಞಾನ, ಸಾಮಾನ್ಯ ಅರಿವು/ ಆರ್ಥಿಕತೆ , ಕಂಪ್ಯೂಟರ್ ಆಪ್ಟಿಟ್ಯೂಡ್ ವಿಷಯಕ್ಕೆ ಸಂಬಂಧಿಸಿದಂತೆ 2 ಗಂಟೆ ಅವಧಿಗೆ ನಡೆಯುತ್ತದೆ. ಪ್ರತಿ ಪ್ರಶ್ನೆಗೆ ಒಂದು ಅಂಕ ನಿಗದಿಪಡಿಸಲಾಗಿದೆ.

ವಿವರಣಾತ್ಮಕ ಪರೀಕ್ಷೆ: ಇದು ಇಂಗ್ಲಿಷ್ ಭಾಷೆಯ ಪರೀಕ್ಷೆಯಾಗಿದ್ದು, ಪತ್ರ ಬರವಣಿಗೆ ಮತ್ತು ಪ್ರಬಂಧ ಬರವಣಿಗೆಗೆ ಸಂಬಂಧಿಸಿದಂತೆ ಎರಡು ಪ್ರಶ್ನೆಗಳೊಂದಿಗೆ 30 ನಿಮಿಷಗಳ ಅವಧಿಯಲ್ಲಿ ಒಟ್ಟು 50 ಅಂಕಗಳಿಗೆ ನಡೆಯಲಿದೆ.

(ಬಿ) ಸ್ಕ್ರೀನಿಂಗ್: ಆನ್‌ಲೈನ್ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳ ಆನ್‌ಲೈನ್ ಅರ್ಜಿ ಮತ್ತು ದಾಖಲೆಗಳನ್ನು ಸ್ಕ್ರೀನಿಂಗ್ ಕಮಿಟಿಯು ಪರಿಶೀಲಿಸಿ ತಾತ್ಕಾಲಿಕ ಮೆರಿಟ್‌ ಪಟ್ಟಿಯನ್ನು ಸಿದ್ಧಡಿಸಲಾಗುತ್ತದೆ.

(ಸಿ) ಸಂದರ್ಶನ: ತಾತ್ಕಾಲಿಕ ಮೆರಿಟ್‌ ಪಟ್ಟಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ 50 ಅಂಕಗಳಿಗೆ ಸಂದರ್ಶನವನ್ನು ನಡೆಸಲಾಗುತ್ತದೆ.

ಅಂತಿಮ ಆಯ್ಕೆ

ಅಭ್ಯರ್ಥಿಗಳು ಆನ್‌ಲೈನ್ ಪರೀಕ್ಷೆ (ಆಬ್ಜೆಕ್ಟಿವ್ ಟೆಸ್ಟ್ ಮತ್ತು ಡಿಸ್ಕ್ರಿಪ್ಟಿವ್ ಟೆಸ್ಟ್) ಮತ್ತು ಸಂದರ್ಶನದಲ್ಲಿ ಪಡೆದ ಅಂಕಗಳನ್ನು ಅನುಕ್ರಮವಾಗಿ 75:25 ಪ್ರತಿಶತ ಅಂಕಗಳೊಂದಿಗೆ ಅಂತಿಮ ಮೆರಿಟ್ ಪಟ್ಟಿಯನ್ನು ತಯಾರಿಸಲಾಗುತ್ತದೆ.

ಪರೀಕ್ಷೆ ಪೂರ್ವ ತರಬೇತಿ

ಎಸ್‌ ಸಿ/ ಎಸ್‌ ಟಿ/ ಓಬಿಸಿ/ ಧಾರ್ಮಿಕ ಅಲ್ಪಸಂಖ್ಯಾತ ವರ್ಗದವರಿಗೆ ಬ್ಯಾಂಕ್‌ ಪರೀಕ್ಷೆ ಪೂರ್ವ ತರಬೇತಿಯನ್ನು ಹಮ್ಮಿಕೊಂಡಿದ್ದು, ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಅಪ್ಲಿಕೇಶನ್‌ನಲ್ಲಿ ಸಂಬಂಧಿತ ಕಾಲಂ ಭರ್ತಿ ಮಾಡಬಹುದಾಗಿದೆ. ನಂತರ ತರಬೇತಿಗೆ ಆಯ್ಕೆಯಾದ ಅರ್ಹ ಅಭ್ಯರ್ಥಿಗಳನ್ನು ಬ್ಯಾಂಕಿನ ವೆಬ್‌ಸೈಟ್‌ ನಲ್ಲಿ ಪ್ರಕಟಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಬ್ಯಾಂಕಿನ ವೆಬ್‌ಸೈಟ್‌ https://www.onlinesbi.sbi/ ವೀಕ್ಷಿಸಬಹುದು.